ಬಲ್ಲಿಯಾ, ಉತ್ತರ ಪ್ರದೇಶ: ಸಿಎಂ ಯೋಗಿ ಆದಿತ್ಯನಾಥ್ಗೆ ಪಿಂಡ ಪ್ರದಾನ ಕಾರ್ಯಕ್ರಮ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಸೆರೆ ಮನೆಗೆ ಕಳುಹಿಸಿದ್ದಾರೆ.
ಪಿಂಡ ಪ್ರದಾನ ಮಾಡಿದ ವ್ಯಕ್ತಿಯನ್ನು ಸಮಾಜವಾದಿ ಪಕ್ಷದ ಕಾರ್ಯಕರ್ತ ಎನ್ನಲಾಗಿದ್ದು, ಪುರೋಹಿತನೋರ್ವ ಆತನ ವಿರುದ್ಧ ದೂರು ನೀಡಿದ್ದನು. ಈ ದೂರನ್ನು ಪರಿಗಣಿಸಿ, ತನಿಖೆ ನಡೆಸಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಇಲ್ಲದಿದ್ದರೆ ಪಾಕ್ನಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗುವುದು: ಕೇಜ್ರಿವಾಲ್ ಟಾಂಗ್!
ಬ್ರಿಜೇಶ್ ಯಾದವ್ ಪಿಂಡ ಪ್ರದಾನ ಮಾಡಿದ ಬಂಧನಕ್ಕೆ ಒಳಗಾದ ವ್ಯಕ್ತಿಯಾಗಿದ್ದು, ಸುಧಾಕರ್ ಮಿಶ್ರಾ ಎಂಬುವವರು ದೂರು ನೀಡಿದ್ದರು. ಬ್ರಿಜೇಶ್ ಯಾದವ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ಮೋಸ) ಸೆಕ್ಷನ್ 504(ಶಾಂತಿ ಕದಡಲು ಉದ್ದೇಶಪೂರ್ವಕ ಯತ್ನ), ಸೆಕ್ಷನ್ 505 (ಸಾರ್ವಜನಿಕ ಶಾಂತಿಗೆ ಭಂಗ ತರುವ ಹೇಳಿಕೆಗಳು) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ನೇ ಸೆಕ್ಷನ್ ಅಡಿಯಲ್ಲಿ ದೂರು ದಾಖಲಾಗಿದೆ.
ಬ್ರಿಜೇಶ್ ಯಾದವ್ ದಲ್ವಾಪ್ರಾ ಗ್ರಾಮದ ನಿವಾಸಿಯಾಗಿದ್ದು, ಗಂಗಾ ನದಿಯಲ್ಲಿ ದೂರು ನೀಡಿದ ವ್ಯಕ್ತಿಯೂ ಸೇರಿ ಐವರು ಪುರೋಹಿತರೊಂದಿಗೆ ಪಿಂಡ ಪ್ರದಾನ ಕಾರ್ಯಕ್ರಮವನ್ನು ನಡೆಸಿದ್ದನು ಎಂದು ರೇವತಿ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.