ಭದ್ರಾದ್ರಿ ಕೊತಗುಡೆಂ (ತೆಲಂಗಾಣ): ಇದೊಂದು ವಿಚಿತ್ರ ಪ್ರೇಮ ಪುರಾಣ. ಇಲ್ಲೊಬ್ಬ ವ್ಯಕ್ತಿ ಏಕಕಾಲದಲ್ಲಿ ಇಬ್ಬರು ಯುವತಿಯರನ್ನು ಪ್ರೀತಿಸಿ ಸಂಸಾರ ನಡೆಸಿ ನಂತರ ಅವರ ಕೊರಳಿಗೆ ತಾಳಿ ಕಟ್ಟಿದ್ದಾನೆ. ಪ್ರೀತಿಸಿದ ಯುವತಿಯರಿಂದ ಇಬ್ಬರು ಮಕ್ಕಳಿಗೆ ತಂದೆಯಾಗಿದ್ದಾನೆ. ಅಚ್ಚರಿ ಅಂದ್ರೆ, ಇಬ್ಬರನ್ನೂ ಒಂದೇ ಮಂಟಪದಲ್ಲಿ ಮದುವೆ ಮಾಡಿಕೊಂಡಿದ್ದಾನೆ. ಈ ಘಟನೆ ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಎಂಬಲ್ಲಿ ನಡೆದಿದೆ.
ಬುಧವಾರ ರಾತ್ರಿ ಬುಡಕಟ್ಟು ಸಮುದಾಯದ ಯುವಕನೊಬ್ಬ ಇಬ್ಬರು ಯುವತಿಯರನ್ನು ಮದುವೆಯಾಗಿದ್ದಾನೆ. ಈತನ ಮದುವೆ ಆಮಂತ್ರಣ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮೂರು ವರ್ಷದ ಹಿಂದೆ ಇಬ್ಬರು ಹುಡುಗಿಯರನ್ನು ಪ್ರೀತಿಸಿ ತವರು ಮನೆಗೆ ಕರೆತಂದಿದ್ದ ಈತ ಎರಡೂ ಕುಟುಂಬದ ಹಿರಿಯರ ಒಪ್ಪಿಗೆಯ ಮೇರೆಗೆ ಸಂಪ್ರದಾಯದ ಪ್ರಕಾರವೇ ಇದೀಗ ಮದುವೆಯಾಗಿದ್ದಾನೆ.
![Man married two women Man married two women at the same time Man married two women at Telanagana ಒಂದೇ ಮಂಟಪದಲ್ಲಿ ಯುವತಿಯರಿಬ್ಬರನ್ನು ಮದುವೆ ಒಂದೇ ಮಂಟಪದಲ್ಲಿ ಯುವತಿಯರಿಬ್ಬರನ್ನು ಮದುವೆಯಾದ ಭೂಪ ಇಬ್ಬರನ್ನೂ ಒಂದೇ ಮಂಟಪದಲ್ಲಿ ಮದುವೆ ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆ ಒಂದೇ ಸಮಯದಲ್ಲಿ ಇಬ್ಬರು ಹುಡುಗಿಯರನ್ನು ಪ್ರೀತಿಸುವುದು ಪ್ರೀತಿಸುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯ ಆಮಂತ್ರಣ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್](https://etvbharatimages.akamaized.net/etvbharat/prod-images/9323kmm7a_0903newsroom_1678344656_528.jpg)
ವಿವರ: ಗ್ರಾಮಸ್ಥರು ನೀಡಿದ ಮಾಹಿತಿಯಂತೆ, ಇದು ಚರ್ಲಾ ತಾಲೂಕಿನ ಎರ್ರಬೋರು ಗ್ರಾಮದ ಮುತ್ತಯ್ಯ ಮತ್ತು ರಾಮಲಕ್ಷ್ಮಿ ದಂಪತಿಯ ಎರಡನೇ ಪುತ್ರ ಸತ್ತಿಬಾಬು ಪ್ರೇಮಕಥೆ. ಸತ್ತಿಬಾಬು ಪದವಿಯವರೆಗೆ ಓದಿ ಶಿಕ್ಷಣ ನಿಲ್ಲಿಸಿದ್ದ. ಈತ ಇಂಟರ್ ಮೀಡಿಯೇಟ್ ಓದುತ್ತಿರುವಾಗಲೇ ಅದೇ ತಾಲೂಕಿನ ದೋಶಿಲಪಲ್ಲಿಯ ಸ್ವಪ್ನಾ ಕುಮಾರಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಸಂಬಂಧದಲ್ಲಿ ಸೊಸೆಯಾಗಿದ್ದ ಕುರ್ನಪಲ್ಲಿ ನಿವಾಸಿ ಸುನೀತಾಳನ್ನೂ ಇಷ್ಟಪಟ್ಟಿದ್ದಾನೆ. ಇವರ ಪ್ರೇಮ ಕಥೆ ಮೂವರಿಗೂ ತಿಳಿದಿತ್ತಂತೆ.
ಓದಿ: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಮುಂದಾದ ವಿದ್ಯಾರ್ಥಿನಿ: ತಡೆದು ಮನವೊಲಿಸಿದ ಪ್ರಾಂಶುಪಾಲ
ಇದಾದ ನಂತರ ಸತ್ತಿಬಾಬು ಅವರಿಬ್ಬರ ಜೊತೆ ಮೂರು ವರ್ಷಗಳ ಕಾಲ ಸಹಬಾಳ್ವೆ ನಡೆಸಿದ್ದಾನೆ. ಸ್ವಪ್ನಾ ಮತ್ತು ಸುನೀತಾಗೆ ಒಂದೊಂದು ಮಗು ಕೂಡಾ ಜನಿಸಿದೆ. ಯುವತಿಯ ಪಾಲಕರು ಮದುವೆಯಾಗುವಂತೆ ಕೇಳಿದಾಗ ಇಬ್ಬರನ್ನೂ ಅಪಾರವಾಗಿ ಪ್ರೀತಿಸುತ್ತಿದ್ದೇನೆ. ಇಬ್ಬರನ್ನೂ ಮದುವೆಯಾಗುತ್ತೇನೆ ಎಂದು ಎರಡೂ ಕಡೆಯ ಕುಟುಂಬದವರಿಗೂ ಮನವರಿಕೆ ಮಾಡಿಕೊಟ್ಟಿದ್ದಾನೆ. ಸತ್ತಿಬಾಬುವಿನ ಈ ನಿರ್ಧಾರ ಸ್ಥಳೀಯವಾಗಿ ಸಂಚಲನ ಮೂಡಿಸಿತ್ತು. ಯುವತಿಯರ ಮನೆಯವರು ಇವರ ಮದುವೆಗೆ ಒಪ್ಪದೇ ಇದ್ದಾಗ ಪ್ರಕರಣ ಗ್ರಾಮ ಪಂಚಾಯಿತಿ ಮೆಟ್ಟಿಲೇರಿತ್ತು.
ಮೂರು ಗ್ರಾಮಗಳ ಹಿರಿಯರ ಸಮ್ಮುಖದಲ್ಲಿ ನಡೆದ ಪಂಚಾಯಿತಿ ಮೂಲಕ ಮೂವರ ಇಷ್ಟಾರ್ಥಗಳನ್ನು ವಿಚಾರಿಸಲಾಯಿತು. ಅವರು ಇಚ್ಛೆಯಂತೆ ಮದುವೆಯಾಗಲು ನಿರ್ಧರಿಸಿದರು. ಎರ್ರಬೋರು ಎಂಬಲ್ಲಿ ವರನ ಮನೆಯಲ್ಲಿ ಮದುವೆಗೆ ವ್ಯವಸ್ಥೆ ಮಾಡಲಾಗಿತ್ತು. ಬುಡಕಟ್ಟು ಜನಾಂಗದ ಯುವಕ-ಯುವತಿಯರು ಒಬ್ಬರನ್ನೊಬ್ಬರು ಇಷ್ಟಪಟ್ಟರೆ, ಆರಂಭಿಕ ಸಹಭಾಳ್ವೆಗೆ ಅವಕಾಶವಿದೆ. ಆ ನಂತರ ಹಿರಿಯರನ್ನು ಒಪ್ಪಿಸಿ ಮದುವೆಯಾಗುತ್ತಾರೆ. ಅದರಂತೆ, ಸತ್ತಿಬಾಬು ಇಬ್ಬರನ್ನು ಪ್ರೀತಿಸಿ ಮದುವೆಗೆ ಎರಡೂ ಕುಟುಂಬಗಳನ್ನು ಒಪ್ಪಿಸಿದ್ದಾನೆ. ಈ ಮೂವರ ಮದುವೆ ಇಂದು ಬೆಳಗ್ಗೆ 7 ಗಂಟೆಗೆ ನಡೆಯಬೇಕಾಗಿತ್ತು. ಆದರೆ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಈ ವಿಚಾರ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಇಬ್ಬರು ಯುವತಿಯರಿಗೆ ಯಾವುದೇ ತೊಂದರೆ ಆಗಬಾರದು ಎಂದು ಸತ್ತಿಬಾಬು ಬುಧವಾರ ರಾತ್ರಿಯೇ ವಿವಾಹವಾಗಿದ್ದಾನೆ.!
ಇದನ್ನೂ ಓದಿ: ದೇಗುಲದ ಆವರಣದಲ್ಲಿ ಮುಸ್ಲಿಂ ಪದ್ಧತಿಯಂತೆ ಹಿಂದೂ ಯುವತಿಯ ವರಿಸಿದ ಯುವಕ