ETV Bharat / bharat

ಏಪ್ರಿಲ್ ಅಥವಾ ಮೇ ನಲ್ಲಿ ಬಂಗಾಳ ಎಲೆಕ್ಷನ್ : ಅಧಿಕಾರಿ ವಿರುದ್ಧ ದೀದಿ ಸ್ಪರ್ಧೆ..! - ಸುವೆಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸ್ಪರ್ಧೆ

ಇತ್ತೀಚೆಗಷ್ಟೇ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೆಂದು ಅಧಿಕಾರಿ ಸ್ಪರ್ಧಿಸುವ ನಂದಿಗ್ರಾಮ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

nandigram
ದೀದಿ
author img

By

Published : Jan 18, 2021, 3:19 PM IST

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಅಕ್ಷರಶಃ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಇತ್ತೀಚೆಗಷ್ಟೇ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೆಂದು ಅಧಿಕಾರಿ ಸ್ಪರ್ಧಿಸುವ ನಂದಿಗ್ರಾಮ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ನಂದಿಗ್ರಾಮ ನನ್ನ ಅದೃಷ್ಟದ ಸ್ಥಳವಾಗಿದ್ದು, ಇಲ್ಲಿಂದಲೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ. ಸಾಧ್ಯವಾದರೆ, ನನ್ನ ಸ್ವಕ್ಷೇತ ಭವಾನಿಪುರ ಹಾಗೂ ನಂದಿಗ್ರಾಮ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಅವರು ಹೇಳಿದರು. ಇದೇ ವೇಳೆ 2021 ರ ಏಪ್ರಿಲ್​​ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದರು.

ನಂದಿಗ್ರಾಮದ ಚುನಾವಣಾ ಱಲಿಯಲ್ಲಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ಟಿಎಂಸಿ ತೊರೆದು ಇತರೆ ಪಕ್ಷ ಸೇರಿದವರ ಬಗ್ಗೆ ಆತಂಕವಿಲ್ಲ. ಅವರು ಲೂಟಿ ಮಾಡಿದ ಹಣ ರಕ್ಷಣೆಗಾಗಿ ಪಕ್ಷ ತೊರೆದಿದ್ದಾರೆ ಎಂದು ಪರೋಕ್ಷವಾಗಿ ಅಧಿಕಾರಿ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಪಶ್ಚಿಮ ಬಂಗಾಳವನ್ನು ಬಿಜೆಪಿಗೆ ಮಾರಲು ಎಂದಿಗೂ ಅವಕಾಶ ಕೊಡುವುದಿಲ್ಲ ಎಂದು ಕಿಡಿಕಾರಿದರು.

2000 ನೇ ಇಸವಿಯಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ನಂದಿಗ್ರಾಮದಲ್ಲಿ ನಡೆದ ಆಂದೋಲನವು 2011 ರಲ್ಲಿ ದೀದಿಗೆ ಸಿಎಂ ಪಟ್ಟ ಅಲಂಕರಿಸುವಂತೆ ಮಾಡಿತು. ಜತೆಗೆ 34 ವರ್ಷಗಳ ಎಡಪಂಥೀಯ ಪಕ್ಷಗಳ ಆಡಳಿತಕ್ಕೆ ಅಂತ್ಯಹಾಡಿತ್ತು. ಆದರೆ, ಬಿಜೆಪಿ ಸೇರಿದ ಬಳಿಕ ಸುವೆಂದು ಅಧಿಕಾರಿ, ಉನ್ನತ ಹುದ್ದೆ ಅಲಂಕರಿಸಲು ಸಹಾಯ ಮಾಡಿದವರನ್ನು ಮಮತಾ ಬ್ಯಾನರ್ಜಿ ಮರೆತಿದ್ದಾರೆ ಎಂದು ದೀದಿ ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.