ರಾಯಪುರ: ಛತ್ತೀಸ್‌ಗಢದ ಸೂರಜ್‌ಪುರದಲ್ಲಿ ಲಾಕ್‌ಡೌನ್ ಮಧ್ಯೆ ಔಷಧಿ ಖರೀದಿಸಲು ಹೊರಟಿದ್ದ ವ್ಯಕ್ತಿಯೊಬ್ಬನನ್ನು ಜಿಲ್ಲಾಧಿಕಾರಿಯೊಬ್ಬರು ತಡೆದು, ಆತನಿಗೆ ಕಪಾಳಮೋಕ್ಷ ಮಾಡಿ ಮೊಬೈಲ್ ಕಸಿದು ರಸ್ತೆಗೆಸೆದ ಪ್ರಸಂಗ ನಡೆದಿದೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಡೀಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
-
Shocking visuals from Surajpur in Chhattisgarh collector snatched phone, slapped a boy gone out to buy medicines, polices also caned him, FIR lodged against the boy! @bhupeshbaghel @CG_Police @drramansingh @ndtv @ndtvindia @manishndtv @rohini_sgh @ajaiksaran @sunilcredible pic.twitter.com/T3c4Y6zW7s
— Anurag Dwary (@Anurag_Dwary) May 22, 2021 " class="align-text-top noRightClick twitterSection" data="
">Shocking visuals from Surajpur in Chhattisgarh collector snatched phone, slapped a boy gone out to buy medicines, polices also caned him, FIR lodged against the boy! @bhupeshbaghel @CG_Police @drramansingh @ndtv @ndtvindia @manishndtv @rohini_sgh @ajaiksaran @sunilcredible pic.twitter.com/T3c4Y6zW7s
— Anurag Dwary (@Anurag_Dwary) May 22, 2021Shocking visuals from Surajpur in Chhattisgarh collector snatched phone, slapped a boy gone out to buy medicines, polices also caned him, FIR lodged against the boy! @bhupeshbaghel @CG_Police @drramansingh @ndtv @ndtvindia @manishndtv @rohini_sgh @ajaiksaran @sunilcredible pic.twitter.com/T3c4Y6zW7s
— Anurag Dwary (@Anurag_Dwary) May 22, 2021
ಮೊಬೈಲ್ನಲ್ಲಿ ಸೆರೆಹಿಡಿಯಲಾದ ವಿಡಿಯೋವೊಂದರಲ್ಲಿ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಅವರು ವ್ಯಕ್ತಿಯೋರ್ವನ ಬಳಿಗೆ ಬಂದು ಆತನ ಬಳಿಯಿದ್ದ ಗುರುತಿನ ಚೀಟಿ ಪಡೆಯುತ್ತಾರೆ. ನಂತರ ಮೊಬೈಲ್ ಫೋನ್ ನೀಡುವಂತೆ ಕೇಳುತ್ತಾರೆ. ಆತ ಮೊಬೈಲ್ ಕೊಟ್ಟ ತಕ್ಷಣ ಅದನ್ನು ನೆಲಕ್ಕೆಸೆಯುತ್ತಾರೆ. ಸಿಟ್ಟಿಗೆದ್ದು ಇದ್ದಕ್ಕಿದ್ದಂತೆ ವ್ಯಕ್ತಿಯ ಕಪಾಳಕ್ಕೂ ಹೊಡೆಯುತ್ತಾರೆ.
ಈ ವ್ಯಕ್ತಿಯನ್ನು ಸಾಹಿಲ್ ಗುಪ್ತಾ ಎಂದು ಗುರುತಿಸಲಾಗಿದ್ದು, ಕೋವಿಡ್ ನಿಯಮ ಉಲ್ಲಂಘಸಿದ ಕಾರಣಕ್ಕೆ ಆತನ ವಿರುದ್ಧ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದರು.
ಜಿಲ್ಲಾಧಿಕಾರಿ ನಡೆಗೆ ಸಿಎಂ ಗರಂ: ಡಿಸಿಗೆ ಎತ್ತಂಗಡಿ ಶಿಕ್ಷೆ
‘ಯಾವುದೇ ಅಧಿಕಾರಿಯ ವೃತ್ತಿ ಜೀವನದಲ್ಲಿ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ಘಟನೆ ಸಂಬಂಧ ನಾನು ಆ ಯುವಕ ಮತ್ತು ಕುಟುಂಬದ ಕ್ಷಮೆ ಯಾಚಿಸುತ್ತೇನೆ. ಛತ್ತೀಸ್‌ಗಢದಲ್ಲಿ ಇಂತಹ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ. ಡಿಸಿ ರಣಬೀರ್ ಶರ್ಮಾ ಅವರ ಸ್ಥಳಾಂತರಕ್ಕೆ ತಕ್ಷಣದಿಂದ ಜಾರಿಯಾಗುವಂತೆ ಸೂಚನೆ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಟ್ವೀಟ್ ಮಾಡಿದ್ದಾರೆ.
-
सोशल मीडिया के माध्यम से सूरजपुर कलेक्टर रणबीर शर्मा द्वारा एक नवयुवक से दुर्व्यवहार का मामला मेरे संज्ञान में आया है।
— Bhupesh Baghel (@bhupeshbaghel) May 23, 2021 " class="align-text-top noRightClick twitterSection" data="
यह बेहद दुखद और निंदनीय है। छत्तीसगढ़ में इस तरह का कोई कृत्य कतई बर्दाश्त नहीं किया जाएगा।
कलेक्टर रणबीर शर्मा को तत्काल प्रभाव से हटाने के निर्देश दिए हैं।
">सोशल मीडिया के माध्यम से सूरजपुर कलेक्टर रणबीर शर्मा द्वारा एक नवयुवक से दुर्व्यवहार का मामला मेरे संज्ञान में आया है।
— Bhupesh Baghel (@bhupeshbaghel) May 23, 2021
यह बेहद दुखद और निंदनीय है। छत्तीसगढ़ में इस तरह का कोई कृत्य कतई बर्दाश्त नहीं किया जाएगा।
कलेक्टर रणबीर शर्मा को तत्काल प्रभाव से हटाने के निर्देश दिए हैं।सोशल मीडिया के माध्यम से सूरजपुर कलेक्टर रणबीर शर्मा द्वारा एक नवयुवक से दुर्व्यवहार का मामला मेरे संज्ञान में आया है।
— Bhupesh Baghel (@bhupeshbaghel) May 23, 2021
यह बेहद दुखद और निंदनीय है। छत्तीसगढ़ में इस तरह का कोई कृत्य कतई बर्दाश्त नहीं किया जाएगा।
कलेक्टर रणबीर शर्मा को तत्काल प्रभाव से हटाने के निर्देश दिए हैं।
ಐಎಎಸ್ ಅಸೋಸಿಯೇಷನ್ ಖಂಡನೆ:
‘ಛತ್ತೀಸ್‌ಗಢದ ಸೂರಜ್‌ಪುರದ ಜಿಲ್ಲಾಧಿಕಾರಿ ನಡವಳಿಕೆಯನ್ನು ಐಎಎಸ್ ಅಸೋಸಿಯೇಷನ್ ಕೂಡಾ ತೀವ್ರವಾಗಿ ಖಂಡಿಸಿದೆ. ಇದು ಸ್ವೀಕಾರಾರ್ಹವಲ್ಲ. ಸೇವೆ ಮತ್ತು ನಾಗರಿಕತೆಯ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಸಾರ್ವಜನಿಕರ ಸೇವೆಯಲ್ಲಿರುವವರು ಎಲ್ಲಾ ಸಮಯದಲ್ಲೂ ಪರಾನುಭೂತಿ ಹೊಂದಿರಬೇಕು. ಈ ಕಷ್ಟ ಕಾಲದಲ್ಲಿ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು’ ಎಂದು ಐಎಎಸ್ ಅಸೋಸಿಯೇಷನ್ ಹೇಳಿದೆ.