ಪುಲ್ವಾಮಾ(ಜಮ್ಮು ಕಾಶ್ಮೀರ): ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಬೆಲೋ ಪ್ರದೇಶದಲ್ಲಿ ಇಂದು ವ್ಯಕ್ತಿಯೊಬ್ಬ ಸಿಆರ್‌ಪಿಎಫ್ ಅಧಿಕಾರಿಯ ಶಸ್ತ್ರಾಸ್ತ್ರ ಕಸಿದು ಪರಾರಿಯಾಗಿದ್ದಾನೆ. ಸೇನೆಯು ತಕ್ಷಣವೇ ಇಡೀ ಪ್ರದೇಶವನ್ನು ಸುತ್ತುವರಿದು ಪರಿಶೀಲನೆ ನಡೆಸುತ್ತಿದೆ.
ಮಾಹಿತಿ ಪ್ರಕಾರ, ಸಿಆರ್‌ಪಿಎಫ್ 183 ಬೆಟಾಲಿಯನ್ ಪುಲ್ವಾಮಾದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಬಶೀರ್ ಅಹ್ಮದ್ ಗನಿಯ ಮಗ ಇರ್ಫಾನ್ ಗನಿ ಎಂದು ಗುರುತಿಸಲಾದ ವ್ಯಕ್ತಿ ಆಸಿ ಬಲೀರ್ ಅವರ ಶಸ್ತ್ರಾಸ್ತ್ರವನ್ನು ಕಸಿದುಕೊಂಡು ಸ್ಥಳದಿಂದ ಓಡಿಹೋಗಿದ್ದಾನೆ. ಸದ್ಯ 44RR, CRPF ಮತ್ತು SOG ಇಡೀ ಪ್ರದೇಶವನ್ನು ಸುತ್ತುವರಿದು ಪರಿಶೀಲನೆ ನಡೆಸುತ್ತಿದೆ.
ಕಾಶ್ಮೀರ ವಿಭಾಗವು 2022ರಲ್ಲಿ 93 ಯಶಸ್ವಿ ಎನ್‌ಕೌಂಟರ್‌ಗಳಿಗೆ ಸಾಕ್ಷಿಯಾಗಿದೆ. 172 ಉಗ್ರರನ್ನು ಬೇಟೆಯಾಡಲಾಗಿದೆ. ಅಲ್ಲದೆ ಅವರಿಂದ 360 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 2022ರಲ್ಲಿ ಕಾಶ್ಮೀರದಲ್ಲಿ ಒಟ್ಟು 93 ಯಶಸ್ವಿ ಎನ್‌ಕೌಂಟರ್‌ಗಳು ನಡೆದಿದ್ದು, ಇದರಲ್ಲಿ 42 ವಿದೇಶಿ ಉಗ್ರರು ಸೇರಿದಂತೆ 172 ಉಗ್ರರು ಹತರಾಗಿದ್ದಾರೆ ಎಂದು ಕಾಶ್ಮೀರ ವಲಯ ಹೆಚ್ಚುವರಿ ಡಿಜಿಪಿ ವಿಜಯ್ ಕುಮಾರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆಯಲ್ಲಿ ಸ್ನೇಹಿತರ ನಡುವೆ ಗಲಾಟೆ: ಯುವಕನಿಗೆ ಚಾಕು ಇರಿತ