ETV Bharat / bharat

ಏರ್​ಗನ್ ಮಿಸ್​ಫೈರ್ ಆಗಿ ಯುವಕ ಸಾವು: ನೂರು ಕಿ.ಮೀ ದೂರದ ಆಸ್ಪತ್ರೆ ಶಿಫಾರಸು ಮಾಡಿದ್ದ ವೈದ್ಯರು - ಏರ್​ಗನ್ ಅವಘಡದಲ್ಲಿ ವ್ಯಕ್ತಿ ಸಾವು

ಏರ್​ಗನ್ ಮಿಸ್​ಫೈರ್ ಆಗಿ ತೆಲಂಗಾಣದಲ್ಲಿ ಯುವಕನೋರ್ವ ಸಾವನ್ನಪ್ಪಿದ್ದು, ಏರ್​ ಗನ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Man dies in air gun misfire in Telangana
ಏರ್​ಗನ್ ಮಿಸ್​ಫೈರ್ ಆಗಿ ಯುವಕ ಸಾವು: ನೂರು ಕಿ.ಮೀ ದೂರದ ಆಸ್ಪತ್ರೆ ಶಿಫಾರಸು ಮಾಡಿದ್ದ ವೈದ್ಯರು
author img

By

Published : Nov 4, 2021, 7:23 PM IST

ಸಿದ್ದಿಪೇಟ್(ತೆಲಂಗಾಣ): ಏರ್​ಗನ್ ಮಿಸ್​ಫೈರ್ ಆಗಿ 20 ವರ್ಷದ ಯುವಕನೋರ್ವ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೃತನನ್ನು ಮುಸಾಫ್​ ಎಂದು ಗುರುತಿಸಲಾಗಿದ್ದು, ಈ ಯುವಕ ಹೈದರಾಬಾದ್​ನಲ್ಲಿ ವಾಸವಾಗಿದ್ದನು.

ಮುಸಾಫ್​ ಶಲಖಾಪುರದಲ್ಲಿರುವ ತನ್ನ ಸಂಬಂಧಿಗಳ ಮನೆಗೆ ಸ್ನೇಹಿತರೊಂದಿಗೆ ತೆರಳಿದ್ದಾಗ ಘಟನೆ ನಡೆದಿದೆ. ಪೊಲೀಸರ ಪ್ರಕಾರ ಮಧ್ಯರಾತ್ರಿ ಆಕಸ್ಮಿಕವಾಗಿ ಗನ್ ಮಿಸ್​ಫೈರ್ ಆಗಿ ಮುಸಾಫ್​ ಗಾಯಗೊಂಡಿದ್ದ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ.

ಸ್ಥಳೀಯ ಆಸ್ಪತ್ರೆಯ ವೈದ್ಯರು ಹೈದರಾಬಾದ್​ನಿಂದ ಸುಮಾರು ನೂರು ಕಿಲೋಮೀಟರ್ ದೂರದಲ್ಲಿರುವ ಸಿದ್ದಿಪೇಟ್​​ನ ಆಸ್ಪತ್ರೆಗೆ ಗಾಯಾಳುವನ್ನು ತೆಗೆದುಕೊಂಡು ಹೋಗಲು ಶಿಫಾರಸು ಮಾಡಿದ್ದಾರೆ. ಆತನನ್ನು ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಸಂಬಂಧಿಗಳು ಹೇಳಿದ್ದಾರೆ.

ಮಾದ್ದೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಏರ್​ಗನ್ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ರಾಜ್ಯಸಭೆಯ ಮಾಜಿ MP ಬದುಕಿದ್ದಾನೆಂದು ಬಿಂಬಿಸಿ ಸುಮಾರು ಒಂದು ಕೋಟಿ ರೂಪಾಯಿ ವಂಚಿಸಲು ಯತ್ನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.