ಭೋಪಾಲ್ (ಮಧ್ಯಪ್ರದೇಶ): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಯಾಸ್ ಚಂಡಮಾರುತ ಪರಿಶೀಲನಾ ಸಭೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಡವಾಗಿ ಆಗಮಿಸಿದ್ದಕ್ಕೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇದೀಗ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಮತಾ ವಿರುದ್ಧ ಕಿಡಿಕಾರಿದ್ದು, ಇದು ಬಂಗಾಳದ ಜನತೆಗೆ ಮಾಡಿರುವ ಅಪಮಾನ ಎಂದಿದ್ದಾರೆ. ಪ್ರಧಾನಿ ಮೋದಿ ಈ ದೇಶದ ಪ್ರಧಾನಿ, ಇಡೀ ದೇಶ ಅವರನ್ನು ಅನುಸರಿಸುತ್ತಿದೆ. ಬಂಗಾಳ ಜನರ ಕಲ್ಯಾಣದ ದೃಷ್ಟಿಯಿಂದ ಅವರು ಪ್ರವಾಸ ಕೈಗೊಂಡಿದ್ದರು, ಆದರೆ ಮಮತಾ ದೀದಿ ಇಡೀ ಬಂಗಾಳದ ಜನತೆಗೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ.
ನಿನ್ನೆಯ ಯಾಸ್ ಚಂಡಮಾರುತ ಪರಿಶೀಲನಾ ಸಭೆಗೆ ಮಮತಾ ಬ್ಯಾನರ್ಜಿ 30 ನಿಮಿಷ ತಡವಾಗಿ ಆಗಮಿಸಿದ್ದರು. ಇದು ಆಡಳಿತ ಪಕ್ಷ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು. ಮಮತಾ ಬ್ಯಾನರ್ಜಿ 20 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು.
ಓದಿ: ಕೊರೊನಾದಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ₹5 ಲಕ್ಷ.. ಸಿಎಂ ಸ್ಟಾಲಿನ್