ETV Bharat / bharat

ಮನ್​ ಕಿ ಬಾತ್ 101ನೇ ಸಂಚಿಕೆ: ಯುವ ಸಂಗಮ ಕಾರ್ಯಕ್ರಮ ಶ್ಲಾಘಿಸಿದ ಪ್ರಧಾನಿ ಮೋದಿ - ಯುವ ಸಂಗಮ ಕಾರ್ಯಕ್ರಮ ಶ್ಲಾಘಿಸಿದ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು 101ನೇ ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಒಂದು ಭಾಗದ ಯುವಕರು ಮತ್ತೊಂದು ಭಾಗಕ್ಕೆ ಪ್ರಯಾಣಿಸಿ ಅಲ್ಲಿನ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡುವ ಯುವಸಂಗಮ ಯೋಜನೆಯನ್ನು ಆವರು ಶ್ಲಾಘಿಸಿದರು.

PM Modi praises youth exchange program Yuva Sangam in Mann ki Baat

author img

By

Published : May 28, 2023, 5:51 PM IST

ನವದೆಹಲಿ : ಶಿಕ್ಷಣ ಸಚಿವಾಲಯದ ಯುವ ವಿನಿಮಯ ಕಾರ್ಯಕ್ರಮ 'ಯುವ ಸಂಗಮ'ವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಭಾನುವಾರ ತಮ್ಮ ರೇಡಿಯೋ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ವೈವಿಧ್ಯತೆಯನ್ನು ಉತ್ತೇಜಿಸಲು ಮತ್ತು ಜನರೊಂದಿಗೆ ಸಂಪರ್ಕ ಸಾಧಿಸಲು ಇದು ಉತ್ತಮ ಉಪಕ್ರಮವಾಗಿದೆ ಎಂದು ಹೇಳಿದರು.

'ಮನ್ ಕಿ ಬಾತ್' ನ 101 ನೇ ಸಂಚಿಕೆಯಲ್ಲಿ, 'ಯುವ ಸಂಗಮ'ದಲ್ಲಿ ಭಾಗಿಯಾಗಿರುವ ಕೆಲವರೊಂದಿಗೆ ಪ್ರಧಾನಿ ಸಂವಾದ ನಡೆಸಿದರು ಮತ್ತು ಅವರು ತಮ್ಮ ಅನುಭವಗಳನ್ನು ಆಧರಿಸಿದ ಬ್ಲಾಗ್ ಬರೆಯಬೇಕೆಂದು ಮನವಿ ಮಾಡಿದರು. "ಜನರ ಮಧ್ಯೆ ಪರಸ್ಪರ ಸಂಪರ್ಕ ಮತ್ತು ನಮ್ಮ ವೈವಿಧ್ಯತೆಯನ್ನು ಉತ್ತೇಜಿಸುವುದು ಈ ಉಪಕ್ರಮದ ಗುರಿಯಾಗಿದೆ" ಎಂದು ಅವರು ಹೇಳಿದರು. ಯುವ ಸಂಗಮ್‌ನ ಮೊದಲ ಸುತ್ತಿನಲ್ಲಿ ಸುಮಾರು 1,200 ಯುವಕರು ದೇಶದ 22 ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದಾರೆ.

ಯುವಸಂಗಮದ ಭಾಗವಾಗಿರುವ ಪ್ರತಿಯೊಬ್ಬರೂ ವಿಶಿಷ್ಟ ನೆನಪುಗಳೊಂದಿಗೆ ಹಿಂದಿರುಗುತ್ತಿದ್ದಾರೆ. ಈ ನೆನಪುಗಳು ಅವರ ಜೀವನದುದ್ದಕ್ಕೂ ಅವರ ಹೃದಯದಲ್ಲಿ ಉಳಿಯುತ್ತದೆ ಎಂದು ಮೋದಿ ಹೇಳಿದರು. ಯುವ ವಿನಿಮಯ ಕಾರ್ಯಕ್ರಮವು ಭಾರತದ ಒಂದು ಭಾಗದ ವಿದ್ಯಾರ್ಥಿಗಳು ಇತರ ಭಾಗಗಳಿಗೆ ಭೇಟಿ ನೀಡುವ ಮತ್ತು ಆ ಮೂಲಕ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಅರ್ಥಮಾಡಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ.

ಮನ್ ಕಿ ಬಾತ್​ನ 101 ನೇ ಸಂಚಿಕೆಯಲ್ಲಿ ವೀರ್ ಸಾವರ್ಕರ್ ಅವರ ಜನ್ಮ ವಾರ್ಷಿಕೋತ್ಸವದಂದು ಪ್ರಧಾನ ಮಂತ್ರಿಗಳು ಅವರನ್ನು ಸ್ಮರಿಸಿದರು. ಸಾವರ್ಕರ್ ಅವರು ವ್ಯಕ್ತಿತ್ವವು ಶಕ್ತಿ, ಉದಾತ್ತತೆ ಮತ್ತು ಅವರ ನಿರ್ಭೀತ ಗುಣಗಳಿಂದ ತುಂಬಿತ್ತು. ಗುಲಾಮಗಿರಿಯನ್ನು ಎಂದೂ ಸಹಿಸದ ಸ್ವಾಭಿಮಾನ ಸ್ವಭಾವ ಅವರದಾಗಿತ್ತು ಎಂದು ಹೇಳಿದರು.

ಏನಿದು ಮನ್ ಕಿ ಬಾತ್?: ಮನ್ ಕಿ ಬಾತ್ ಎಂಬುದು ಅಕ್ಟೋಬರ್ 3, 2014 ರಂದು ಮೊದಲ ಬಾರಿಗೆ ಪ್ರಸಾರವಾದ ಭಾರತೀಯ ರೇಡಿಯೊ ಕಾರ್ಯಕ್ರಮವಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಪ್ರಾಮುಖ್ಯತೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳು ಮತ್ತು ವಿಚಾರಗಳ ಕುರಿತು ನಾಗರಿಕರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಭಾರತದಲ್ಲಿ ದೂರದರ್ಶನವು ಇನ್ನೂ ವ್ಯಾಪಕವಾಗಿ ಲಭ್ಯವಿಲ್ಲದ ಕಾರಣ ವಿಶೇಷವಾಗಿ ದೂರದ ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ತಲುಪಲು ಆಲ್ ಇಂಡಿಯಾ ರೇಡಿಯೊವನ್ನು (AIR) ಅಧಿಕೃತ ಮಾಧ್ಯಮವಾಗಿ ಆಯ್ಕೆಮಾಡಲಾಗಿದೆ. 2015 ರಲ್ಲಿ, ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರು ವಿಶೇಷ ಮನ್ ಕಿ ಬಾತ್ ಕಾರ್ಯಕ್ರಮದ ಭಾಗವಾಗಿದ್ದರು. ಅವರು ಗಣರಾಜ್ಯೋತ್ಸವದ ಪರೇಡ್‌ನ ಭಾಗವಾಗಿ ಭಾರತಕ್ಕೆ ಆಗಮಿಸಿದ್ದರು.

ಕಾರ್ಯಕ್ರಮದ ಮೊದಲ ಹದಿನೈದು ಎಪಿಸೋಡ್​ಗಳಲ್ಲಿ, ಮನ್ ಕಿ ಬಾತ್ ವೆಬ್‌ಸೈಟ್‌ನಲ್ಲಿ 61,000 ಕ್ಕೂ ಹೆಚ್ಚು ವಿಷಯಗಳನ್ನು ಸ್ವೀಕರಿಸಲಾಯಿತು. ಅದರಲ್ಲಿ ಕೆಲವನ್ನು ಪ್ರತಿ ತಿಂಗಳು ಕಾರ್ಯಕ್ರಮದ ಭಾಗವಾಗಲು ಆಯ್ಕೆ ಮಾಡಲಾಯಿತು. ಪ್ರತಿ ಸಂಚಿಕೆ 20 ರಿಂದ 30 ನಿಮಿಷ ಅವಧಿಯದ್ದಾಗಿರುತ್ತದೆ. 2018 ರಲ್ಲಿ ಮನ್ ಕಿ ಬಾತ್‌ನ ಕೇವಲ 2 ಸಂಚಿಕೆಗಳು ಪ್ರಸಾರವಾಗಿದ್ದವು.

ಒಂದರಲ್ಲಿ ಯೋಗದ ಕುರಿತು ಮತ್ತು ಇನ್ನೊಂದಲ್ಲಿ ಭಾರತದ ಸಂವಿಧಾನದ ಕುರಿತು ಪ್ರಧಾನಿ ಮಾತನಾಡಿದ್ದರು. 2017 ರಲ್ಲಿ ಆಲ್ ಇಂಡಿಯಾ ರೇಡಿಯೊ ಸಮೀಕ್ಷೆಯ ಪ್ರಕಾರ ಬಿಹಾರ, ಗುಜರಾತ್ ಮತ್ತು ಮಧ್ಯಪ್ರದೇಶಗಳಲ್ಲಿ ಅತ್ಯಧಿಕ ಮನ್ ಕಿ ಬಾತ್ ಕೇಳುಗರಿದ್ದಾರೆ. ಆಂಧ್ರಪ್ರದೇಶ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಕಡಿಮೆ ಕೇಳುಗರಿದ್ದಾರೆ. 2017 ರಿಂದ ಮನ್ ಕಿ ಬಾತ್ ಪ್ರಾದೇಶಿಕ ಉಪಭಾಷೆಗಳಲ್ಲಿ ಲಭ್ಯವಾಗುತ್ತಿದೆ.

ಇದನ್ನೂ ಓದಿ : ಹೊಸ ಸಂಸತ್ ಭವನದ ಜೊತೆ ಶವಪೆಟ್ಟಿಯ ಚಿತ್ರ ಹೋಲಿಕೆ ಮಾಡಿದ ಆರ್​ಜೆಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.