ETV Bharat / bharat

ಗೆಳತಿಯೊಂದಿಗೆ ಓಡಿಹೋದ ಮಗ, ತಂದೆಗೆ ತಾಲಿಬಾನ್ ರೀತಿ ಶಿಕ್ಷೆ: ಮುಜುಗರಕ್ಕೆ ಒಳಗಾಗಿ ಅಪ್ಪ ಆತ್ಮಹತ್ಯೆ - ಆರು ಜನರ ವಿರುದ್ಧ ಪ್ರಕರಣ ದಾಖಲು

ಮಧ್ಯಪ್ರದೇಶದ ಛತ್ತರ್‌ಪುರದಿಂದ ತಾಲಿಬಾನ್‌ಗೆ ಶಿಕ್ಷೆ ವಿಧಿಸುವ ವಿಡಿಯೋ ವೈರಲ್​- ಗೆಳತಿಯೊಂದಿಗೆ ಓಡಿಹೋದ ಮಗ- ತಂದೆಗೆ ತಾಲಿಬಾನ್ ರೀತಿ ಶಿಕ್ಷೆ- ಮುಜುಗರಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಹುಡುಗನ ಅಪ್ಪ

Man found hanging after son elopes in Chhatarpur
ಗೆಳತಿಯೊಂದಿಗೆ ಓಡಿಹೋದ ಮಗ, ತಂದೆಗೆ ತಾಲಿಬಾನ್ ರೀತಿಯಲ್ಲಿ ಶಿಕ್ಷೆ
author img

By

Published : Mar 14, 2023, 6:15 PM IST

ಗೆಳತಿಯೊಂದಿಗೆ ಓಡಿಹೋದ ಮಗ, ತಂದೆಗೆ ತಾಲಿಬಾನ್ ರೀತಿಯಲ್ಲಿ ಶಿಕ್ಷೆ..!

ಛತ್ತರ್‌ಪುರ (ಮಧ್ಯಪ್ರದೇಶ): ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಚಂದ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಇಲ್ಲೊಬ್ಬ ಹುಡುಗ ತನ್ನ ಗೆಳತಿಯೊಂದಿಗೆ ಓಡಿಹೋಗಿದ್ದಾನೆ. ಇದರಿಂದ ಆಕ್ರೋಶಗೊಂಡ ಹುಡುಗಿಯ ಕಡೆಯವರು ಸೇರಿದಂತೆ ಗ್ರಾಮಸ್ಥರು, ಹುಡುಗನ ತಂದೆಗೆ ತಾಲಿಬಾನ್‌ ರೀತಿಯಲ್ಲೇ ಶಿಕ್ಷೆ ವಿಧಿಸಿದ್ದಾರೆ.

ಹೌದು, ಮೊದಲು ಹುಡಗನ ತಂದೆಯ ಎರಡೂ ಕೈಕಾಲುಗಳನ್ನು ಕಟ್ಟಿದ್ದಾರೆ. ಬಳಿಕ, ಪಂಚಾಯ್ತಿಗೆ ಕರೆತಂದು ಗ್ರಾಮದ ಬೇವಿನ ಮರಕ್ಕೆ ಸರಪಳಿಯಿಂದ ಕಟ್ಟಿ ಹಾಕಿದ್ದಾರೆ. 2 ದಿನಗಳ ಕಾಲ ಹುಡುಗನ ತಂದೆಗೆ ತಾಲಿಬಾನ್​ ರೀತಿಯಲ್ಲೇ ಶಿಕ್ಷೆ ವಿಧಿಸಲಾಗಿದೆ. ಯುವಕ ತಮ್ಮ ಹುಡುಗಿಯ ಜೊತೆ ಓಡಿಹೋಗಿದ್ದಕ್ಕಾಗಿ, ಹುಡುಗಿಯ ಮನೆಯವರು, ಹುಡುಗನ ತಂದೆಯನ್ನು ಮರಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ.

ಎರಡು ದಿನಗಳ ನಂತರ, ಹುಡುಗನ ತಂದೆಯನ್ನು ಆ ಬಂಧನದಿಂದ ಬಿಡುಗಡೆಗೊಳಿಸಲಾಗಿದೆ. ಈ ಘಟನೆಯಿಂದ ಮನನೊಂದು ಹುಡುಗನ ಅಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮತ್ತೊಂದೆಡೆ, ಪೊಲೀಸರು ಈ ಪ್ರಕರಣವನ್ನು ಪ್ರಾಥಮಿಕವಾಗಿ ಆತ್ಮಹತ್ಯೆ ಎಂದು ಪರಿಗಣಿಸಿದ್ದಾರೆ. ಆದರೆ, ತನ್ನ ಪತಿಯನ್ನು ಕೊಲೆ ಮಾಡಲಾಗಿದೆ ಎಂದು ಮೃತನ ಪತ್ನಿ ಆರೋಪಿಸಿದ್ದಾರೆ.

ಹುಡುಗನ ಪೋಷಕರು ಒತ್ತೆಯಾಳು: ಮಾಹಿತಿಯ ಪ್ರಕಾರ, ಜಿಲ್ಲೆಯ ಚಂದ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಬಚೋನ್ ಚೌಕಿ ವ್ಯಾಪ್ತಿಯ ಪಂಚಂಪುರ ಗ್ರಾಮದಲ್ಲಿ ವಾಸವಾಗಿರುವ ಉಧಾ ಅಹಿರ್ವಾರ್ ಮತ್ತು ಅವರ ಪತ್ನಿ ಸಾವಿತ್ರಿ ಅಹಿರ್ವಾರ್ ಅವರ ಮಗ ತನ್ನ ಗೆಳತಿಯೊಂದಿಗೆ ಪರಾರಿಯಾಗಿದ್ದನು. ನಂತರ ಪೀರಾ ಗ್ರಾಮದ ಹುಡುಗಿಯ ಕಡೆಯವರು ಇಬ್ಬರನ್ನೂ ಹುಡುಕಲು ತೀವ್ರ ಶೋಧ ಆರಂಭಿಸಿದರು. ಆದರೆ, ಅವರ ಪ್ರಯತ್ನ ವಿಫಲವಾದಾಗ, ಹುಡುಗನ ಪೋಷಕರನ್ನು ಒತ್ತೆಯಾಳಾಗಿ ತೆಗೆದುಕೊಂಡು ತಮ್ಮೊಂದಿಗೆ ಕರೆದೊಯ್ದರು. ಹುಡುಗಿಯ ಕಡೆಯವರು ಸಮಾಜದ ಜನರ ಪಂಚಾಯಿತಿಗೆ ಕರೆದರು.

ನಿಮ್ಮ ಮಗ ಮತ್ತು ನಮ್ಮ ಹುಡುಗಿಯನ್ನು ಎಲ್ಲಿದ್ದಾರೆ ಎಂಬುದನ್ನು ಹುಡುಕಿಕೊಡುವಂತೆ ಕೇಳಿದರು. ಇಲ್ಲದಿದ್ದರೆ, ಹುಡುಗನ ಪೋಷಕರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗುತ್ತದೆ. ಈ ಬಗ್ಗೆ ಹುಡುಗನ ಪೋಷಕರು, ಇಬ್ಬರನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಆ ಮೇಲೆ ಏನಾಯಿತೆಂದರೆ, ಹುಡುಗಿಯ ಕಡೆಯವರು ಎದ್ದು ಬಂದು, ಉಧಾ ಅಹಿರ್ವಾರ್​ನ ಕೈಕಾಲುಗಳನ್ನು ಕಟ್ಟಿದರು. ಬಳಿಕ ಬೇವಿನ ಮರಕ್ಕೆ ಸರಪಳಿಯಿಂದ ಕಟ್ಟಿ ಹಾಕಿ, ಎರಡು ದಿನಗಳವರೆಗೆ ಕೆಟ್ಟದಾಗಿ ಥಳಿಸಿದ್ದಾರೆ.

ಈ ಬಂಧನದಿಂದ ಬಿಡುಗಡೆ ಮಾಡಿದ್ದು ಹೀಗೆ?: ಹುಡುಗಿಯ ಕಡೆಯವರು ನನ್ನ ಪತಿಯನ್ನು ಎರಡು ದಿನವರೆಗೆ ಮರಕ್ಕೆ ಕಟ್ಟಿ ಹಾಕಿ, ಅವರೊಂದಿಗೆ ನಿರಂತರವಾಗಿ ಜಗಳವಾಡಿದರು. ಎರಡು ದಿನಗಳ ನಂತರ, ವಿಷಯ ಎಲ್ಲೆಡೆ ಹರಡಿತು. ಅಷ್ಟರಲ್ಲಿ ನಾವು ಹಲವು ಬಾರಿ ಪೊಲೀಸರಿಗೆ ಕರೆ ಮಾಡಿದರೂ ಕೂಡಾ ಪೊಲೀಸರು ಮಾತ್ರ ಸ್ಥಳಕ್ಕೆ ಬರಲಿಲ್ಲ. ಎರಡು ದಿನಗಳ ನಂತರ ಆ ಬಂಧನದಿಂದ ಬಿಡುಗಡೆಗೊಳಿಸಲಾಗಿದೆ.

ಅದು ಆತ್ಮಹತ್ಯೆಯಲ್ಲ ಕೊಲೆ - ಪತ್ನಿ ಆರೋಪ: ಬಂಧನದಿಂದ ಬಿಡುಗಡೆಯಾದ ಕೂಡಲೇ ನಾವಿಬ್ಬರೂ ಮನೆಗೆ ಬಂದಿದ್ದೇವೆ. ಆಗ ನಾನು ಮಲ ವಿಸರ್ಜನೆಗೆಂದು ಕಾಡಿಗೆ ಹೋಗಿ ವಾಪಸ್ ಬಂದಾಗ, ನನ್ನ ಗಂಡ ಮೃತಪಟ್ಟಿರುವುದನ್ನು ನೋಡಿದ್ದೇನೆ. ನನ್ನ ಪತಿಯು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ನಾವಿಬ್ಬರೂ ನಮ್ಮ ಮನೆಗೆ ಬಂದಾಗ, ಹುಡುಗಿಯ ಮನೆಯ ಕೆಲವರು ನಮ್ಮನ್ನು ಹಿಂಬಾಲಿಸುತ್ತಿದ್ದರು. ನಾನು ಶೌಚಾಲಯಕ್ಕೆ ಹೋದಾಗ ಅವರು, ನನ್ನ ಗಂಡ ಮನೆಯಲ್ಲಿ ಒಬ್ಬನೇ ಇರುವುದನ್ನು ನೋಡಿ ಕೊಲೆ ಮಾಡಿದ್ದಾರೆ. ಆ ಹುಡುಗಿ ಮನೆಯವರೇ ನನ್ನ ಗಂಡನನ್ನು ಹತ್ಯೆ ಮಾಡಿದ್ದಾರೆ ಎಂದು ಮೃತರ ಪತ್ನಿ ಸಾವಿತ್ರಿ ಆರೋಪಿಸಿದರು.

ಆರು ಜನರ ವಿರುದ್ಧ ಪ್ರಕರಣ ದಾಖಲು, ತನಿಖೆ ಆರಂಭ: ಈ ಕುರಿತು ಮಾಹಿತಿ ನೀಡಿದ ಛತ್ತರ್‌ಪುರ ಎಸ್ಪಿ ಸಚಿನ್ ಶರ್ಮಾ ಅವರು, ಮಾರ್ಚ್ 4ರಂದು ಪ್ರಕರಣ ನಡೆದಿದೆ. ಆರು ಜನ ಆರೋಪಿಗಳ ವಿರುದ್ಧ ಸೆಕ್ಷನ್​ 306, 341 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಲ್ಲರ ಹುಡುಕಾಟ ಪ್ರಾರಂಭವಾಗಿದೆ ಎಂದರು.

ಈ ಪ್ರಕರಣದ ಕುರಿತು ಮಾಹಿತಿ ನೀಡಿದ ಚಂದ್ಲಾ ಪೊಲೀಸ್ ಠಾಣೆಯ ಪ್ರಭಾರಿ ಅತುಲ್ ದೀಕ್ಷಿತ್, ಪ್ರೇಮಿಗಳಿಬ್ಬರು ಕೂಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಅಲ್ಲಿಂದ ಓಡಿಹೋಗಿದ್ದಾರೆ. ನಂತರ ಈ ಘಟನೆ ಸಂಭವಿಸಿದ್ದು, ಎರಡು ದಿನಗಳಿಂದ ನಡೆದ ಹಲ್ಲೆ ಪ್ರಕರಣದ ಬಗ್ಗೆ ಯಾರೂ ಕೂಡಾ ದೂರು ನೀಡಿರಲಿಲ್ಲ ಎಂದು ತಿಳಿಸಿದರು. ಒತ್ತೆಯಾಳಾಗಿರುವ ವಿಡಿಯೋ ಬಯಲಿಗೆ ಬಂದ ನಂತರ ವಿಷಯದ ಗಂಭೀರತೆ ಅರಿತು ತನಿಖೆ ಕೈಗೊಂಡಿದ್ದಾಗಿ ಹೇಳಿದರು.

ಇದನ್ನೂ ಓದಿ: ನಕಲಿ ದಾಖಲಾತಿ ನೀಡಿ ಡಿಲವರಿ ಬಾಯ್ಸ್ ಕೆಲಸ : ದುಬಾರಿ ಫೋನ್‌ಗಳನ್ನು ಕದ್ದು ಪರಾರಿಯಾಗಿದ್ದ ಇಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.