ಉದಯಪುರ (ರಾಜಸ್ಥಾನ) : ತಂದೆಯೊಬ್ಬರು ಶನಿವಾರ ತನ್ನ ಎರಡು ವರ್ಷದ ಮಗಳ ಕತ್ತು ಸೀಳಿ, ನಂತರ ಶವವನ್ನು ಬಟ್ಟೆಯಲ್ಲಿ ಸುತ್ತಿ ಸಮೀಪದ ಕೆರೆಗೆ ಎಸೆದಿದ್ದಾರೆ. ಉದಯಪುರದ ಗೋಗುಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ಮಗುವಿನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ತನ್ನ ಮಗುವಿನ ಸಾವಿನ ವಿಷಯ ತಿಳಿದ ಆರೋಪಿಯ ಪತ್ನಿ ಜೋರಾಗಿ ಕಿರುಚಿಕೊಂಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಮಗುವಿನ ತಾಯಿ ಜೋರಾಗಿ ಅಳಲು ಶುರು ಮಾಡಿದ್ದರಿಂದ ನೆರೆಹೊರೆಯವರು ಮನೆಗೆ ಕೂಡಲೇ ಧಾವಿಸಿದ್ದರು. ಆದರೆ ಅಷ್ಟರಲ್ಲಿ ಮಗುವಿನ ತಂದೆ ಪರಾರಿಯಾಗಿದ್ದ.
ಇದನ್ನೂ ಓದಿ : ಭೂ ವಿವಾದದಲ್ಲಿ ಎಂಟು ವರ್ಷದ ಬಾಲಕಿಗೆ ಗುಂಡಿಕ್ಕಿ ಕೊಲೆ
ಆರೋಪಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿ: ನೆರೆಹೊರೆಯವರು ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಘಟನೆ ಕುರಿತು ಪೊಲೀಸರು ತನಿಖೆಯನ್ನೂ ಆರಂಭಿಸಿದ್ದಾರೆ. ಮಗುವಿನ ಮೃತದೇಹವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ನಂತರ ಸಮೀಪದ ಅರಣ್ಯದಲ್ಲಿ ಆರೋಪಿಗಾಗಿ ಹುಡುಕಾಟ ನಡೆಸಿದ್ದು, ಆತನನ್ನು ಬಂಧಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಮೋಟಾರ್ ರಿಪೇರಿ ಮಾಡುವ ವೇಳೆ ಜಾರಿ ಬಿದ್ದು ಇಬ್ಬರು ಕಾರ್ಮಿಕರ ಸಾವು!
ಮಾನಸಿಕ ಅಸ್ವಸ್ಥನಾಗಿದ್ದ ತಂದೆ: ಗೋಗುಂದ ಪೊಲೀಸ್ ಠಾಣಾಧಿಕಾರಿ ಅನಿಲ್ ಪ್ರಕಾರ, ಆರೋಪಿ ತಂದೆ ಶನಿವಾರ ಮಗಳನ್ನು ತಮ್ಮ ನಿವಾಸದಿಂದ ಕರೆದೊಯ್ದು ನಂತರ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಸಮೀಪದ ಕೆರೆಯಲ್ಲಿ ಎಸೆದಿದ್ದಾರೆ. ಪತ್ನಿ ತನ್ನ ಮಗು ಮತ್ತು ಪತಿಗಾಗಿ ಹುಡುಕಾಡಿದರೂ ಶನಿವಾರವೂ ಪತ್ತೆಯಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೇ ಮಗಳನ್ನು ಕೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ತಂದೆ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಕೆಲವು ಮೂಲಗಳು ಸೂಚಿಸುತ್ತವೆ.
ಇದನ್ನೂ ಓದಿ : ಬೀದಿ ನಾಯಿ ಮೇಲೆ ಅತ್ಯಾಚಾರ: ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು
ಮಗುವಿನ ಶವ ಕೆರೆಗೆ ಎಸೆದ ಪೋಷಕರು: ಕಳೆದ ವಾರ ಬಿಹಾರದ ಗೋಪಾಲ್ಗಂಜ್ನಲ್ಲಿ ಸ್ವಲ್ಪಮಟ್ಟಿಗೆ ಇದೇ ರೀತಿಯ ಘಟನೆ ನಡೆದಿದ್ದು, ಕುಡಿದ ಅಮಲಿನಲ್ಲಿ ತಂದೆ ತನ್ನ 12 ವರ್ಷದ ಮಗನನ್ನು ಉದ್ದೇಶಪೂರ್ವಕವಾಗಿ ಕತ್ತು ಹಿಸುಕಿ ಕೊಂದಿರುವ ಪ್ರಕರಣ ಬೆಳಕಿಗೆ ಬಂದಿದೆ. ಇತರೆ ಮಕ್ಕಳನ್ನು ಥಳಿಸಿದ್ದಕ್ಕೆ ಪಾಠ ಕಲಿಸುವ ಉದ್ದೇಶದಿಂದ ಕೊಲೆ ಮಾಡಲಾಗಿದೆ ಎಂಬುದು ತಿಳಿದುಬಂದಿದೆ. ತಂದೆ, ಪತ್ನಿಯ ನೆರವಿನೊಂದಿಗೆ ಮಗುವಿನ ಶವವನ್ನು ಕೆರೆಯಲ್ಲಿ ಎಸೆಯುವ ಮೂಲಕ ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ. ದಂಪತಿಗಳು ತಮ್ಮ ಮಗು ನೀರಿನಲ್ಲಿ ಮುಳುಗಿ ಸತ್ತಿದೆ ಎಂದು ನಂಬಿಸಲು ಬಯಸಿದ್ದರು ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ.
ಇದನ್ನೂ ಓದಿ : ಪ್ರಿಯಕರನೊಂದಿಗೆ ಸೇರಿ ಮಕ್ಕಳ ಕೊಲೆಗೈದ ಪಾಪಿ ತಾಯಿ : ನಗರಸಭೆ ಸದಸ್ಯ ಸೇರಿ ಆರು ಜನರ ಬಂಧನ