ETV Bharat / bharat

ದುಬೈನಿಂದ ದೆಹಲಿಗೆ ಬಂದಿಳಿದ ವ್ಯಕ್ತಿಯಲ್ಲಿ ₹58 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ, ಬಂಧನ - ದುಬೈನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದ ವ್ಯಕ್ತಿ ಸೆರೆ

ಜುಲೈ 31ರಂದು ದುಬೈನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿಯನ್ನು ತಪಾಸಣೆಗೊಳಪಡಿಸಿದ ಅಧಿಕಾರಿಗಳು ಅಪಾರ ಪ್ರಮಾಣದ ಅಕ್ರಮ ವಿದೇಶಿ ಕರೆನ್ಸಿಯನ್ನು ವಶಕ್ಕೆ ಪಡೆದಿದ್ದಾರೆ.

Man held at Delhi Airport with foreign currency
ದೆಹಲಿ ವಿಮಾನ ನಿಲ್ದಾಣದಲ್ಲಿ 58 ಲಕ್ಷ ಮೌಲ್ಯದ ವಿದೇಶಿ ನೋಟುಗಳ ಸಮೇತ ವ್ಯಕ್ತಿಯ ಸೆರೆ
author img

By

Published : Aug 2, 2022, 3:39 PM IST

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 58 ಲಕ್ಷ ರೂ.ಗೂ ಅಧಿಕ ಮೌಲ್ಯದ ವಿದೇಶಿ ಕರೆನ್ಸಿಗಳ ಸಮೇತ ವ್ಯಕ್ತಿಯೋರ್ವನನ್ನು ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ಧಾರೆ. ಈ ವ್ಯಕ್ತಿ ದುಬೈನಿಂದ ಬಂದಿದ್ದು, 2,62,500 ಸೌದಿ ರಿಯಾಲ್ ಮತ್ತು 5 ಸಾವಿರ ಅಮೆರಿಕ ಡಾಲರ್​ ಜಪ್ತಿ ಮಾಡಲಾಗಿದೆ.

ಜುಲೈ 31ರಂದು ವಿಮಾನ ನಿಲ್ದಾಣಕ್ಕೆ ಬಂದಿಳಿದ ಈ ವ್ಯಕ್ತಿಯನ್ನು ಸಂಶಯ ಮೇರೆಗೆ ತಪಾಸಣೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಬ್ಯಾಗ್​ನಲ್ಲಿ ವಿದೇಶಿ ನೋಟುಗಳು ಪತ್ತೆಯಾಗಿವೆ. ಇವುಗಳ ಒಟ್ಟು ಮೌಲ್ಯ 58,16,625 ರೂ.ಗಳಾಗಿವೆ. ವಶಕ್ಕೆ ಪಡೆದ ಹಣವನ್ನು ಭಾರತದ ರಾಷ್ಟ್ರಪತಿ ಹೆಸರಲ್ಲಿ ಬ್ಯಾಂಕ್​ನಲ್ಲಿ ಠೇವಣಿ ಇರಿಸಲಾಗಿದೆ. ಆರೋಪಿಯನ್ನು ಸೆಕ್ಷನ್​ 104ರಡಿ ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದರು.

ಇದನ್ನೂ ಓದಿ: ಡ್ರಗ್ಸ್​ಗೆ ವ್ಯಸನಕ್ಕೆ ಯುವಕ ಬಲಿ; ಇದ್ದೊಬ್ಬ ಮಗನನ್ನೂ ಕಳೆದುಕೊಂಡ ಪೋಷಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.