ETV Bharat / bharat

ಮದುವೆ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ, ಓರ್ವ ಸಾವು; ಮೂವರು ಆರೋಪಿಗಳ ಬಂಧನ

ಮದುವೆ ಸಮಾರಂಭದಲ್ಲಿ ಸ್ವಯಂ ಘೋಷಿತ ದೇವ ಮಾನವ ರಾಮ್​ಪಾಲ್​​ ಅವರ ಪ್ರವಚನದ ವಿಡಿಯೋ ಪ್ರಸಾರ ಮಾಡಿದ್ದಕ್ಕಾಗಿ ಆಕ್ರೋಶಗೊಂಡ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿದ್ದಾನೆ.

Man Shot Dead At Madhya Pradesh Wedding
Man Shot Dead At Madhya Pradesh Wedding
author img

By

Published : Dec 14, 2021, 1:47 AM IST

ಮಂದಸೌರ್​(ಮಧ್ಯಪ್ರದೇಶ): ವಿವಾಹ ಸಮಾರಂಭವೊಂದರಲ್ಲಿ ಗುಂಡು ಹಾರಿಸಿ, ಓರ್ವ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಮಂದಸೌರ್​​ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಬಂಧನ ಮಾಡಲಾಗಿದ್ದು, 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊಲೆ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೊಳಗಾಗಿ ಜೈಲಿನಲ್ಲಿರುವ ಸ್ವಯಂ ಘೋಷಿತ ದೇವ ಮಾನವ ರಾಮ್​ಪಾಲ್​​​ ಅವರ ಪ್ರವಚನದ ವಿಡಿಯೋ ಪರದೆ ಮೇಲೆ ಬಿತ್ತರಗೊಳ್ಳುತ್ತಿದ್ದಂತೆ ಮದುವೆ ಸಮಾರಂಭದಲ್ಲಿ ವಾಗ್ವಾದ ಉಂಟಾಗಿದೆ. ಈ ವೇಳೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂದಸೌರ್​​ನ ಭೈಂಸೋಡಾ ಮಂಡಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಮೂವರ ಬಂಧನ ಮಾಡಲಾಗಿದೆ.

ಇದನ್ನೂ ಓದಿರಿ: ದೇವೇಗೌಡರ ಜೀವನಾಧಾರಿತ ಕೃತಿ ಬಿಡುಗಡೆ... ಭಾಷಣದ ವೇಳೆ ಭಾವುಕರಾದ ಫಾರೂಕ್​ ಅಬ್ದುಲ್ಲಾ

ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ವ್ಯಕ್ತಿಯನ್ನ ಮಾಜಿ ಸರಪಂಚ್​ ದೇವಿಲಾಲ್​​ ಮೀನಾ ಎಂದು ಹೇಳಲಾಗಿದೆ. ಬಂಧಿತರನ್ನ ಕಮಲ್​​ ಪಾಟಿದಾರ್​,ಲಲಿತ್​ ಸುತಾರ್​ ಮತ್ತು ಮಂಗಲ್​ ಎಂದು ಗುರುತಿಸಲಾಗಿದೆ. ಪೊಲೀಸ್ ಅಧೀಕ್ಷಕ ಸುನಿಲ್​ ಕುಮಾರ್ ಪಾಂಡೆ ತಿಳಿಸಿರುವ ಪ್ರಕಾರ, ಮದುವೆ ಸಮಾರಂಭದಲ್ಲಿ 200 ಜನರು ಭಾಗಿಯಾಗಿದ್ದರು. ಈ ವೇಳೆ ರಾಮ್​ಪಾಲ್​​​ ಅವರ ಪ್ರವಚನ ಬಿತ್ತರಿಸಲಾಗಿದ್ದು, ಇದಕ್ಕೆ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.ಇದೇ ಕಾರಣಕ್ಕಾಗಿ ವಾಗ್ವಾದ ಉಂಟಾಗಿ ಗುಂಡಿನ ದಾಳಿ ನಡೆದಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.