ಸುಕ್ಮಾ (ಒಡಿಶಾ) : ಮನುಷ್ಯರ ಬಾಯಿಗೆ ಬಾಯಿ ಇಟ್ಟು ಆಕ್ಸಿಜನ್ ನೀಡುವ ಮೂಲಕ ಜೀವ ಉಳಿಸಿರುವ ಆನೇಕ ಸುದ್ದಿಗಳನ್ನು ನೀವು ಕೇಳಿರಬಹುದು. ಆದರೆ, ಇಲ್ಲೋರ್ವ ವ್ಯಕ್ತಿ ನಾಗರ ಹಾವಿಗೆ ಆಕ್ಸಿಜನ್ ನೀಡುವ ಮೂಲಕ ಅದರ ಜೀವ ಉಳಿಸಿದ್ದಾನೆ. ಒಡಿಶಾ ರಾಜ್ಯದ ಮಲ್ಕಾನ್ ಗಿರಿ ನುಗುಡಾ ಶಾಹಿಯಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ? ಮಲ್ಕಾನ್ ಗಿರಿ ಜಿಲ್ಲೆಯ ನುಗುಡಾ ಶಾಹಿಯ ವ್ಯಕ್ತಿಯೊಬ್ಬರ ಮನೆಗೆ ನಾಗರ ಹಾವು ಬಂದಿತ್ತು. ಇದನ್ನು ನೋಡಿದ ವ್ಯಕ್ತಿ ತಕ್ಷಣ ಹಾವಿನ ಸಹಾಯವಾಣಿ (Snake helpline) ಗೆ ಕರೆ ಮಾಡಿದ್ಧ. ಈ ವೇಳೆ ಆತನ ಮನೆಗೆ ಬಂದ ಸಹಾಯವಾಣಿಯ ಸದಸ್ಯ ಸ್ನೇಹಿಶ್ ನಾಯಕ್ ಮತ್ತವರ ತಂಡ, ಮನೆಯ ಗೋಡೆಯಲ್ಲಿದ್ದ ಹಾವನ್ನು ರಕ್ಷಿಸಿದ್ದರು. ಆದರೆ, ಅಷ್ಟೊತ್ತಿಗೆ ಹಾವು ಮೂರ್ಛೆ ಹೋಗಿತ್ತು. ಹಾವನ್ನು ಎಬ್ಬಿಸಲು ರಕ್ಷಣಾ ತಂಡ ಎಷ್ಟೇ ಪ್ರಯತ್ನಪಟ್ಟರೂ ಸಫಲವಾಗಲಿಲ್ಲ. ಕೊನೆಗೆ ಸ್ನೇಹಿಶ್ ನಾಯಕ ಪೈಪ್ ಮೂಲಕ ಹಾವಿಗೆ ಬಾಯಿಗೆ ತನ್ನ ಬಾಯಿಯಿಂದ ಆಕ್ಸಿಜನ್ ನೀಡಿದ್ದಾರೆ. ಆಕ್ಸಿಜನ್ ನೀಡಿದ ಸ್ವಲ್ಪ ಹೊತ್ತಿನ ಬಳಿಕ ಹಾವು ಎಚ್ಚರಗೊಂಡು ಓಡಾಡಲು ಪ್ರಾರಂಭಿದೆ.
ಓದಿ : ತಾಯಿ-ಮಗುವಿಗೆ ಬೆಂಕಿ ಹಚ್ಚಿ ಕೊಂದಿದ್ದ ವೈದ್ಯೆ.. ಡಾಕ್ಟರ್ ದಂಪತಿಗೆ ನಡು ರಸ್ತೆಯಲ್ಲೇ ಗುಂಡಿಟ್ಟು ಹತ್ಯೆ!
ಹಾವು ಎಚ್ಚರಗೊಂಡ ಬಳಿಕ, ಅದಕ್ಕೆ ನೀರು ಕೊಟ್ಟು ಉಪಚರಿಸಿದ ಸ್ನೇಹಿಶ್ ಅವರ ತಂಡ ನಂತರ ಕಾಡಿಗೆ ಬಿಟ್ಟು ಬಂದಿದೆ. ಸದ್ಯ, ಸ್ನೇಹಿಶ್ ಅವರು ಹಾವಿಗೆ ಉಸಿರು ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ಜನರು ಸ್ನೇಹಿಶ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.