ಅರವಳ್ಳಿ (ಗುಜರಾತ್): ಜಿಲ್ಲೆಯ ಗೋಧಕುಲ್ಲಾ ಗ್ರಾಮದಲ್ಲಿ ಗ್ರೆನೇಡ್ ಸ್ಫೋಟ ಸಂಭವಿಸಿ ವ್ಯಕ್ತಿ ಹಾಗೂ ಆತನ ಪುತ್ರಿ ಮೃತಪಟ್ಟಿದ್ದಾರೆ. ಆಗಸ್ಟ್ 28 ರಂದು ಸಂಭವಿಸಿದ ಸ್ಫೋಟದಲ್ಲಿ ಇವರಿಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಕ್ತಿಗೆ ಕೊಳದ ಬಳಿ ಗ್ರೆನೇಡ್ ಸಿಕ್ಕಿದ್ದು, ಸ್ಫೋಟದಲ್ಲಿ ಅವರ ಕೈಗೆ ಗಂಭೀರ ಗಾಯವಾಗಿದೆ. ಆದರೆ, ಅಲ್ಲಿ ಸ್ಫೋಟಕ ವಸ್ತು ಹೇಗೆ ಬಂತು ಅನ್ನೋದ್ರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯು ಬಂದೂಕು, ಬಾಂಬ್, ಗ್ರೆನೇಡ್ಗಳ ಬಗ್ಗೆ ಸಾಕಷ್ಟು ಚಿತ್ರಗಳನ್ನು ಸಂಗ್ರಹಿಸಿದ್ದರು ಎನ್ನಲಾಗಿದೆ. ಅವರು ಪೊಲೀಸ್ ಮತ್ತು ಭಾರತೀಯ ಸೇನೆ ಬಗ್ಗೆ ಪ್ಯಾಷನ್ ಹೊಂದಿದ್ದರು ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ.
ಈವರೆಗೂ ಯಾರನ್ನು ಬಂಧಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಮತ್ತು ಸ್ಥಳೀಯ ಅಪರಾಧ ವಿಭಾಗಗಳ ತಂಡಗಳು ಪೊಲೀಸರೊಂದಿಗೆ ಸೇರಿ ತನಿಖೆ ನಡೆಸುತ್ತಿವೆ. ವ್ಯಕ್ತಿಯ ಬಳಿಯಿದ್ದ ಫೋಟೋಗಳು ಹಾಗೂ ಅವರ ಕೈಗೆ ಗ್ರೆನೇಡ್ ಎಲ್ಲಿ, ಹೇಗೆ ಸಿಕ್ಕಿತು ಅನ್ನೋದ್ರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ದಂಧೆ : Is it offence in India ಎಂದು ಪೊಲೀಸರಿಗೇ ಪ್ರಶ್ನಿಸಿದ ಸೋನಿಯಾ