ETV Bharat / bharat

ಅಣೆಕಟ್ಟೆಯಿಂದ ಹೊರಬಿಟ್ಟ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋದ ಪತಿ: ಪತ್ನಿಯಿಂದ ಹುಡುಕಾಟ

ಡ್ಯಾಂನಲ್ಲಿ ಯಾವುದೇ ಪೂರ್ವ ಸೂಚನೆ ಇಲ್ಲದೇ ಹೊರಬಿಟ್ಟ ನೀರಿನ ಪ್ರವಾಹದಲ್ಲಿ ತನ್ನ ಪತಿ ಕಾಣೆಯಾಗಿದ್ದು, ಆತನ ಸಾವಿಗೆ ಸರ್ಕಾರವೇ ಕಾರಣ ಎಂದು ಕಡಪದಲ್ಲಿ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

Man washed away in floodwaters of Kadapa
ಕಡಪದಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿ
author img

By

Published : Nov 25, 2021, 1:23 PM IST

ಕಡಪ, ಆಂಧ್ರ ಪ್ರದೇಶ : ಮಹಿಳೆಯೊಬ್ಬರು ತನ್ನ ಕಣ್ಣೆದುರೇ ತನ್ನ ಪತಿಯನ್ನು ಕಳೆದುಕೊಂಡ ಘಟನೆ ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ನಡೆದಿದೆ. ಅಣೆಕಟ್ಟಿನಿಂದ ಬಿಟ್ಟ ಭಾರಿ ನೀರಿನಲ್ಲಿ ಆಕೆಯ ಪತಿ ಕೊಚ್ಚಿ ಹೋಗಿದ್ದಾರೆ.

ಕಡಪ ಜಿಲ್ಲೆಯ ರಾಜಂಪೇಟೆ ಮಂಡಲದ ಗುಂಡ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಡ್ಯಾಂನಲ್ಲಿ ಯಾವುದೇ ಪೂರ್ವ ಸೂಚನೆ ಇಲ್ಲದೇ ನೀರು ಬಿಟ್ಟ ಕಾರಣದಿಂದ ಆಯೇಷಾ ಎಂಬಾಕೆಯ ಪತಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಮಹಿಳೆ ದೂರಿದ್ದಾರೆ.

ಡ್ಯಾಮ್​ನಿಂದ ನೀರು ಬಿಡುವ ಮುನ್ನ ಜನತೆಗೆ ಸರ್ಕಾರ ಎಚ್ಚರಿಕೆ ನೀಡಬೇಕು. ನನ್ನ ಪತಿಯ ಸಾವಿಗೆ ಸರ್ಕಾರವೇ ಕಾರಣ. ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಮತ ಕೇಳಲು ಬರುತ್ತಾರೆ ಮತ್ತು ನಮಗೆ ಸಹಾಯ ಬೇಕಾದಾಗ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಆಯೇಷಾ ಆರೋಪಿಸಿದ್ದಾರೆ.

ಘಟನೆ ನಡೆದ ನಂತರ ಅಯೇಷಾ ಹಾಗೂ ಕುಟುಂಬಸ್ಥರು, ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಪೊಲೀಸರಿಗೆ ಕರೆ ಮಾಡಿದರೆ ಅವರ ಫೋನ್ ಸ್ವಿಚ್ಡ್​​ ಆಫ್ ಬರುತ್ತಿದೆ. ಎಂದು ಮಹಿಳೆ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ದಂಪತಿ, ಇಬ್ಬರು ಮಕ್ಕಳ ಬರ್ಬರ ಹತ್ಯೆ.. ಬೆಚ್ಚಿಬಿದ್ದ ಉತ್ತರ ಪ್ರದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.