ETV Bharat / bharat

ಮಥುರಾದಲ್ಲಿ ದಾಖಲೆಯಿಲ್ಲದ ₹ 39 ಲಕ್ಷ ನಗದು: ಒಬ್ಬನ ಬಂಧನ

ದಾಖಲೆಯಿಲ್ಲದೇ ಸಾಗಣೆ ಮಾಡುತ್ತಿದ್ದ ₹ 39 ಲಕ್ಷ ನಗದನ್ನು ಮಥುರಾ ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ

Man held in Mathura
ಸಾಂದರ್ಭಿಕ ಚಿತ್ರ
author img

By

Published : Feb 2, 2022, 6:57 AM IST

ಮಥುರಾ(ಉತ್ತರ ಪ್ರದೇಶ): ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ದಾಖಲೆಯಿಲ್ಲದೇ ಸಾಗಾಟ ಮಾಡುತ್ತಿದ್ದ 39 ಲಕ್ಷ ರೂ. ನಗದನ್ನು ಮಂಗಳವಾರ ಇಲ್ಲಿ ವಶಪಡಿಸಿಕೊಂಡಿರುವ ಪೊಲೀಸರು, ಈ ಸಂಬಂಧ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ

ಆಗ್ರಾದ ಮೀರಾ ಎನ್‌ಕ್ಲೇವ್‌ನ ನಿವಾಸಿ ಅನಿಲ್ ಕುಮಾರ್ ಬಂಧಿತ. ಸುಳಿವಿನ ಮೇರೆಗೆ ಖಾಸಗಿ ಬಸ್‌ನಲ್ಲಿ ದೆಹಲಿಗೆ ಪ್ರಯಾಣಿಸುತ್ತಿದ್ದ ಅನಿಲ್​​ ಕುಮಾರ್‌ನಿಂದ 39,19,900 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಮಾರ್ತಾಂಡ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಆಗ್ರಾದಲ್ಲಿ ವಸ್ತುಗಳನ್ನು ಖರೀದಿಸಲು ಹಣವನ್ನು ದೆಹಲಿಗೆ ಕೊಂಡೊಯ್ಯುತ್ತಿದ್ದೆ ಎಂದು ಅನಿಲ್​​ ಕುಮಾರ್‌ ಹೇಳಿದ್ದಾರೆ. ಆದರೆ, ದಾಖಲೆಯಿಲ್ಲದ ಕಾರಣ ಅವರನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಎಸ್​ಪಿ ತಿಳಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಣ ದುರ್ಬಳಕೆಯಾಗದಂತೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ. ಸೋಮವಾರ ನಡೆದ ಮತ್ತೊಂದು ದಾಳಿಯಲ್ಲಿ ಛಾಟಾ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಡಿ ಮೆಡಿಕಲ್ ಕಾಲೇಜು ಬಳಿ ವ್ಯಕ್ತಿಯೊಬ್ಬನಿಂದ 3,50,000 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವ್ಯಕ್ತಿಯನ್ನು ಹರಿಯಾಣದ ಫರಿದಾಬಾದ್‌ನ ನಿವಾಸಿ ಶಾಹಿದ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಒಂದೇ ದಿನದ ಅಂತರದಲ್ಲಿ ಬಾಲಕಿ-ಯುವಕ ಆತ್ಮಹತ್ಯೆ: ಚಾಮರಾಜನಗರದ ಪ್ರೇಮಿಗಳ ಸಾವಿಗೆ ಕಾರಣ ನಿಗೂಢ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.