ETV Bharat / bharat

ಪ್ರತಿಮೆ ಸ್ಥಾಪನೆ ಸಾಕಾಗಲ್ಲ.. ನೇತಾಜಿ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿ : ಕೇಂದ್ರಕ್ಕೆ ದೀದಿ ಕರೆ - Netaji Subhas Chandra Bose statue at India gate

ಕೇವಲ ಪ್ರತಿಮೆಯನ್ನು ಸ್ಥಾಪನೆ ಮಾಡುವುದರಿಂದ ನೇತಾಜಿ ಅವರ ಮೇಲೆ ಪ್ರೀತಿಯನ್ನು ತೋರಿದಂತಾಗುವುದಿಲ್ಲ. ಅವರ ಜನ್ಮದಿನವನ್ನು ರಾಷ್ಟ್ರೀಯ ರಜಾದಿನ ಎಂದು ಘೋಷಿಸಿ ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ..

Mamata Banerjee urges Centre to declare Netaji's birth anniversary as national holiday
ಕೇಂದ್ರಕ್ಕೆ ದೀದಿ ಕರೆ
author img

By

Published : Jan 23, 2022, 7:00 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ರಾಷ್ಟ್ರೀಯ ರಜಾದಿನ ಎಂದು ಘೋಷಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೇವಲ ಪ್ರತಿಮೆಯನ್ನು ಸ್ಥಾಪನೆ ಮಾಡುವುದರಿಂದ ನೇತಾಜಿ ಅವರ ಮೇಲೆ ಪ್ರೀತಿಯನ್ನು ತೋರಿದಂತಾಗುವುದಿಲ್ಲ. ಪ್ರತಿಮೆ ಸ್ಥಾಪನೆಯಿಂದ ಅವರ ಅಂತರ್ಗತ ರಾಜಕೀಯದ ಸಿದ್ಧಾಂತ ಪ್ರತಿಬಿಂಬಿಸುವುದಿಲ್ಲ ಎಂದು ಕೋಲ್ಕತ್ತಾದ ರೆಡ್ ರೋಡ್​ನಲ್ಲಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದೀದಿ ಹೇಳಿದರು.

ಸರಣಿ ಟ್ವೀಟ್​ಗಳನ್ನು ಮಾಡಿರುವ ಸಿಎಂ ಮಮತಾ, "ದೇಶನಾಯಕ್ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ನಮನಗಳು. ಅವರು ರಾಷ್ಟ್ರೀಯ ಮತ್ತು ಜಾಗತಿಕ ಐಕಾನ್. ಬಂಗಾಳದಿಂದ ನೇತಾಜಿ ಅವರ ಉದಯವಾಗಿ ಭಾರತೀಯ ಇತಿಹಾಸದಲ್ಲಿ ಅವರಿಗೆ ಸರಿ ಸಾಟಿಯಿಲ್ಲ" ಎಂದು ಹೇಳಿದ್ದಾರೆ.

  • Homage to Deshnayak Netaji Subhas Chandra Bose on his 125th birth anniversary. A national and global icon, Netaji’s rise from Bengal is unmatched in the annals of Indian history. (1/7)

    — Mamata Banerjee (@MamataOfficial) January 23, 2022 " class="align-text-top noRightClick twitterSection" data=" ">

ಇದನ್ನೂ ಓದಿ: ನೇತಾಜಿ ಜಯಂತಿ: ಇಂಡಿಯಾ ಗೇಟ್​ ಬಳಿ ಸುಭಾಶ್ಚಂದ್ರ ಬೋಸ್ ಬೃಹತ್​ ಪ್ರತಿಮೆ ಸ್ಥಾಪನೆ

ಈ ವರ್ಷ ಗಣರಾಜ್ಯೋತ್ಸವ ಪರೇಡ್‌ನಲ್ಲಿ 'ನೇತಾಜಿ' ಕುರಿತು ಟ್ಯಾಬ್ಲೋವನ್ನು ಪ್ರದರ್ಶಿಸಲಾಗುವುದು ಮತ್ತು ನಮ್ಮ ದೇಶದ 75ನೇ ಸ್ವಾತಂತ್ರ್ಯದ ಸ್ಮರಣಾರ್ಥ ಬಂಗಾಳದ ಇತರ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರನ್ನು ಸಹ ಪ್ರದರ್ಶಿಸಲಾಗುವುದು ಎಂದು ಮಮತಾ ತಿಳಿಸಿದ್ದಾರೆ.

  • We again appeal to the Central Government that Netaji’s birthday be declared a National Holiday to allow the entire Nation to pay homage to the National Leader and celebrate #DeshNayakDibas in most befitting manner.(7/7)

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.