ನಂದಿಗ್ರಾಮ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ಬಿಜೆಪಿ-ತೃಣಮೂಲ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ನಂದಿಗ್ರಾಮ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಘರ್ಜಿಸಿದ್ದಾರೆ.
ಇದೇ ಮೊದಲ ಬಾರಿಗೆ ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ಮಮತಾ ದುರ್ಗಾ ಸ್ತೋತ್ರ ಪಠಣೆ ಮಾಡುವ ಮೂಲಕ ತಾವು ಹಿಂದೂ ಹುಡುಗಿ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಾರ್ಟಿ ಹಿಂದೂ ಕಾರ್ಡ್(ಹಿಂದೂ ಮತ) ಬಳಸಿದ್ದು ಮತದಾರರನ್ನು ಸೆಳೆಯಲು ಹೊಸ ಹೊಸ ತಂತ್ರಗಳನ್ನು ಹೆಣೆಯುತ್ತಿದೆ. ಇದಕ್ಕೆ ಪ್ರತಿಯಾಗಿ ಯೋಜನೆ ರೂಪಿಸಿರುವ ದೀದಿ ದುರ್ಗಾ ಸ್ತೋತ್ರ ಪಠಣೆ ಮಾಡಿದರು.
ಇದನ್ನೂ ಓದಿ: ನನ್ನ ರಾಜೀನಾಮೆಗೆ ದೆಹಲಿಯವರ ಬಳಿ ಉತ್ತರ ಕೇಳಿ: ತ್ರಿವೇಂದ್ರ ಸಿಂಗ್ ರಾವತ್
ಪ್ರತಿದಿನ ಮನೆಯಿಂದ ಹೊರ ಬರುವಾಗ ನಾನು ದುರ್ಗಾ ಸ್ತೋತ್ರ ಪಠಿಸುತ್ತೇನೆ. ಬಿಜೆಪಿಯ ಆಟ ಪಶ್ಚಿಮ ಬಂಗಾಳದಲ್ಲಿ ನಡೆಯುವುದಿಲ್ಲ. ನಾನು ಹೊರಗಿನವಳೆಂದು ಕೆಲವರು ಹೇಳುತ್ತಾರೆ. ಆದರೆ ನಾನು ಬಂಗಾಳಿ. ನೀವೂ ದೆಹಲಿಯಿಂದ ಬಂದಿರುವವರು ಹೊರಗಿನವರಾಗಿದ್ದೀರಿ ಎಂದಿದ್ದಾರೆ.
ನಾನು ನಾಮಪತ್ರ ಸಲ್ಲಿಸಲು ನೀವು ಇಷ್ಟಪಡದಿದ್ದರೆ, ಖಂಡಿತವಾಗಿ ಸಲ್ಲಿಕೆ ಮಾಡುವುದಿಲ್ಲ. ಆದರೆ ನೀವು ನನ್ನನ್ನು ನಿಮ್ಮ ಮಗಳೆಂದು ಪರಿಗಣಿಸಿದರೆ ಮಾತ್ರ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.