ಸಿಂಗ್ರೌಲಿ(ಮಧ್ಯಪ್ರದೇಶ): ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿರುವ ಗಂಡನೋರ್ವ ಆಕೆಯ ಖಾಸಗಿ ಭಾಗಗಳಿಗೆ ಹೊಲಿಗೆ ಹಾಕಿರುವ ದುರ್ಘಟನೆ ಜಿಲ್ಲೆಯ ಮಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದರಿಂದ ಮಾನಸಿಕ, ದೈಹಿಕವಾಗಿ ನೊಂದ ಮಹಿಳೆ ಬಂಧೌರಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
52 ವರ್ಷದ ಪತ್ನಿಯ ಮೇಲೆ ಅನುಮಾನ ಪಟ್ಟ ವೃತ್ತಿಯಲ್ಲಿ ವೈದ್ಯನಾಗಿರುವ 55 ವರ್ಷದ ರಾಮ್ ಕುಪಾಲ್ ಸಾಹು ಖಾಸಗಿ ಭಾಗಕ್ಕೆ ಹೊಲಿಗೆ ಹಾಕಿದ್ದಾನೆ. ಕಳೆದ ಆಗಸ್ಟ್ 24 ರಂದು ರೈಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: Road Accident: ಮದುವೆಯಾದ ಮೂರೇ ದಿನಕ್ಕೆ ನವವಿವಾಹಿತೆ ದುರ್ಮರಣ
ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕರ್, ಮಹಿಳೆ ನೀಡಿರುವ ದೂರು ಆಧರಿಸಿ ಕ್ರಮ ಕೈಗೊಂಡಿದ್ದೇವೆ. ಅವರಿಗೆ ಮಕ್ಕಳಿದ್ದು ಈಗಾಗಲೇ ಮದುವೆಯಾಗಿದೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.