ETV Bharat / bharat

ಪಾಕಿಸ್ತಾನದ ಐಎಸ್​ಐಗೆ ದೇಶದ ಸೂಕ್ಷ್ಮ ಮಾಹಿತಿ ಸೋರಿಕೆ.. ಗುಜರಾತ್​ನಲ್ಲಿ ಜವಳಿ ವ್ಯಾಪಾರಿ ಬಂಧನ

ಪಾಕಿಸ್ತಾನಿ ಏಜೆಂಟರ್​ ಜೊತೆ ದೇಶದ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದ ದೇಶದ್ರೋಹಿ ದೀಪಕ್​ ಸಾಳುಂಕೆ ಎಂಬುವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

secret-information-with-isi-agent
ಪಾಕಿಸ್ತಾನದ ಐಎಸ್​ಐಗೆ ದೇಶದ ಸೂಕ್ಷ್ಮ ಮಾಹಿತಿ ಸೋರಿಕೆ
author img

By

Published : Dec 14, 2022, 9:21 AM IST

ಸೂರತ್(ಗುಜರಾತ್​): ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್​ಐ ಜೊತೆಗೆ ನಂಟು ಹೊಂದಿದ್ದ ಗುಜರಾತ್​ನ ಸೂರತ್​​ನಲ್ಲಿ ಜವಳಿ ಅಂಗಡಿ ನಡೆಸುತ್ತಿದ್ದ ವ್ಯಾಪಾರಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದೇಶದ್ರೋಹಿಯನ್ನು ದೀಪಕ್ ಸಾಳುಂಕೆ ಎಂದು ಗುರುತಿಸಲಾಗಿದೆ.

ಸೂರತ್‌ನ ಭುವನೇಶ್ವರಿ ನಗರದ ಯೋಗೇಶ್ವರ ಪಾರ್ಕ್ ಸೊಸೈಟಿಯ ನಿವಾಸಿಯಾದ ಈ ವ್ಯಾಪಾರಿ, ಭಾರತೀಯ ಸೇನೆಯ ಮಾಹಿತಿಯನ್ನು ಐಎಸ್​ಐ ಏಜೆಂಟ್ ಹಮೀದ್ ಜೊತೆ ಹಂಚಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಆರೋಪಿ ದೀಪಕ್​ ಐಎಸ್​ಐ ಏಜೆಂಟ್​ ಹಮೀದ್​ನಿಂದ 75 ಸಾವಿರ ರೂಪಾಯಿ ಪಡೆದುಕೊಂಡಿದ್ದರು. ಈ ಹಣದಲ್ಲಿ ಸಾಯಿ ಫ್ಯಾಷನ್ ಎಂಬ ಜವಳಿ ಅಂಗಡಿ ನಡೆಸುತ್ತಿದ್ದರು. ಅಂಗಡಿಯಿಂದಲೇ ಬೇಹುಗಾರಿಕೆ ಚಟುವಟಿಕೆ ನಡೆಸಿ, ದೇಶದ ಆಂತರಿಕ ಮಾಹಿತಿಯನ್ನು ಪಾಕಿಸ್ತಾನದ ಏಜೆಂಟ್​ಗಳಾದ ಹಮೀದ್ ಮತ್ತು ಕಾಶಿಫ್ ಜೊತೆಗೆ ಹಂಚಿಕೊಳ್ಳುತ್ತಿದ್ದರಂತೆ.

ಫೇಸ್​ಬುಕ್​ ಮೂಲಕ ಪರಿಚಯ: ಬಂಧಿತ ದೀಪಕ್​, ಸಾಳುಂಕೆ ಎಂಬ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ ಹೊಂದಿದ್ದ. ಇದರ ಮೂಲಕವೇ ಪಾಕಿಸ್ತಾನಿ ಏಜೆಂಟ್​ ಹಮೀದ್​ ಜೊತೆಗೆ ಸಂಪರ್ಕ ಸಾಧಿಸಿದ್ದ. ಬಳಿಕ ಭಾರತದ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದ. ಜೂನ್​ನಿಂದ ಈ ಕಳ್ಳ ವ್ಯವಹಾರ ನಡೆಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ವಂಚಕ ದೀಪಕ್​ ವಿರುದ್ಧ ದೇಶದ್ರೋಹದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಓದಿ: ಇದು 1962 ಅಲ್ಲ.. ಚೀನಾಗೆ ಅರುಣಾಚಲಪ್ರದೇಶ ಸಿಎಂ ಪೆಮಾ ಖಂಡು ಖಡಕ್​ ವಾರ್ನಿಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.