ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಾಸ್ಮತಿ ಅಕ್ಕಿಯ ರಫ್ತಿಗೆ ನೀಡುವಂತೆಯೇ ರಾಜ್ಯದ ಪ್ರಸಿದ್ಧ ಗೋಬಿಂದೋಭೋಗ್ ಅಕ್ಕಿಗೆ ಶೇ 20ರಷ್ಟಯ ಕಸ್ಟಮ್ಸ್ ಸುಂಕದಲ್ಲಿ ವಿನಾಯಿತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಆಹಾರದ ಮೇಲೆ ವಿಧಿಸುವ ಸುಂಕವನ್ನು ಕೇಂದ್ರದ ನಿರ್ಧಾರವು ರಫ್ತಿನ ಮೇಲೆ ಮತ್ತು ರೈತರ ಆದಾಯದ ಮೇಲೆ, ಕೆಟ್ಟ ಪರಿಣಾಮ ಬೀರಿದೆ. ಪ್ರೀಮಿಯಂ 'ಗೋಬಿಂದೋಭೋಗ್' ತಳಿಯ ರಫ್ತು, ಬೇಡಿಕೆ ಮತ್ತು ದೇಶೀಯ ಬೆಲೆಯ ಮೇಲೆ ಸಹಾ ಪ್ರಭಾವ ಬೀರಿದೆ. ಎಂದು ಬ್ಯಾನರ್ಜಿ ಬುಧವಾರ ಮೋದಿಗೆ ತಮ್ಮ ಎರಡು ಪುಟಗಳ ಪತ್ರದಲ್ಲಿ ಬರೆದಿದ್ದಾರೆ.
ವ್ಯಾಪಾರ ನಷ್ಟವನ್ನು ತಪ್ಪಿಸಲು ಮತ್ತು ರೈತರಿಗೆ ಲಾಭ ತಂದುಕೊಡುವ ಪಡೆಯಲು ಆರಂಭಿಕ ದಿನಗಳಲ್ಲಿ ರಫ್ತಿನ ಮೇಲಿನ ಶೇ 20ರಷ್ಟು ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಕ್ಟೋಬರ್ 2017 ರಲ್ಲಿ ಭೌಗೋಳಿಕ ಗುರುತಿನ ಟ್ಯಾಗ್ ನೀಡಿಲಾಗಿದೆ.
ಪ್ರೀಮಿಯಂ ಆರೊಮ್ಯಾಟಿಕ್ ವಿಧವಾದ ಗೋಬಿಂದೋಭೋಗ್ ಅಕ್ಕಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಹಾಗೂ ಲಾಭ ಬರಬೇಕಾದರೆ, ಅಕ್ಕಿ ರಫ್ತಿನ ಮೇಲಿನ ಸುಂಕವನ್ನು ವಿನಾಯಿತಿ ನೀಡಬೇಕು ಎಂದು ಕೇಂದ್ರ ಸರ್ಕಾವರನ್ನು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಓದಿ;ಬೆಳಗಾವಿಯಲ್ಲಿ ಬೀದಿ ನಾಯಿಗಳಿಗೆ ತೊಂದರೆ ಆರೋಪ.. ಪ್ರಧಾನಿಗೆ ಪತ್ರ ಬರೆದ ಕುಟುಂಬಸ್ಥರು