ಲಖನೌ(ಉತ್ತರ ಪ್ರದೇಶ): ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿರುವ ಹಿಜಾಬ್ ಪ್ರಕರಣ ಈಗಾಗಲೇ ಬೇರೆ ಬೇರೆ ರಾಜ್ಯಗಳಿಗೂ ಹಬ್ಬಿದ್ದು, ಇದೇ ವಿಚಾರವಾಗಿ ವಾದ-ವಿವಾದ ನಡೆಯುತ್ತಿದೆ. ಇದರ ಮಧ್ಯೆ ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆಯ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
-
यही है लाल टोपी के काले कारनामे।
— Anurag Thakur (@ianuragthakur) February 9, 2022 " class="align-text-top noRightClick twitterSection" data="
एक राह चलती महिला के साथ सपा नेता की बदसलूकी देखिए…
जहाँ भरे हों ऐसे मनचले,
यू॰पी॰ क्यों उनके साथ चले ? pic.twitter.com/JKyTTBZ9hv
">यही है लाल टोपी के काले कारनामे।
— Anurag Thakur (@ianuragthakur) February 9, 2022
एक राह चलती महिला के साथ सपा नेता की बदसलूकी देखिए…
जहाँ भरे हों ऐसे मनचले,
यू॰पी॰ क्यों उनके साथ चले ? pic.twitter.com/JKyTTBZ9hvयही है लाल टोपी के काले कारनामे।
— Anurag Thakur (@ianuragthakur) February 9, 2022
एक राह चलती महिला के साथ सपा नेता की बदसलूकी देखिए…
जहाँ भरे हों ऐसे मनचले,
यू॰पी॰ क्यों उनके साथ चले ? pic.twitter.com/JKyTTBZ9hv
ಬುರ್ಖಾ ಧರಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಬೆನ್ನಿಗೆ ಸಮಾಜವಾದಿ ಪಕ್ಷದ ಪೋಸ್ಟರ್ ಅಂಟಿಸಲಾಗಿದೆ. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೂಡ ತಮ್ಮ ಟ್ವೀಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸಮಾಜವಾದಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಕೆಂಪು ಟೋಪಿ ಧರಿಸಿರುವ ಸಮಾಜವಾದಿ ಪಕ್ಷದ ಕಾರ್ಯಕರ್ತರನೋರ್ವ ಬುರ್ಖಾ ಧರಿಸಿರುವ ಮಹಿಳೆಯ ಬೆನ್ನಿಗೆ ಪಕ್ಷದ ಪೋಸ್ಟರ್ ಅಂಟಿಸಿದ್ದಾರೆ.
ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಮಹಿಳೆ, ನಾವಿಬ್ಬರು ಸಹೋದರಿ ಮತ್ತು ಸಹೋದರರು. ಸಮಾಜವಾದಿ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದೆವು. ಅದನ್ನು ನಾನು ತಮಾಷೆಗಾಗಿ ಮಾಡಿದ್ದೇನೆ. ಪಕ್ಷದ ಇಮೇಜ್ ಹಾಳು ಮಾಡುವ ಉದ್ದೇಶದಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದಿದ್ದಾರೆ.