ETV Bharat / bharat

ರೀಲ್ಸ್ ಮಾಡುತ್ತಿದ್ದ ಪತ್ನಿ: ವಿವಾಹೇತರ ಸಂಬಂಧ ಹೊಂದಿರುವ ಶಂಕೆಯಿಂದ ಹತ್ಯೆ ಮಾಡಿದ ಪತಿ - etv bharat kannada

ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಮಾಡುತ್ತಿದ್ದ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಾಯ್​ನಗರದಲ್ಲಿ ನಡೆದಿದೆ.

Etv Bharatman-kills-wife-slitting-her-throat-over-use-of-social-media-in-bengal
ರೀಲ್ಸ್ ಮಾಡುತ್ತಿದ್ದ ಪತ್ನಿ: ವಿವಾಹೇತರ ಸಂಬಂಧ ಹೊಂದಿರುವ ಶಂಕೆಯಿಂದ ಹತ್ಯೆ ಮಾಡಿದ ಪತಿ
author img

By ETV Bharat Karnataka Team

Published : Nov 24, 2023, 7:37 PM IST

ಜಾಯ್‌ನಗರ (ಪಶ್ಚಿಮ ಬಂಗಾಳ): ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿ, ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹರಿನಾರಾಯಣಪುರ ಗ್ರಾಮದ ನಲಿಕಟ ಮೋರ್​ನಲ್ಲಿ ನಡೆದಿದೆ. ಅಪರ್ಣಾ ಬೈದ್ಯ (28) ಮೃತ ಮಹಿಳೆ. ಪರಿಮಳ್​ ಬೈದ್ಯ ಆರೋಪಿ ಪತಿ.

ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ ಜಾಯ್‌ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಪತಿ ಪರಿಮಳ್​ ಬೈದ್ಯ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಮೃತ ಅಪರ್ಣಾ ಪುತ್ರ ಮಾತನಾಡಿ, ''ಪೋಷಕರ ನಡುವೆ ಮೊಬೈಲ್ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ನನ್ನ ತಂದೆ, ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು. ಇಂದು ನಾನು ಟ್ಯೂಷನ್​ಗೆ ಹೋಗಿದ್ದೆ, ಟ್ಯೂಷನ್ ಮುಗಿಸಿಕೊಂಡು ಮನೆಗೆ ಬಂದಾಗ ನನ್ನ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು" ಎಂದು ತಿಳಿಸಿದ್ದಾರೆ.

ಮಗ್ರಾಹತ್ ನಿವಾಸಿ ಪರಿಮಳ್​ ಅವರೊಂದಿಗೆ 17 ವರ್ಷಗಳ ಹಿಂದೆ ವಿವಾಹವಾಗಿದ್ದ ಅಪರ್ಣಾ ಬೈದ್ಯ, ಗಾರೆ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ, ಅಪರ್ಣಾ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್​ ರೀಲ್ಸ್ ಮಾಡುತ್ತಿದ್ದರು. ಇದರಿಂದಾಗಿ ಅವರಿಗೆ ಹಲವು ಸ್ನೇಹಿತರು ಪರಿಚಯವಾಗಿದ್ದರು. ಅಪರ್ಣಾ ಯಾವಾಗಲೂ ಆ ಸ್ನೇಹಿತರೊಂದಿಗೆ ಫೋನ್​ನಲ್ಲಿ ಮಾತನಾಡುತ್ತಿದ್ದರು. ಇದರಿಂದ ಪತಿಗೆ ಆಕೆಯ ಮೇಲೆ ಅನುಮಾನ ಮೂಡಿತ್ತು. ಇದೇ ವಿಚಾರವಾಗಿ ಅಪರ್ಣಾ ತನ್ನ ಪತಿಯನ್ನು ತೊರೆದು ಕೆಲವು ದಿನ ಬೇರೆಡೆ ವಾಸವಾಗಿದ್ದಳು ಎಂದು ಹೇಳಲಾಗುತ್ತಿದೆ. ಇದರಿಂದ ಬೇಸತ್ತ ಪತಿ ಈ ಕೃತ್ಯ ಎಸೆಗಿದ್ದಾನೆ ಎಂದು ಶಂಕಿಸಲಾಗಿದೆ.

ಮೊಬೈಲ್​ನಲ್ಲಿ ಮಾತನಾಡುತ್ತಾಳೆ ಎಂದು ಪತ್ನಿಗೆ ಚಾಕು ಇರಿದಿದ್ದ ಪತಿ (ಬೆಂಗಳೂರು): ಕೆಲವು ತಿಂಗಳ ಹಿಂದೆ, ಪತ್ನಿ ಮೊಬೈಲ್ ಫೋನ್‌ನಲ್ಲಿ ಹೆಚ್ಚು ಮಾತನಾಡುತ್ತಿರುತ್ತಾಳೆ ಎಂದು ಅನುಮಾನಪಟ್ಟ ಪತಿ ಆಕೆಗೆ ಚಾಕುವಿನಿಂದ ಇರಿದಿದ್ದ ಘಟನೆ ಬೆಂಗಳೂರುನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾರ್ ಸ್ಟ್ರೀಟ್​ನಲ್ಲಿ ನಡೆದಿತ್ತು. ಗಂಡ ದಯಾನಂದ್ ಅಲಿಯಾಸ್ ನಂದನ ಕ್ರೌರ್ಯಕ್ಕೆ ಹೆಂಡತಿ‌ ಪ್ರಿಯಾಂಕಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಆರೋಪಿ ದಯಾನಂದ್ ಹಾಗೂ ಪ್ರಿಯಾಂಕಾ ಮದುವೆಯಾಗಿ ನೀಲಸಂದ್ರದ ಬಜಾರ್ ಸ್ಟ್ರೀಟ್​ನಲ್ಲಿ ವಾಸವಿದ್ದರು. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದರು. ಸದಾ ಕುಡಿದು ಬರುತ್ತಿದ್ದ ದಯಾನಂದ್ ಪತ್ನಿ ಮೇಲೆ ಅನುಮಾನ ಪಟ್ಟು ಗಲಾಟೆ ಮಾಡುತ್ತಿದ್ದ. ರಾತ್ರಿಯೂ ಸಹ ಕಂಠಪೂರ್ತಿ ಕುಡಿದು ಬಂದಿದ್ದ ದಯಾನಂದ್ ಮಲಗಿದ್ದ ಪತ್ನಿ ಜೊತೆ ಜಗಳ ಆರಂಭಿಸಿದ್ದ. ನೋಡ ನೋಡುತ್ತಿದ್ದಂತೆ ಮಕ್ಕಳ ಮುಂದೆಯೇ ಅಡುಗೆ ಕೋಣೆಯಲ್ಲಿದ್ದ ಚಾಕು ತೆಗೆದುಕೊಂಡು ಪತ್ನಿಯ ಹೊಟ್ಟೆಯ ಕೆಳಭಾಗಕ್ಕೆ ಇರಿದಿದ್ದ. ತೀವ್ರ ರಕ್ತಸ್ರಾವವಾದಿಂದ ಪತ್ನಿ ಕಿರುಚಾಡುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದ ಎಂದು ತಿಳಿದು ಬಂದಿತ್ತು.

ಇದನ್ನೂ ಓದಿ: 350 ರೂಪಾಯಿಗಾಗಿ 60 ಬಾರಿ ಇರಿದು ಯುವಕನ ಕೊಂದ ಬಾಲಕ.. ಡ್ಯಾನ್ಸ್ ಮಾಡಿ ವಿಕೃತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.