ETV Bharat / bharat

ಹಲೋ.. I am..ಶರದ್ ಪವಾರ್​: NCP ಮುಖ್ಯಸ್ಥನ ಹೆಸರಲ್ಲಿ ಬಂದ ಆ ಕರೆ ಯಾವ್ದು? - Maharashtra CM Uddhav Thackrey

ಮಹಾರಾಷ್ಟ್ರದಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಶೀತಲ ಸಮರ ನಡೆಯುತ್ತಿರುವ ಈ ಹೊತ್ತಲ್ಲೇ ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಶರದ್ ಪವಾರ್ ಧ್ವನಿ ಅನುಕರಿಸಿ ಕರೆಯೊಂದು ಬಂದಿದೆ.

ಶರದ್ ಪವಾರ್
ಶರದ್ ಪವಾರ್
author img

By

Published : Aug 12, 2021, 8:47 PM IST

ಮುಂಬೈ (ಮಹಾರಾಷ್ಟ್ರ) : ’ಹಲೋ, ಐ ಯಾಮ್ ಶರದ್ ಪವಾರ್’. ಹೀಗೆ ಶರದ್​ ಪವಾರ್​​ ಧ್ವನಿ ಅನುಕರಿಸಿ ಸಿಎಂ ಉದ್ಧವ್ ಠಾಕ್ರೆಯ ಹೆಚ್ಚುವರಿ ಕಾರ್ಯದರ್ಶಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಕರೆ ಮಾಡಿದ್ದು, ಈ ಸಂಬಂಧ ಥಾಣೆಯ ಗಾವದೇವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಇಂಥ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಶರದ್ ಪವಾರ್​ರಂತೆ ಕರೆ ಮಾಡಿ ಮಾತನಾಡಿರುವುದು ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.

ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಶಿಶ್ ಕುಮಾರ್ ಸಿಂಗ್​ಗೆ ಶರದ್ ಪವಾರ್​ ಧ್ವನಿ ಅನುಕರಿಸಿ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ಈ ವೇಳೆ, ತಾವು ಸೂಚಿಸಿದ ಅಧಿಕಾರಿಯನ್ನು ನಿರ್ದಿಷ್ಟ ಸ್ಥಳಕ್ಕೆ ವರ್ಗಾಯಿಸಬೇಕೆಂದು ತಾಕೀತು ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸಂಶಯಗೊಂಡ ಆಶಿಶ್ ಕುಮಾರ್​​​ ಧ್ವನಿ ಮರು ಪರಿಶೀಲಿಸಿದ್ದಾರೆ. ತನಿಖೆಯ ನಂತರ ಶರದ್ ಪವಾರ್​ ಅಂತಹ ಯಾವುದೇ ಕರೆ ಬಂದಿಲ್ಲ ಎಂದು ತಿಳಿದಿದೆ. ಈ ಸಂಬಂಧ ಆಶಿಶ್​, ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಸಂಸತ್​ನಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಮೋದಿ - ಶಾ ಯಾಕೆ ಉತ್ತರಿಸಲಿಲ್ಲ: ಡೆರೆಕ್ ಒಬ್ರೇನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.