ನವದೆಹಲಿ: ಸಾರ್ವಜನಿಕ ಆಸ್ತಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಎಷ್ಟೇ ಅರಿವು ಮೂಡಿಸಿದರೂ ಕೆಲ ಬುದ್ಧಿಗೇಡಿಗಳು ಮಾತ್ರ ಇದಕ್ಕೆ ಸೊಪ್ಪು ಹಾಕುವುದಿಲ್ಲ. ಕಂಠಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ ದೆಹಲಿ ಮೆಟ್ರೋ ನಿಲ್ದಾಣದ ಪ್ಲಾಟ್ ಫಾರ್ಮ್ನ ಹಳಿಗಳ ಮೇಲೆ ಜನರು ಇರುವಾಗಲೇ ಮೂತ್ರ ವಿಸರ್ಜನೆ ಮಾಡಿದ ಅಸಹ್ಯಕರ ಘಟನೆ ಬೆಳಕಿಗೆ ಬಂದಿದೆ. ಇದನ್ನು ಮತ್ತೊಬ್ಬರು ವಿಡಿಯೋ ಮಾಡಿದ್ದು, ವೈರಲ್ ಆಗಿದೆ.
-
@CMODelhi @OfficialDMRC
— Sanjeev Babbar (@SanjeevBabbar) October 29, 2022 " class="align-text-top noRightClick twitterSection" data="
Maybe this Happened first time in Delhi Metro.
Just received a video on wtsapp. Sharing with you pic.twitter.com/iJiWUnBpQy
">@CMODelhi @OfficialDMRC
— Sanjeev Babbar (@SanjeevBabbar) October 29, 2022
Maybe this Happened first time in Delhi Metro.
Just received a video on wtsapp. Sharing with you pic.twitter.com/iJiWUnBpQy@CMODelhi @OfficialDMRC
— Sanjeev Babbar (@SanjeevBabbar) October 29, 2022
Maybe this Happened first time in Delhi Metro.
Just received a video on wtsapp. Sharing with you pic.twitter.com/iJiWUnBpQy
ವಿಡಿಯೋದಲ್ಲಿ ಕಾಣುವಂತೆ ಅಮಲಿನಲ್ಲಿದ್ದ ವ್ಯಕ್ತಿ ಮೆಟ್ರೋ ನಿಲ್ದಾಣವೊಂದರಲ್ಲಿ ಹಾಕಲಾದ ಹಳದಿ ಗೆರೆಯನ್ನು ದಾಟಿ ಹಳಿಗಳ ಮೇಲೆ ಮೂತ್ರವಿಸರ್ಜನೆ ಮಾಡುತ್ತಿದ್ದು, ಮತ್ತೊಬ್ಬರು ವಿಡಿಯೋ ಮಾಡುತ್ತಾ ಇದನ್ನು ಪ್ರಶ್ನಿಸಿದ್ದಾರೆ. ಆಗ ಆತ "ಕುಡಿದಿದ್ದು ಹೆಚ್ಚಾಗಿದೆ, ಮುಗಿಯಿತು" ಎನ್ನುತ್ತಾ ತನ್ನ ಮಹತ್ಕಾರ್ಯವನ್ನು ಮುಂದುವರಿಸಿದ್ದಾನೆ.
ಈ ಘಟನೆ ಅಕ್ಟೋಬರ್ 29 ರಂದು ನಡೆದಿದೆ ಎನ್ನಲಾಗಿದ್ದು, ಸಂಜೀವ್ ಬಬ್ಬರ್ ಎಂಬುವವರು ತಮ್ಮ ಟ್ವಿಟರ್ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ಇದನ್ನು ನಾನು ಈಗಷ್ಟೇ ವಾಟ್ಸ್ಆ್ಯಪ್ ಮೂಲಕ ಪಡೆದಿದ್ದು, ಇದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
-
Malviya Nagar metro station
— Sanjeev Babbar (@SanjeevBabbar) October 29, 2022 " class="align-text-top noRightClick twitterSection" data="
">Malviya Nagar metro station
— Sanjeev Babbar (@SanjeevBabbar) October 29, 2022Malviya Nagar metro station
— Sanjeev Babbar (@SanjeevBabbar) October 29, 2022
ಪ್ರತಿಕ್ರಿಯಿಸಿದ ದೆಹಲಿ ಮೆಟ್ರೋ: ಕುಡುಕನ ಅಸಹ್ಯಕರ ವಿಡಿಯೋವನ್ನು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಮತ್ತು ಮುಖ್ಯಮಂತ್ರಿ ಕಚೇರಿಗೆ ಟ್ಯಾಗ್ ಮಾಡಲಾಗಿತ್ತು. ಇದನ್ನು ಗಮಿನಿಸಿ ಪ್ರತಿಕ್ರಿಯಿಸಿರುವ ದೆಹಲಿ ಮೆಟ್ರೋ ಅಧಿಕಾರಿಗಳು, ಘಟನೆಯ ಸ್ಥಳದ ಬಗ್ಗೆ ಕೇಳಿದ್ದಾರೆ. ಇದಕ್ಕೆ ಬಬ್ಬರ್ ಅವರು "ಮಾಳವೀಯ ನಗರ ಮೆಟ್ರೋ ನಿಲ್ದಾಣ" ಎಂದು ಉತ್ತರಿಸಿದ್ದಾರೆ.
ಘಟನೆಯನ್ನು ಬೆಳಕಿಗೆ ತಂದಿದ್ದಕ್ಕೆ ಸಂಜಯ್ ಬಬ್ಬರ್ ಅವರಿಗೆ ಧನ್ಯವಾದ ಸಲ್ಲಿಸಿರುವ ಅಧಿಕಾರಿಗಳು, ಇಂತಹ ಘಟನೆಗಳು ಕಂಡುಬಂದಲ್ಲಿ 24x7 ಸಹಾಯವಾಣಿಯಾದ 155370 ಅಥವಾ ಭದ್ರತಾ ಸಹಾಯವಾಣಿ ಸಂಖ್ಯೆ 155655 ಅನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದ್ದಾರೆ.
ಓದಿ: ಮಹಿಳೆಗೆ ಗರ್ಭ ಧರಿಸುವ, ನಿರಾಕರಿಸುವ ಹಕ್ಕಿದೆ: 26 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಿದ ಹೈಕೋರ್ಟ್