ETV Bharat / bharat

ಕೇರಳದಲ್ಲಿ ಗುಂಪು ಗಲಾಟೆ.. ಚಾಕುವಿನಿಂದ ಇರಿದು ಓರ್ವನ ಬರ್ಬರ ಹತ್ಯೆ - ETV bharat kannada news

ಕೇರಳದಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಹೊಡೆದಾಟದಲ್ಲಿ ಓರ್ವನನ್ನು ಚಾಕು ಇರಿದು ಕೊಲೆ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

man-killed-by-gang-in-kerala
ಕೇರಳದಲ್ಲಿ ಗುಂಪು ಗಲಾಟೆ
author img

By

Published : Sep 10, 2022, 3:14 PM IST

ಕೊಚ್ಚಿ: ಫೇಸ್​ಬುಕ್​ನಲ್ಲಿ ಆಕ್ಷೇಪಾರ್ಹ ಪೋಸ್ಟ್​ ಹಾಕಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗುಂಪೊಂದು ಚಾಕುವಿನಿಂದ ಇರಿದು ಕೊಂದ ಘಟನೆ ಕೇರಳದಲ್ಲಿ ಶನಿವಾರ ನಡೆದಿದೆ. ಕೇಸ್​ನಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಕೊಚ್ಚಿಯ ಸಜ್ಜನ್​ ಕೊಲೆಯಾದ ವ್ಯಕ್ತಿ. ಎರಡು ಗುಂಪುಗಳ ಮಧ್ಯೆ ಈ ಹಿಂದೆಯೇ ಯಾವುದೋ ಕಾರಣಕ್ಕಾಗಿ ಹಳೆಯ ದ್ವೇಷ ಹೊಗೆಯಾಡುತ್ತಿತ್ತು. ಈ ಮಧ್ಯೆ ಸಜ್ಜನ್​ ಫೇಸ್​ಬುಕ್​ನಲ್ಲಿ ಆಕ್ಷೇಪಾರ್ಹ ಬರಹವುಳ್ಳ ಪೋಸ್ಟ್​ ಮಾಡಿದ್ದ. ಇದನ್ನು ಪ್ರಶ್ನಿಸಲು ಆಂಟೋನಿ ಮತ್ತು ಆತನ ಗ್ಯಾಂಗ್​ ಸಜ್ಜನ್​ ಮನೆಗೆ ಬಂದಿದೆ.

ಪೋಸ್ಟ್​ ಬಗ್ಗೆ ವಾಗ್ವಾದ ನಡೆದಿದೆ. ಈ ವೇಳೆ, ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಸಜ್ಜನ್​ಗೆ ಮತ್ತೊಂದು ಗುಂಪು ಚಾಕುವಿನಿಂದ ಇರಿದಿದೆ. ತೀವ್ರ ರಕ್ತಸ್ರಾವದಿಂದ ಸಜ್ಜನ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಲ್ಲದೇ, ಎರಡೂ ಗ್ಯಾಂಗ್​ನ ಸದಸ್ಯರಿಗೆ ಗಾಯಗಳಾಗಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಎರಡು ಗುಂಪುಗಳ ನಡುವೆ ಹಳೆಯ ದ್ವೇಷವಿದೆ. ಇಂದು ಬೆಳಗ್ಗೆ ಸಜ್ಜನ್ ಪೋಸ್ಟ್​​ ಅನ್ನು ಪ್ರಶ್ನಿಸಲು ಬಂದಾಗ ಮಾರಾಮಾರಿ ನಡೆದಿದೆ. ಇದಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆ ಮಾಡಲು ವಿಚಾರಣೆ ನಡೆಸಲಾಗುತ್ತಿದೆ. ಈ ಹಿಂದೆಯೂ ಹಲವಾರು ಈ ಗುಂಪುಗಳ ಬಡಿದಾಡಿಕೊಂಡಿವೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದರು.

ಓದಿ: ಫುಡ್​ ಡೆಲಿವರಿಗೆ ಬಂದ ಜೊಮ್ಯಾಟೊ ಬಾಯ್​.. ಯುವಕನ ಖಾಸಗಿ ಅಂಗಕ್ಕೆ ಕಚ್ಚಿತು ಶ್ವಾನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.