ಹೈದರಾಬಾದ್: ನಿನ್ನೆ ಬಿಹಾರದ ಬಕ್ಸಾರ್ ಎಂಬಲ್ಲಿ ಗಂಗಾ ನದಿ ದಡದ ಬಳಿಯಿರುವ ಮಹಾದೇವ ಘಾಟ್ನಲ್ಲಿ ಸುಮಾರು 50ಕ್ಕೂ ಹೆಚ್ಚು ಮೃತದೇಹಗಳು ತೇಲಿ ಬಂದಿದ್ದು, ಮೃತದೇಹಗಳನ್ನು ನಾಯಿಗಳು ತಿನ್ನುತ್ತಿರುವ ದೃಶ್ಯ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಕೊರೊನಾ ಸಮಯದಲ್ಲಿ ಮನೆಯಲ್ಲೇ ಮೃತಪಟ್ಟವರ ದೇಹಗಳನ್ನು ಆಯಾ ಕುಟುಂಬಸ್ಥರು ಗಂಗಾ ನದಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ನಮ್ಮ ದೇಶ ಎಲ್ಲಿಗೆ ಬಂದು ನಿಂತಿದೆ ನೋಡಿ? ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
-
The visuals of dead bodies floating in Ganga & Yamuna are horrifying. Painful to see that even last rites cannot be accorded to loved ones. Is this what our great nation has come to? @BJP4India Govt has no respect either for the living or dead. Our pleas are falling on deaf ears
— Leader of Opposition, Rajya Sabha (@LoPIndia) May 11, 2021 " class="align-text-top noRightClick twitterSection" data="
">The visuals of dead bodies floating in Ganga & Yamuna are horrifying. Painful to see that even last rites cannot be accorded to loved ones. Is this what our great nation has come to? @BJP4India Govt has no respect either for the living or dead. Our pleas are falling on deaf ears
— Leader of Opposition, Rajya Sabha (@LoPIndia) May 11, 2021The visuals of dead bodies floating in Ganga & Yamuna are horrifying. Painful to see that even last rites cannot be accorded to loved ones. Is this what our great nation has come to? @BJP4India Govt has no respect either for the living or dead. Our pleas are falling on deaf ears
— Leader of Opposition, Rajya Sabha (@LoPIndia) May 11, 2021
"ಗಂಗಾ ಮತ್ತು ಯಮುನಾದಲ್ಲಿ ತೇಲುತ್ತಿರುವ ಮೃತದೇಹಗಳ ದೃಶ್ಯಗಳು ಭಯಾನಕವಾಗಿವೆ. ತಮ್ಮ ಮನೆಯಲ್ಲಿ ಸತ್ತವರ ಕೊನೆಯ ವಿಧಿಗಳನ್ನೂ ಸಹ ಪ್ರೀತಿಪಾತ್ರರು ಮಾಡಲಾಗದಂತಹ ಸ್ಥಿತಿ ಬಂದೋದಗಿರುವುದನ್ನು ನೋಡುವುದು ನೋವಿನ ಸಂಗತಿ. ಜೀವಂತ ಅಥವಾ ಸತ್ತವರ ಬಗ್ಗೆ ಈ ಸರ್ಕಾರಕ್ಕೆ ಗೌರವವಿಲ್ಲ. ನಮ್ಮ ಮನವಿ ಅವರ ಕಿವಿಗೂ ಬೀಳುತ್ತಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಈಟಿವಿ ಭಾರತ ಎಕ್ಸ್ಕ್ಲೂಸಿವ್.. ಗಂಗಾ ನದಿಯಲ್ಲಿ ತೇಲಿ ಬಂದ್ವು 50ಕ್ಕೂ ಹೆಚ್ಚು ಮೃತದೇಹಗಳು!