ಮೋತಿಹಾರಿ: ಪೂರ್ವ ಚಂಪಾರಣ್ಯ ಜಿಲ್ಲೆಯಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ಸಂಬಂಧ ಆರೋಪಿಗಳನ್ನು ಬಂಧಿಸುವಂತೆ ಎಸ್ಪಿ ಪೊಲೀಸರಿಗೆ ಸೂಚಿಸಿದ್ದಾರೆ.
ಇಬ್ಬರು ಯುವಕರು ಮಹಿಳೆಯ ಕೂದಲನ್ನು ಹಿಡಿದು, ನಡು ರಸ್ತೆಯಲ್ಲೇ ಅಮಾನವೀಯವಾಗಿ ಎಳೆದೊಯ್ಯುವ ವಿಡಿಯೋ ಇದಾಗಿದೆ. ತನ್ನನ್ನು ರಕ್ಷಿಸುವಂತೆ ಮಹಿಳೆ ಕೇಳಿಕೊಂಡರು ಸಹ ಸುತ್ತಲೂ ನಿಂತಿದ್ದ ಜನ ಮಾತ್ರ ಮೂಕಪ್ರೇಕ್ಷಕರಾಗಿದ್ದರು.
ಇದನ್ನೂ ಓದಿ: ರೈತರ ಪ್ರತಿಭಟನೆಗೆ ಬೆಂಬಲ: ಫೆ.12,13 ರಂದು ರಾಜಸ್ಥಾನಕ್ಕೆ ರಾಹುಲ್
ಕೇಸರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್ಪುರ ಪಂಚಾಯತ್ನ ಆಜಾದ್ ನಗರ ಗ್ರಾಮದಿಂದ ಈ ಘಟನೆ ವರದಿಯಾಗಿದೆ. ಆದರೆ, ವೈರಲ್ ವಿಡಿಯೋ ಬಗ್ಗೆ ತಿಳಿದುಕೊಂಡ ಎಸ್ಪಿ ನವೀನ್ ಚಂದ್ರ ಝಾ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಸರಿಯಾ ಪೊಲೀಸ್ ಠಾಣೆ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ.
ಈ ಘಟನೆ ವೇಳೆ ಮಹಿಳೆ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.