ETV Bharat / bharat

ಅತ್ಯಾಚಾರಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಹರಿತ ಆಯುಧದಿಂದ ವಿಧವೆ ಕಣ್ಣಿಗೆ ಇರಿದ ಕಿರಾತಕ! - Uttar Pradesh rape case

ಶ್ರಾವಸ್ತಿಯ ಸೋನ್ವಾ ಪ್ರದೇಶದಲ್ಲಿ ಯುವಕನೊಬ್ಬ ಮಹಿಳೆಗೆ ಊಟ ಕೊಡುವ ನೆಪದಲ್ಲಿ ಮನೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಹರಿತವಾದ ಆಯುಧದಿಂದ ಆಕೆಯ ಕಣ್ಣಿಗೆ ಇರಿದು ಗಾಸಿಗೊಳಿಸಿದ್ದಾನೆ.

rape
rape
author img

By

Published : May 7, 2022, 11:16 AM IST

ಶ್ರಾವಸ್ತಿ(ಉತ್ತರ ಪ್ರದೇಶ): ಊಟ ಕೊಡುವ ನೆಪದಲ್ಲಿ ವಿಧವೆ ಮಹಿಳೆಯೊಬ್ಬರನ್ನು ಯುವಕ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಹರಿತವಾದ ಆಯುಧದಿಂದ ಥಳಿಸಿ, ಆಕೆಯ ಎರಡೂ ಕಣ್ಣುಗಳಿಗೆ ಇರಿದು ಗಂಭೀರವಾಗಿ ಗಾಯಗೊಳಿಸಿದ ಅಮಾನವೀಯ ಘಟನೆ ಶ್ರಾವಸ್ತಿಯ ಸೋನ್ವಾ ಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಶ್ರಾವಸ್ತಿ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ಮೌರ್ಯ, ಸೋನ್ವಾ ಗ್ರಾಮದ ದಿನೇಶ್ ಸಿಂಗ್ ಅಲಿಯಾಸ್ ನಂಕಣ್ಣೆ ಎಂಬಾತ ಮಹಿಳೆಗೆ ಊಟ ಕೊಡುವ ನೆಪದಲ್ಲಿ ಮನೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಥಳಿಸಿದ್ದಾನೆ. ಪರಿಣಾಮ ಸಂತ್ರಸ್ತೆಯ ಕಣ್ಣು ಮತ್ತು ತಲೆಗೆ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿರುವ ಕಾರಣ ವೈದ್ಯರು ಬಹ್ರೈಚ್‌ನ ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಕ್ಕಪಕ್ಕದವರಿಂದ ಮಾಹಿತಿ ಕಲೆ ಹಾಕಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸಂತ್ರಸ್ತೆಯ ಸೋದರ ಮಾವ ಸಹ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.