ETV Bharat / bharat

Greubel Forsey, Richard Mille, Rolex.. ₹ 30 ಕೋಟಿ ಮೌಲ್ಯದ ವಿದೇಶಿ ಬ್ರಾಂಡ್ ವಾಚ್‌ಗಳ ಸಮೇತ ವ್ಯಕ್ತಿ ಅರೆಸ್ಟ್​

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸೆರೆಸಿಕ್ಕ ವ್ಯಕ್ತಿಯಿಂದ 30 ಕೋಟಿ ಮೌಲ್ಯದ ವಿದೇಶಿ ಬ್ರಾಂಡ್ ವಾಚ್‌ಗಳನ್ನು ಡಿಆರ್‌ಐ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

Man held at Kolkata airport with watches valued at Rs 30 crore
Greubel Forsey, Richard Mille, Rolex.. ₹ 30 ಕೋಟಿ ಮೌಲ್ಯದ ವಿದೇಶಿ ಬ್ರಾಂಡ್ ವಾಚ್‌ಗಳ ಸಮೇತ ವ್ಯಕ್ತಿ ಅರೆಸ್ಟ್​
author img

By

Published : Jul 22, 2023, 10:34 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ದುಬಾರಿಯಾದ ವಿದೇಶಿ ಬ್ರಾಂಡ್ ವಾಚ್‌ಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಶನಿವಾರ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ಬಂಧಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಂಧಿತನಿಂದ ದುಬಾರಿ ಬೆಲೆಯ ಗ್ರೂಬೆಲ್ ಫೋರ್ಸೆ ಬ್ರಾಂಡ್ ವಾಚ್ ವಶಪಡಿಸಿಕೊಂಡಿದ್ದರೆ, ಆತನ ಮನೆಯಲ್ಲಿ 34 ವಾಚ್​ಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳ ಒಟ್ಟು ಮೌಲ್ಯ ಬರೋಬ್ಬರಿ 30 ಕೋಟಿ ರೂಪಾಯಿಗಳಿಗಿಂತ ಹೆಚ್ಚು!.

  • Directorate of Revenue Intelligence (DRI), Mumbai zonal Unit arrested a person and recovered more than 30 smuggled high-end premium watches of foreign origin from his residence. Most of these watches are limited edition watches of exceptionally high value. The total market value… pic.twitter.com/rm28EnV9Wi

    — ANI (@ANI) July 22, 2023 " class="align-text-top noRightClick twitterSection" data=" ">

ಆರೋಪಿ ಸಿಂಗಾಪುರದಿಂದ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಈ ವೇಳೆ, ಕಾರ್ಯಾಚರಣೆ ಕೈಗೊಂಡು ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಸೆರೆಹಿಡಿಯಲಾಗಿದೆ. ನಂತರ ಆತ ಮೇಲೆಯೂ ದಾಳಿ ನಡೆಸಲಾಯಿತು. ಇದರಿಂದ ವಿವಿಧ ಪ್ರೀಮಿಯಂ ಬ್ರ್ಯಾಂಡ್‌ಗಳ 34 ಉನ್ನತ ಮಟ್ಟದ ಕೈಗಡಿಯಾರಗಳನ್ನು ವಶ ಪಡಿಸಿಕೊಳ್ಳಲು ಕಾರಣವಾಗಿದೆ. ಇವುಗಳಲ್ಲಿ ಗ್ರೂಬೆಲ್ ಫೋರ್ಸೆ, ಪರ್ನೆಲ್, ಲೂಯಿ ವಿಟಾನ್, ಎಂಬಿ ಆ್ಯಂಡ್​ ಎಫ್​, ಮ್ಯಾಡ್, ರೋಲೆಕ್ಸ್, ಆಡೆಮರ್ಸ್ ಪಿಗೆಟ್, ರಿಚರ್ಡ್ ಮಿಲ್ಲೆ ಅಂತಹ ದುಬಾರಿ ವಾಚ್​ಗಳು ಸೇರಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ವಾಚ್‌ಗಳಲ್ಲಿ ಹೆಚ್ಚಿನವು ಅತ್ಯಧಿಕ ಮೌಲ್ಯದ ಸೀಮಿತ ಆವೃತ್ತಿಯ ವಾಚ್‌ಗಳಾಗಿವೆ. ಎಲ್ಲ ವಾಚ್‌ಗಳ ಒಟ್ಟು ಮಾರುಕಟ್ಟೆ ಮೌಲ್ಯವು 30 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಕಸ್ಟಮ್ಸ್ ಸುಂಕ ಶುಲ್ಕವನ್ನು ಪಾವತಿಸದೇ ಈ ವಾಚ್​ಗಳನ್ನು ದೇಶಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಅವರು ವಿವರಿಸಿದ್ದಾರೆ.

ಅಲ್ಲದೇ, ಇದಕ್ಕೂ ಮುನ್ನ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ವಿದೇಶಿ ಮೂಲದ 34 ಕ್ಕೂ ಹೆಚ್ಚು ಕಳ್ಳಸಾಗಣೆ ಮಾಡಲಾದ ಹೈಎಂಡ್ ಪ್ರೀಮಿಯಂ ವಾಚ್‌ಗಳನ್ನು ಹೊಂದಿದ್ದಾನೆ ಎಂದ ಮಾಹಿತಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಮುಂಬೈ ವಲಯ ತಂಡಕ್ಕೆ ಸಿಕ್ಕಿತ್ತು. ಸದ್ಯ ಆ ವ್ಯಕ್ತಿಯು ವಿದೇಶದಲ್ಲಿದ್ದಾನೆ. ವಿದೇಶಿ ಮೂಲದ ಕೆಲವು ಉನ್ನತ ಮಟ್ಟದ ಪ್ರೀಮಿಯಂ ವಾಚ್‌ಗಳನ್ನು ಹೊತ್ತುಕೊಂಡು ಭಾರತಕ್ಕೆ ಹಿಂತಿರುಗುತ್ತಾನೆ ಎಂಬ ಮಾಹಿತಿಯೂ ಲಭ್ಯವಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

ಈ ಗುಪ್ತಚರ ಮಾಹಿತಿಯ ಮೇರೆಗೆ ಸಿಂಗಾಪುರದಿಂದ ಹಿಂತಿರುಗುತ್ತಿದ್ದಾಗ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಸೆರೆಹಿಡಿಯಲಾಯಿತು. ಈ ವೇಳೆ ದುಬಾರಿ ಗ್ರೂಬೆಲ್ ಫೋರ್ಸೆ ಬ್ರಾಂಡ್ ವಾಚ್​​​​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬ್ಯಾಗೇಜ್ ಮೂಲಕ ವಾಚ್‌ಗಳನ್ನು ಆಮದು ಮಾಡಿಕೊಂಡರೆ ಬ್ಯಾಗೇಜ್ ನಿಯಮಗಳ ಪ್ರಕಾರ 38.5 ಪ್ರತಿಶತದಷ್ಟು ಕಸ್ಟಮ್ಸ್ ಸುಂಕವನ್ನು ಕಟ್ಟಬೇಕಾಗುತ್ತದೆ. ಆದರೆ, ಈ ಸುಂಕ ಶುಲ್ಕವನ್ನು ಪಾವತಿಸದೇ ಕಳ್ಳ ಮಾರ್ಗದಲ್ಲಿ ಸಾಗಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 104ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗುಜರಾತ್​ನ ಮುಂದ್ರಾ ಬಂದರಿನಲ್ಲಿ 48 ಕೋಟಿ ಮೌಲ್ಯದ ಇ ಸಿಗರೇಟ್​ಗಳ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.