ETV Bharat / bharat

ವರದಕ್ಷಿಣೆಗೆ ಪೀಡಿಸಿ ಪತ್ನಿಗೆ ಆ್ಯಸಿಡ್‌ ಕುಡಿಸಿದ ಪತಿ: ಇಂಥ ಕ್ರೌರ್ಯಕ್ಕೆ ಕೊನೆಯೆಂದು? - ಹೆಂಡ್ತಿಗೆ ಆ್ಯಸಿಡ್​ ಕುಡಿಸಿದ ಪಾಪಿ ಗಂಡ

ಮೂರು ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಗಂಡ ಮಾನಸಿಕ, ದೈಹಿಕ ಕಿರುಕುಳ ನೀಡಿ ಪತ್ನಿಗೆ ಆ್ಯಸಿಡ್​ ಕುಡಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಕುರಿತಾಗಿ ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂಗೆ ದೂರು ನೀಡಲಾಗಿದೆ.

Man arrested for forcing wife to drink acid

author img

By

Published : Jul 21, 2021, 7:34 PM IST

Updated : Jul 21, 2021, 8:24 PM IST

ಗ್ವಾಲಿಯರ್​(ಮಧ್ಯಪ್ರದೇಶ): ತವರು ಮನೆಯಿಂದ ವರದಕ್ಷಿಣೆ ಬರುವಂತೆ ಪತ್ನಿಗೆ ಘೋರ ಕಿರುಕುಳ ನೀಡಿರುವ ಪಾಪಿ ಗಂಡನೋರ್ವ ಆಕೆಗೆ ಆ್ಯಸಿಡ್​ ಕುಡಿಸಿದ್ದಾನೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಕಟ್ಟಿಕೊಂಡ ಹೆಂಡ್ತಿಗೆ ಆ್ಯಸಿಡ್​ ಕುಡಿಸಿದ ಪಾಪಿ ಗಂಡ

ಗ್ವಾಲಿಯರ್​ನ ಡಾಬ್ರಾ ಎಂಬಲ್ಲಿ ಈ ಘಟನೆ ನಡೆದಿದೆ. ಆರೋಪಿ ವಿರೇಂದ್ರ ಕುಮಾರ್​ ಜಾತ್ವಾ ವಿರುದ್ದ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ಕಲಹದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಈತ ಪತ್ನಿ ಶಶಿಗೆ ತವರು ಮನೆಯಿಂದ 3 ಲಕ್ಷ ರೂ. ಹಣ ತೆಗೆದುಕೊಂಡು ಬರುವಂತೆ ಚಿತ್ರಹಿಂಸೆ ನೀಡುತ್ತಿದ್ದನಂತೆ. ಈ ವಿಷಯವಾಗಿ ಮಹಿಳೆ ಪೋಷಕರೊಂದಿಗೆ ಮಾತನಾಡಲು ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಷ್ಟೇ ಅಲ್ಲದೇ, ಆ್ಯಸಿಡ್ ಕುಡಿಸಿ ಕ್ರೌರ್ಯ ಮೆರೆದಿದ್ದಾನೆ. ಇದರಿಂದಾಗಿ ತೀವ್ರವಾಗಿ ಅಸ್ವಸ್ಥರಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ದೇಹದೊಳಗಿನ ಕೆಲವೊಂದು ಅಂಗಗಳು ಆ್ಯಸಿಡ್​ನಿಂದಾಗಿ ಹಾನಿಗೊಳಗಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಮಹಿಳೆ ತನ್ನ ಹೇಳಿಕೆ ನೀಡಿದ್ದು, ಕುಟುಂಬಸ್ಥರು ಮದುವೆ ಸಂದರ್ಭದಲ್ಲಿ 10 ಲಕ್ಷ ರೂ. ಗಂಡನ ಮನೆಯವರಿಗೆ ನೀಡಿದ್ದಾರೆಂದು ಹೇಳಿಕೊಂಡಿದ್ದಾಳೆ.

ಈ ಘಟನೆ ಬಗ್ಗೆ ಮಹಿಳಾ ಆಯೋಗದ ಮುಖ್ಯಸ್ಥೆ(ದೆಹಲಿ ವಿಭಾಗ) ಸ್ವಾತಿ ಮಲಿವಾಲ್​ ಗ್ವಾಲಿಯಾರ್​​ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪ್ರಕರಣದ ಬಗ್ಗೆ ನಿರಾಸಕ್ತಿ ತೋರಿಸಿದ್ದಕ್ಕಾಗಿ ಇದೀಗ ಸಹಾಯಕ ಸಬ್​ ಇನ್ಸ್​ಪೆಕ್ಟರ್​ ಅಮಾನತಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾತಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​​ ಚೌಹಾಣ್​ ಅವರಿಗೆ ಮಾಹಿತಿ ನೀಡಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Last Updated : Jul 21, 2021, 8:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.