ಹೈದರಾಬಾದ್ (ತೆಲಂಗಾಣ): ಶಂಶಾಬಾದ್‌ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಳಚರಂಡಿ ಪೈಪ್‌ಲೈನ್ ಶುಚಿಗೊಳಿಸುತ್ತಿದ್ದ ವ್ಯಕ್ತಿ ವಿಷಕಾರಿ ಅನಿಲ ಸೇವಿಸಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಅಸ್ವಸ್ಥರಾದ ಇನ್ನಿಬ್ಬರನ್ನು ನಿಲ್ದಾಣದಲ್ಲಿನ ತುರ್ತು ಆರೈಕೆ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.
ನಿನ್ನೆ ಸಂಜೆ ಒಳಚರಂಡಿಯ ಪೈಪ್‌ಲೈನ್ ಸೋರಿಕೆಯಾಗುತ್ತಿತ್ತು. ಈ ವೇಳೆ ಸ್ವಚ್ಛಗೊಳಿಸಿ, ಸರಿಪಡಿಸಲು ಮೂವರು ವ್ಯಕ್ತಿಗಳನ್ನು ಕರೆಯಿಸಿಕೊಳ್ಳಲಾಗಿದೆ. ಒಳಚರಂಡಿ ಕೊಳವೆಗಳನ್ನು ಸ್ವಚ್ಛ ಮಾಡಲು ಅದರೊಳಗೆ ಆ್ಯಸಿಡ್ ಸುರಿದಿದ್ದಾರೆ. ಈ ವೇಳೆ ಹೊಗೆ ಬಂದಿದ್ದು ಎಲ್ಲರೂ ಪ್ರಜ್ಞೆ ತಪ್ಪಿದ್ದಾರೆ. ಮೂವರು ಕಾರ್ಮಿಕರಲ್ಲಿ ನರಸಿಂಹ ರೆಡ್ಡಿ ಎಂಬಾತ ಸಾವನ್ನಪ್ಪಿದ್ದಾನೆ ಎಂದು ಶಂಶಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ ತಿಳಿಸಿದರು.
ಇದನ್ನೂ ಓದಿ: ರೈತರ ಆಂದೋಲನದ ವೇಳೆ ಯುವಕನಿಗೆ ಮದ್ಯ ಕುಡಿಸಿ ಜೀವಂತ ಸುಟ್ಟರು!
ಉಳಿದಿಬ್ಬರಿಗೆ ವಿಮಾನ ನಿಲ್ದಾಣದಲ್ಲಿನ ತುರ್ತು ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನರಸಿಂಹ ರೆಡ್ಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.