ETV Bharat / bharat

ಕೆಲಸ ಮುಗಿಸಿ ಮನೆಗೆ ಹೋಗ್ತಿದ್ದ ನಾಗಾಲ್ಯಾಂಡ್​ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; ಕೇರಳ ಯುವಕನ ಬಂಧನ

author img

By

Published : Aug 21, 2023, 12:12 PM IST

ನಾಗಾಲ್ಯಾಂಡ್​ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೇರಳ ಯುವಕನನ್ನು ಬಂಧಿಸಲಾಗಿದೆ. ಗಾಯಗೊಂಡ ಸಂತ್ರಸ್ತೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಗಾಲ್ಯಾಂಡ್​ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ
ನಾಗಾಲ್ಯಾಂಡ್​ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ತಿರುವನಂತಪುರಂ (ಕೇರಳ) : ಬದುಕು ಅರಸಿ ಇಲ್ಲಿ ನೆಲೆಸಿರುವ ನಾಗಾಲ್ಯಾಂಡ್ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ದೌರ್ಜನ್ಯ ನೀಡಿದ ಕಲಂಗಳಡಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಕೇರಳದ ತಿರುವನಂತಪುರಂ ನಿವಾಸಿ ಅನೀಶ್ ಬಂಧಿತ ಆರೋಪಿ. ಇಲ್ಲಿನ ತುಂಬೆ ಬಳಿ ಮಹಿಳೆಗೆ ಕಿರುಕುಳ ನೀಡಲು ಯತ್ನಿಸಿ, ಆಕೆಯನ್ನು ಗಾಯಗೊಳಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. 25 ವರ್ಷದ ಅನೀಶ್​​ನನ್ನು ಪೊಲೀಸರು ಸೋಮವಾರ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ, ಆಕೆಯನ್ನೇ ಹಿಂಬಾಲಿಸಿಕೊಂಡು ಬಂದ ಆರೋಪಿ ಅನೀಶ್​, ಲೈಂಗಿಕವಾಗಿ ದೌರ್ಜನ್ಯ ಎಸೆಗಲು ಮುಂದಾಗಿದ್ದಾನೆ. ಈ ವೇಳೆ ಮಹಿಳೆ ಇದನ್ನು ವಿರೋಧಿಸಿದ್ದಾರೆ. ಅನೀಶ್​ ಆಕೆಯನ್ನು ನೆಲಕ್ಕೆ ತಳ್ಳಿ ಅಲ್ಲಿಂದ ಪರಾಗಿಯಾಗಿದ್ದಾನೆ.

ಘಟನೆಯಿಂದ ಆತಂಕಕ್ಕೀಡಾದ ಮಹಿಳೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಾಯಗೊಂಡಿದ್ದ ಮಹಿಳೆಯನ್ನು ರಕ್ಷಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದಾದ ಬಳಿಕ ಮಹಿಳೆ ನೀಡಿದ ಸುಳಿವಿನ ಮೇಲೆ ಜಾಲ ಬೀಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಸದ್ಯ ಮಹಿಳೆ ವೈದ್ಯಕೀಯ ನೆರವು ಪಡೆಯುತ್ತಿದ್ದಾರೆ. ಯಾವುದೇ ಅಪಾಯವಿಲ್ಲ. ಆರೋಪಿಯ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೀವ ಬೆದರಿಕೆ, ರಕ್ಷಣೆ ಕೋರಿ ಮಹಿಳೆ ವಿಡಿಯೋ: ಪತಿಯಿಂದಲೇ ತನಗೆ ಮತ್ತು ಮಕ್ಕಳಿಗೆ ಜೀವ ಬೆದರಿಕೆ ಇದೆ. ನಮ್ಮನ್ನು ರಕ್ಷಿಸಿ ಎಂದು ಮಹಿಳೆಯೊಬ್ಬರು ಮಕ್ಕಳ ಸಹಿತ ವಿಡಿಯೋ ಮಾಡಿ ರಕ್ಷಣೆ ಕೋರಿದ ಪ್ರಕರಣ ಬೆಳಕಿಗೆ ಬಂದಿದೆ. ಹೈದರಾಬಾದ್ ಮೂಲದ ಪೂಜಾ ಗಾಂಧಿ ಎಂಬುವವರು ಪತಿ ವೈಭವ್ ಜೈನ್ ಮತ್ತು ಇನ್ನಿಬ್ಬರಿಂದ ಪ್ರಾಣ ಬೆದರಿಕೆ ಇದೆ ಎಂದು ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮತ್ತೊಂದೆಡೆ ಪೂಜಾ ಗಾಂಧಿ ರಕ್ಷಣೆ ಕೋರಿ ಮಾಡಿರುವ ಸೆಲ್ಫಿ ವಿಡಿಯೋವನ್ನು ಆಕೆಯ ಸಹೋದರ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣ"x" ನಲ್ಲಿ ಹಂಚಿಕೊಂಡು ನಗರ ಪೊಲೀಸ್ ಆಯುಕ್ತರು, ಪ್ರಧಾನ ಮಂತ್ರಿ, ಕೇಂದ್ರ ಸಚಿವರಿಗೆ, ಮುಖ್ಯಮಂತ್ರಿಗೆ ಹಾಗೂ ಇತರರಿಗೆ ಟ್ಯಾಗ್ ಮಾಡಿದ್ದಾರೆ.

ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಗಲಾಟೆಯಾಗಿದೆ. ಅಲ್ಲದೇ, ಪತ್ನಿ ಪೂಜಾ ಗಾಂಧಿ ವಿರುದ್ಧ ಪತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಮಕ್ಕಳ ಸಮೇತ ಮನೆಯಿಂದ ಹೊರಹಾಕಿದ್ದಾನೆ. ಪ್ರಾಣ ಬೆದರಿಕೆಯನ್ನೂ ಹಾಕಿದ್ದಾನೆ. ಆತ ಮಾತ್ರವಲ್ಲದೇ, ಆತನ ಸಂಬಂಧಿಕರಿಂದಲೂ ಅಚಪಾಯವಿದೆ. ಯಾವುದೇ ಕ್ಷಣದಲ್ಲೂ ನಮ್ಮನ್ನು ಕೊಲ್ಲಬಹುದು ಎಂದು ಪೂಜಾಗಾಂಧಿ ವಿಡಿಯೋದಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಮಗನ ಮದುವೆಯಲ್ಲಿ ಅಪ್ಪನಿಗೆ ಪ್ರೇಮಾಂಕುರ, ನಂತರ ಪ್ರೇಮಿಗೆ ವಂಚನೆ ಆರೋಪ ; ಪೊಲೀಸ್ ಠಾಣೆ ಮೆಟ್ಟಿಲೇರಿದ ವೃದ್ಧೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.