ETV Bharat / bharat

ಚಿಕ್ಕಪ್ಪನ ಕುಟುಂಬದೊಂದಿಗೆ ಜಗಳವಾಡಿ ನೇಣಿಗೆ ಶರಣಾದ ಸಹೋದರ.. ಅಣ್ಣ - ಅತ್ತಿಗೆಯರ ಮೇಲೆ ಕೇಸ್​ ದಾಖಲು ! - ಚಿಕ್ಕಪ್ಪನ ಕುಟುಂಬದೊಂದಿಗೆ ಜಗಳವಾಡಿ ನೇಣಿಗೆ ಶರಣಾದ ಸಹೋದರ

ಚಿಕ್ಕಪ್ಪನ ಕುಟುಂಬದೊಂದಿಗೆ ಜಗಳವಾಡಿದ ನಂತರ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಗೋರಖ್​ಪುರ ಜಿಲ್ಲೆಯಲ್ಲಿ ನಡೆದಿದೆ.

Man commits suicide in UP, Man commits suicide after argument with uncle family, UttarPradesh crime news, ಯುಪಿಯಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣು, ಚಿಕ್ಕಪ್ಪನ ಕುಟುಂಬದೊಂದಿಗೆ ಜಗಳವಾಡಿ ನೇಣಿಗೆ ಶರಣಾದ ಸಹೋದರ, ಉತ್ತರಪ್ರದೇಶ ಅಪರಾಧ ಸುದ್ದಿ,
ಚಿಕ್ಕಪ್ಪನ ಕುಟುಂಬದೊಂದಿಗೆ ಜಗಳವಾಡಿ ನೇಣಿಗೆ ಶರಣಾದ ಸಹೋದರ
author img

By

Published : Jan 31, 2022, 10:36 AM IST

ಗೋರಖ್‌ಪುರ : ತನ್ನ ಚಿಕ್ಕಪ್ಪನ ಕುಟುಂಬದೊಂದಿಗೆ ಜಗಳವಾಡಿದ ನಂತರ 20 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಜೀತ್‌ಪುರ ಗ್ರಾಮದಲ್ಲಿ ನಡೆದಿದೆ.

ಶನಿವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಭಿಷೇಕ್ ತನ್ನ ಚಿಕ್ಕಪ್ಪನ ಮನೆಯವರೊಂದಿಗೆ ಜಗಳವಾಡಿದ್ದಾನೆ. ಅಭಿಷೇಕ್ ಅವರ ಸೋದರ ಸಂಬಂಧಿಗಳಾದ ಶೈಲೇಂದ್ರ ಶರ್ಮಾ, ನಾಗೇಂದ್ರ ಶರ್ಮಾ ಹಾಗೂ ಅವರ ಪತ್ನಿಯರಾದ ಪರ್ಮಿಳಾ ಮತ್ತು ಮುನ್ನಿದೇವಿ ಅವರೊಂದಿಗೆ ಜಗಳವಾಡಿದ್ದಾನೆ.

ಈ ವೇಳೆ ಅವರು ಅಭಿಷೇಕ್​ಗೆ ಆತ್ಮಹತ್ಯೆ ಮಾಡುಕೊಳ್ಳುವಂತಹ ಮಾತುಗಳನ್ನಾಡಿದ್ದಾರೆ. ಹೀಗಾಗಿ ಅಭಿಷೇಕ್​ ಅವರು ಆಡಿದ ಮಾತುಗಳಿಗೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ತಂದೆ ಶೇಷನಾಥ್ ಆರೋಪಿಸಿದ್ದಾರೆ.

ಓದಿ: 2025ರ ವೇಳೆಗೆ 2 ಲಕ್ಷ ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ: ನಿತಿನ್ ಗಡ್ಕರಿ

ಈ ಘಟನೆ ಕುರಿತು ಮೃತ ಅಭಿಷೇಕ್ ಶರ್ಮಾದ ಇಬ್ಬರು ಸೋದರ ಸಂಬಂಧಿಗಳು ಮತ್ತು ಅವರ ಪತ್ನಿಯರ ವಿರುದ್ಧ ಆತನ ತಂದೆ ಶೇಷನಾಥ್ ನೀಡಿದ ದೂರಿನ ಆಧಾರದ ಮೇಲೆ ಆತ್ಮಹತ್ಯೆಗೆ ಪ್ರಚೋದನೆಗಾಗಿ ಪ್ರಕರಣ ದಾಖಲಿಸಲಾಗಿದೆ.

ಮೃತನ ತಂದೆ ನೀಡಿದ ದೂರಿನ ಆಧಾರದ ಮೇಲೆ, ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ಪ್ರಾರಂಭಿಸಲಾಗಿದೆ ಎಂದು ಕ್ಯಾಂಪೀರ್‌ಗಂಜ್‌ನ ಸರ್ಕಲ್ ಅಧಿಕಾರಿ ಅಜಯ್ ಸಿಂಗ್ ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.