ETV Bharat / bharat

ಮಕ್ಕಳೆದುರಲ್ಲೇ ಹೆಂಡತಿಗೆ ಬೆಂಕಿ ಹಚ್ಚಿದ ಪಾಪಿ ಪತಿ.. ನರಳಿ ನರಳಿ ಪ್ರಾಣ ಬಿಟ್ಟ ಪತ್ನಿ

ಮಕ್ಕಳೆದುರಿಗೆ ಗಂಡ ತನ್ನ ಹೆಂಡತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಮಕ್ಕಳೆದುರಲ್ಲೇ ಹೆಂಡತಿಗೆ ಬೆಂಕಿ ಹಚ್ಚಿದ ಪತಿರಾಯ

author img

By

Published : Mar 8, 2023, 1:48 PM IST

ಮೇಡ್ಚಲ್​ (ತೆಲಂಗಾಣ): ಕಷ್ಟ-ಸುಖದಲ್ಲಿ ಜೊತೆಗಿರಬೇಕಾಗಿದ್ದ ಪತಿಯೇ ತನ್ನ ಪತ್ನಿಯ ಮೇಲೆ ಸ್ಯಾನಿಟೈಸರ್​ ಸುರಿದು ಬೆಂಕಿ ಹಚ್ಚಿದ್ದ ಘಟನೆ ಕಳೆದು ತಿಂಗಳು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ 20 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ನವ್ಯಶ್ರೀ ಘಟನೆಯಲ್ಲಿ ಸಾವನ್ನಪ್ಪಿರುವ ಮಹಿಳೆ. ತಿರುನಗರಿ ನರೇಂದ್ರ ಕೃತ್ಯ ಎಸಗಿದ ಆರೋಪಿ.

ಘಟನೆ ಹಿನ್ನೆಲೆ: ನರೇಂದ್ರ ಮತ್ತು ಆತನ ಪತ್ನಿ ನವ್ಯಶ್ರೀ ನಡುವೆ ಆಗಾಗ್ಗೆ ಸಣ್ಣಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಆದರೆ ಫೆ.18ರಂದು ಮತ್ತೇ ಇಬ್ಬರ ನಡುವೆ ಗಲಾಟೆ ನಡೆದಿದ್ದು ಇದಿರಿಂದ ಕುಪಿತನಾದ ನರೇಂದ್ರ, ತನ್ನ ಪತ್ನಿ ನವ್ಯಶ್ರೀ ಮೇಲೆ ಸ್ಯಾನಿಟೈಸರ್​ ಸುರಿದು ಮಕ್ಕಳ ಎದುರಲ್ಲೇ ಬೆಂಕಿ ಹಚ್ಚಿದ್ದಾರೆ. ಬಳಿಕ ಪುತ್ರಿಯರಿಬ್ಬರು ಸಹಾಯಕ್ಕಾಗಿ ಕಿರುಚಾಡಿದ್ದಾರೆ. ಮನೆಯ ಅಕ್ಕ ಪಕ್ಕದವರ ಸಹಾಯದಿಂದ ಗಾಯಾಳು ನವ್ಯಶ್ರೀ ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಕಳೆದ 20 ದಿನಗಳಿಂದ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ನವ್ಯಶ್ರೀ ಮೃತಪಟ್ಟಿದ್ದಾರೆ.

ಇನ್ನು, ಘಟನೆ ಕುರಿತು ನವ್ಯಶ್ರೀ ಅವರ ಇಬ್ಬರು ಪುತ್ರಿಯರು ತಮ್ಮ ತಾಯಿಯ ಸಾವಿಗೆ ತಂದೆಯೇ ಕಾರಣ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪುತ್ರಿಯರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಲ್ಲದೇ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ನರೇಂದ್ರ ಪತ್ನಿಯ ಮೇಲೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿದ ದೃಶ್ಯಗಳು ಸ್ಪಷ್ಟವಾಗಿ ಗೋಚರಿಸಿದೆ. ಅದೂ ಅಲ್ಲದೆ ತಾಯಿಯನ್ನು ಕೊಲ್ಲಬೇಡಿ ಪಪ್ಪಾ ಎಂದು ಮಕ್ಕಳು ಎಷ್ಟೇ ಮನವಿ ಮಾಡಿದರೂ ಇದಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಕ್ರೌರ್ಯ ಮೆರೆದಿದ್ದಾರೆ ನರೇಂದ್ರ.

ಇದನ್ನೂ ಓದಿ: ಪ್ರಾಂಶುಪಾಲೆಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಮಾಜಿ ವಿದ್ಯಾರ್ಥಿ: ಚಿಕಿತ್ಸೆ ಫಲಿಸದೆ ಸಾವು

ಪ್ರಾಂಶುಪಾಲೆಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದ ವಿದ್ಯಾರ್ಥಿ.. ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದ ಪ್ರಕರಣವೊಂದರಲ್ಲಿ ಕಾಲೇಜಿನ ಪ್ರಾಂಶುಪಾಲೆ ಮೇಲೆ ಮಾಜಿ ವಿದ್ಯಾರ್ಥಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲೆ ವಿಮುಕ್ತ ಶರ್ಮಾ (54) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. 24 ವರ್ಷದ ಅಶುತೋಷ್ ಶ್ರೀವಾಸ್ತವ್ ಈ ಕೃತ್ಯ ಎಸಗಿದ್ದ. ಆರೋಪಿಯು ತನ್ನ ಬಿ. ಫಾರ್ಮ ಅಂತಿಮ ವರ್ಷದ ಏಳನೇ ಸೆಮಿಸ್ಟರ್​​ನಲ್ಲಿ ಐದು ವಿಷಯಗಳಲ್ಲಿ​ ಅನುತ್ತೀರ್ಣಗೊಂಡಿದ್ದ. ನಂತರ ಎಂಟನೇ ಸೆಮಿಸ್ಟರ್​ ಪರೀಕ್ಷೆ ಬರೆದು ಎಲ್ಲ ವಿಷಯಗಳಲ್ಲಿ ಉತ್ತೀರ್ಣನಾಗಿದ್ದ. ಆದರೆ, ಏಳನೇ ಸೆಮಿಸ್ಟರ್​​ನಲ್ಲಿ ವಿಷಯಗಳು ಬಾಕಿ ಉಳಿದಿರುವುದರಿಂದ ಅಶುತೋಷ್​ಗೆ ಅಂಕಪಟ್ಟಿ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಅಶುತೋಷ್​ ಪ್ರಾಂಶುಪಾಲೆಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು.

ಇದನ್ನೂ ಓದಿ: ಲಿವ್​ ಇನ್​ ಸಂಗಾತಿಗೆ ಬೆಂಕಿ ಹಚ್ಚಿದ ದುರುಳ.. ಚಿಕಿತ್ಸೆ ಫಲಿಸದೆ ಮಹಿಳೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.