ETV Bharat / bharat

ಬ್ರಿಟಿಷ್​ ಮಹಿಳೆಗೆ ಕಿರುಕುಳ: ಪೊಲೀಸರ ಬಲೆಗೆ ಬಿದ್ದ ಎಂಬಿಎ ಪದವೀಧರ! - ಮಹಾರಾಷ್ಟ್ರದಲ್ಲಿ ಬ್ರಿಟಿಷ್​ ಮಹಿಳೆಗೆ ಕಿರುಕುಳ

ಗುರುವಾರ ರಾತ್ರಿ 11.30ರ ಸುಮಾರಿಗೆ ವಾಶ್‌ರೂಮ್‌ಗೆ ಹೋದ ಬ್ರಿಟಿಷ್​ ಮಹಿಳೆಯೊಬ್ಬರಿಗೆ 35 ವರ್ಷದ ಆರೋಪಿ ಕಿರುಕುಳ ನೀಡಿದ ಘಟನೆ ಮುಂಬೈನಲ್ಲಿ ನಡೆದಿದೆ.

Man arrested for allegedly molesting British woman in Mumbai  Mumbai molestation case  British woman molested in Mumbai  Molestation of British woman  Mumbai latest news  Sexual harassment case in Mumbai  ಮುಂಬೈನಲ್ಲಿ ಕ್ಲಬ್​ವೊಂದರಲ್ಲಿ ಬ್ರಿಟಿಷ್​ ಮಹಿಳೆಗೆ ಕಿರುಕುಳ ನೀಡಿದ ಆರೋಪಿ  ಮಹಾರಾಷ್ಟ್ರದಲ್ಲಿ ಬ್ರಿಟಿಷ್​ ಮಹಿಳೆಗೆ ಕಿರುಕುಳ  ಮಹಾರಾಷ್ಟ್ರ ಅಪರಾಧ ಸುದ್ದಿ
ಬ್ರಿಟಿಷ್​ ಮಹಿಳೆಗೆ ಕಿರುಕುಳ ನೀಡಿ ಪೊಲೀಸರ ವಶಕ್ಕೆ ಬಿದ್ದ ಎಂಬಿಎ ಪದವೀಧರ
author img

By

Published : May 6, 2022, 9:58 PM IST

ಮುಂಬೈ: ಉಪನಗರ ಬಾಂದ್ರಾದಲ್ಲಿರುವ ಕ್ಲಬ್‌ನಲ್ಲಿ 44 ವರ್ಷದ ಬ್ರಿಟಿಷ್ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಲ್ಲಿನ ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆ, ಅದೇ ಕಚೇರಿಯಲ್ಲಿ ಕೆಲಸ ಮಾಡುವ ತನ್ನ ಪತಿ ಮತ್ತು ಕೆಲವು ಸ್ನೇಹಿತರೊಂದಿಗೆ ಮಂಗಳವಾರ ಸಂಜೆ ಕ್ಲಬ್‌ಗೆ ಹೋಗಿದ್ದರು. ಮಹಿಳೆ ರಾತ್ರಿ 11.30ರ ಸುಮಾರಿಗೆ ವಾಶ್‌ರೂಮ್‌ಗೆ ಹೋದಾಗ 35 ವರ್ಷದ ಆರೋಪಿ ಆಕೆಗೆ ಕಿರುಕುಳ ನೀಡಿದ್ದಾನೆ. ಈ ಕಹಿ ಅನುಭವವನ್ನು ತನ್ನ ಪತಿ ಮತ್ತು ಸ್ನೇಹಿತರಿಗೆ ವಿವರಿಸಿದ್ದರು. ಕೂಡಲೇ ಆ ಆರೋಪಿಯನ್ನು ಅವರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಅಂತಾ ಅಧಿಕಾರಿ ಹೇಳಿದರು.

ಓದಿ: ಪಬ್​​ನಲ್ಲಿ ಕನ್ನಡ ಹಾಡು ಕೇಳಿದಕ್ಕೆ ಡಿಜೆ ದರ್ಪ : ಕನ್ನಡಿಗರ ಕ್ಷಮೆಯಾಚಿಸಿದ ಬದ್ಮಾಷ್ ಪಬ್ ಮ್ಯಾನೇಜರ್

ಆರೋಪಿಯನ್ನು ಘನಶ್ಯಾಮ್ ಲಾಲ್‌ಚಂದ್ ಯಾದವ್ ಎಂದು ಗುರುತಿಸಲಾಗಿದ್ದು, ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್‌ಗಳು 354, 354A ಮತ್ತು 509ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಆರೋಪಿ ಎಂಬಿಎ ಪದವೀಧರರು ಮತ್ತು ವೃತ್ತಿಪರರಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.