ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಒಂದಿಲ್ಲೊಂದು ಆಸಕ್ತಿದಾಯಕ ವಿಡಿಯೋ ವೈರಲ್ ಆಗ್ತಿರುತ್ತವೆ. ಸದ್ಯ ಅಂತಹ ಮತ್ತೊಂದು ವಿಡಿಯೋ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಮನುಷ್ಯರು ಬಳಕೆ ಮಾಡಿರುವ ಸಿರಿಂಜ್ ಹಾಗೂ ಪಾಪಾಸುಕಳ್ಳಿ ಬಳಕೆ ಮಾಡಿ ಲಿಪ್ಸ್ಟಿಕ್ ತಯಾರಿಸಿದ್ದಾನೆ. ಈ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗ್ತಿದ್ದಂತೆ ಕೆಲವೇ ಗಂಟೆಗಳಲ್ಲಿ 60 ಲಕ್ಷ ಜನರಿಂದ ವೀಕ್ಷಣೆಯಾಗಿದೆ. ಈ ವಿಡಿಯೋ ಯಾವ ಪ್ರದೇಶದ್ದು ಎಂಬುದರ ಬಗ್ಗೆ ಯಾವುದೇ ರೀತಿಯ ಖಚಿತತೆ ಇಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
-
Not in 100 years could you guess where this is going pic.twitter.com/TgFAxbKJQP
— Screamer Jim (@HeheWaitWhut) July 13, 2022 " class="align-text-top noRightClick twitterSection" data="
">Not in 100 years could you guess where this is going pic.twitter.com/TgFAxbKJQP
— Screamer Jim (@HeheWaitWhut) July 13, 2022Not in 100 years could you guess where this is going pic.twitter.com/TgFAxbKJQP
— Screamer Jim (@HeheWaitWhut) July 13, 2022
ವ್ಯಕ್ತಿಯೊಬ್ಬ ಬಳಕೆ ಮಾಡಿರುವ ಸಿರಿಂಜ್ಗಳು, ಪಾಪಾಸುಕಳ್ಳಿ ಮತ್ತು ಎಣ್ಣೆಯಿಂದ ಕೆಂಪು ಬಣ್ಣದ ಲಿಪ್ಸ್ಟಿಕ್ ತಯಾರಿಸಿದ್ದಾನೆ. ಇದರ ವಿಡಿಯೋ ಸ್ಕ್ರೀಮರ್ ಜಿಮ್ ಎಂಬುವವರ ಟ್ವೀಟರ್ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದೆ. ವ್ಯಕ್ತಿಯೋರ್ವ ಲಿಪ್ಸ್ಟಿಕ್ ತಯಾರಿಸಲು ಸಿರಿಂಜ್ಗಳ ಮುಂದಿನ ಭಾಗ ಕತ್ತರಿಸಿದ್ದಾನೆ. ಪಾಪಾಸುಕಳ್ಳಿಗಳನ್ನ ಬಿಸಿಲಿನಲ್ಲಿ ಒಣಗಿಸಿದ್ದಾನೆ. ಅವುಗಳಿಂದ ಬಂದ ಕೋಚಿನಿಯಲ್ ಕೆಂಪು ಬಣ್ಣವಾಗಿ ಬಳಕೆ ಮಾಡಿದ್ದಾನೆ. ಅದನ್ನ ಎಣ್ಣೆ ಮತ್ತು ನೀರಿನಲ್ಲಿ ಕುದಿಸಿದ್ದಾನೆ. ಅದರಿಂದ ಬಂದಿರುವ ಕೆಂಪು ದ್ರವ ಸಿರಿಂಜ್ಗಳಲ್ಲಿ ಹಾಕಿದ್ದಾನೆ. ತದನಂತರ ಅದನ್ನ ತನ್ನ ತುಟಿಗಳಿಗೆ ಹಚ್ಚಿಕೊಂಡಿದ್ದಾನೆ.
ಆನ್ಲೈನ್ನಲ್ಲಿ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಬರೋಬ್ಬರಿ 60 ಲಕ್ಷ ಜನರು ಇದರ ವೀಕ್ಷಣೆ ಮಾಡಿದ್ದು, ತರಹೇವಾರಿ ಪ್ರಶ್ನೆ ಮಾಡಿದ್ದಾರೆ.