ಕೊಲ್ಕತಾ(ಪಶ್ಚಿಮ ಬಂಗಾಳ) : ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಳದ ಜತೆಗೆ ಕೊರೊನಾ ಲಸಿಕೆಗಳ ಅಭಾವ ಕೂಡ ಅಧಿಕವಾಗಿದೆ. ಈ ಬೆನ್ನಲ್ಲೇ ಪ್ರತಿಪಕ್ಷಗಳು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುತ್ತಿವೆ.
ಕೆಲ ದಿನಗಳ ಹಿಂದೆ ದೇಶದಿಂದ ಕೊರೊನಾ ಲಸಿಕೆಯನ್ನು ಹಲವು ದೇಶಗಳಿಗೆ ರಫ್ತು ಮಾಡಲಾಯಿತು. ಅದರ ಪರಿಣಾಮ ಎಂಬಂತೆ ಇದೀಗ ಎರಡನೇ ಅಲೆ ಭೀತಿ ನಡುವೆಯೂ ಲಸಿಕೆಯ ಅಭಾವ ಸಂಕಷ್ಟ ತಂದೊಡ್ಡಿದೆ.
ಈ ಕುರಿತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. "ಇಂದು ನಮ್ಮ ದೇಶದಲ್ಲಿ ಯಾವುದೇ ಔಷಧಿ ಇಲ್ಲ. ಆದರೆ, 80 ದೇಶಗಳಿಗೆ ಔಷಧಿಗಳನ್ನು ಕಳುಹಿಸಲಾಗಿದೆ.
ನೀವು ಔಷಧಿಗಳನ್ನು ಕಳುಹಿಸಿದರೆ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಮೊದಲು ಅದನ್ನು ನಮ್ಮ ರಾಷ್ಟ್ರಕ್ಕೆ ಒದಗಿಸಿ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ದೇಶದಲ್ಲಿ ರೆಮ್ಡೆಸಿವಿರ್ ಮತ್ತು ಆಮ್ಲಜನಕದ ಕೊರತೆ ಇದೆ. ನಿಮ್ಮ ಹೆಸರನ್ನು ವೈಭವೀಕರಿಸಲು ನೀವು ಬೇರೆ ದೇಶಗಳಿಗೆ ಔಷಧಿ ರಫ್ತು ಮಾಡುತ್ತಿದ್ದೀರಿ" ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಹೆಚ್ಚುತ್ತಿರುವ ಕೋವಿಡ್ ಮಧ್ಯೆ ದೆಹಲಿಯಲ್ಲಿ 100ಕ್ಕೂ ಕಡಿಮೆ ಐಸಿಯು ಬೆಡ್ : ಸಿಎಂ ಕೇಜ್ರಿವಾಲ್ ಆತಂಕ