ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂದು ಪಕ್ಷದ ಪ್ರಣಾಳಿಕೆ ರಿಲೀಸ್ ಮಾಡಿದ್ದಾರೆ.
ಪ್ರಣಾಳಿಕೆಯಲ್ಲಿರುವ ಪ್ರಮುಖ ಭರವಸೆಗಳು:
- ರಾಜ್ಯದಲ್ಲಿ ನಿರುದ್ಯೋಗ ಕಡಿಮೆ ಮಾಡುವ ಉದ್ದೇಶದಿಂದ ಒಂದೇ ವರ್ಷದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ
- ಮನೆ ಮನೆಗೆ ಪಡಿತರ
- ಬಡವರಿಗೆ ವಾರ್ಷಿಕ ಆರ್ಥಿಕ ಸಹಾಯದ ಖಾತರಿ ಘೋಷಣೆ: ಫಲಾನುಭವಿಗಳಿಗೆ ವಾರ್ಷಿಕ 6 ಸಾವಿರ ರೂ. ಹಾಗೂ ಹಿಂದುಳಿದ ಸಮುದಾಯಕ್ಕೆ 12 ಸಾವಿರ ರೂ. ನೀಡುವ ಯೋಜನೆ
- ರೈತರ ವಾರ್ಷಿಕ ಆರ್ಥಿಕ ಸಹಾಯ ಸದ್ಯದ 6 ಸಾವಿರ ರೂಗಳಿಂದ 10 ಸಾವಿರಕ್ಕೆ ಏರಿಕೆ.
- ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ಗಳ ಕ್ರೆಡಿಟ್ ಕಾರ್ಡ್, ಶೇ.4ರ ಬಡ್ಡಿದರದಲ್ಲಿ ಈ ಯೋಜನೆ ಜಾರಿ
ಇದನ್ನೂ ಓದಿ: ತಮಿಳುನಾಡು ಚುನಾವಣಾ ಅಖಾಡದಲ್ಲೊಬ್ಬ 'ಬಂಗಾರ'ದ ಮನುಷ್ಯ!
ಈ ಹಿಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಕೆ ಮಾಡಿದ್ದೇವೆ. ಇದು ರಾಜಕೀಯಪ್ರೇರಿತ ಪ್ರಣಾಳಿಕೆ ಅಲ್ಲ, ಅಭಿವೃದ್ಧಿ ಆಧಾರಿತ ಪ್ರಣಾಳಿಕೆಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27ರಿಂದ ಏಪ್ರಿಲ್ 29ರವರೆಗೆ ಮತದಾನವಾಗಲಿದೆ. ಮೇ 2ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ.