ಹರಿದ್ವಾರ (ಉತ್ತರಾಖಂಡ): ಎರಡು ವರ್ಷದ ಮಗಳನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆಗೆ ಮುಂದಾದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮಂಗಳವಾರ ಸಿದ್ಕುಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಆರೋಪಿಯ ಪತ್ನಿ ಮುಸ್ಲಿಂ ಧರ್ಮಕ್ಕೆ ಸೇರಿದ್ದು, ಮಗಳನ್ನು ಮತಾಂತರಿಸುವಂತೆ ಒತ್ತಾಯಿಸುತ್ತಿದ್ದಳು. ಆಕೆ ತವರು ಮನೆಗೆ ಹೋದಾಗ ಆರೋಪಿಯು ಮಗಳ ಕತ್ತನ್ನು ಬ್ಲೇಡ್ನಿಂದ ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಪೊದೆಗೆಸೆದಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ. ಆರೋಪಿಯನ್ನು ಕುಲದೀಪ್ ಎಂದು ಗುರುತಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. "ನಾನು ಬಿಜ್ನೋರ್ ನಿವಾಸಿ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದೇನೆ. ಅವರು ನಮ್ಮ ಮಗಳ ಧರ್ಮವನ್ನು ಮತಾಂತರಿಸುವಂತೆ ಒತ್ತಾಯಿಸುತ್ತಿದ್ದಾರೆ. ನಮ್ಮ ನಡುವೆ ಸಾಕಷ್ಟು ಜಗಳವಾಗಿದೆ. ಮಂಗಳವಾರ, ಆಕೆ ತನ್ನ ತವರು ಮನೆ ಬಿಜ್ನೋರ್ಗೆ ಹೋದಾಗ, ನಾನು ಮಗಳನ್ನು ಕೊಂದಿದ್ದೇನೆ" ಎಂದು ಆರೋಪಿಗೆ ತನಿಖೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.
ಇದನ್ನೂ ಓದಿ: ಹೆಣ್ಣು ಮಗುವನ್ನು ನೆಲಕ್ಕೆ ಅಪ್ಪಳಿಸಿ ಕೊಲೆ ಮಾಡಿದ ತಂದೆ: ಬಳಿಕ ಆತ್ಮಹತ್ಯೆ!