ರಾಜ್ಕೋಟ್(ಗುಜರಾತ್): ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ್ದಕ್ಕಾಗಿ ಜನವರಿ 25ರಂದು 30 ವರ್ಷದ ಕಿಶನ್ ಎಂಬ ಯುವಕನ ಹತ್ಯೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಉದ್ವಿಗ್ನತೆ ಸೃಷ್ಟಿಯಾಗಿದೆ. ಮಲ್ದಾರಿ ಸಮುದಾಯದಿಂದ ರಾಜಕೋಟ್ನಲ್ಲಿ ಪ್ರತಿಭಟನೆ ನಡೆಸಲಾಗ್ತಿದ್ದು, ಈ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಕಿಶನ್ ಭಾರವಾಡ ಕೊಲೆ ಖಂಡಿಸಿ ಮಾಲ್ದಾರಿ ಸಮುದಾಯ ರಾಜ್ಕೋಟ್ನ ರೇಸ್ಕೋರ್ಸ್ನಲ್ಲಿರುವ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಿತ್ತು. ಪ್ರತಿಭಟನೆ ವೇಳೆ ಬಂದ್ಗೆ ಕರೆ ನೀಡಲಾಗಿತ್ತು. ಈ ವೇಳೆ ಕೆಲವರು ಬಲವಂತವಾಗಿ ಅಂಗಡಿ ಮುಚ್ಚಲು ಮುಂದಾಗಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆ. ಪರಿಸ್ಥಿತಿ ನಿಯಂತ್ರಿಸುವ ಉದ್ದೇಶದಿಂದ ಪೊಲೀಸರು ಲಾಠಿಚಾರ್ಜ್ ನಡೆಸಿದ ಹಿನ್ನೆಲೆ ಕೆಲವರು ಗಾಯಗೊಂಡಿದ್ದಾರೆ. ರಾಜ್ಕೋಟ್ ಜೊತೆಗೆ ಅಹಮದಾಬಾದ್, ಸೂರತ್, ಕರ್ಜನ್ ಸೇರಿದಂತೆ ಅನೇಕ ಕಡೆ ಕಿಶನ್ ಕೊಲೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿಗಳು ಸಲ್ಲಿಕೆಯಾಗಿವೆ.
ಅನ್ಯ ಧರ್ಮಕ್ಕೆ ಸಂಬಂಧಿಸಿದಂತೆ ಕಿಶನ್ ಜನವರಿ 6ರಂದು ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಎನ್ನಲಾಗ್ತಿದೆ. ಇದು ವಿವಾದದ ರೂಪ ಪಡೆದುಕೊಳ್ಳುತ್ತಿದ್ದಂತೆ ಕ್ಷಮೆಯಾಚನೆ ಮಾಡಿದ್ದ ವಿಡಿಯೋ ಸಹ ಫೇಸ್ಬುಕ್ನಲ್ಲಿ ಹರಿಬಿಟ್ಟಿದ್ದನು. ಇದರ ಮಧ್ಯೆ ಕೂಡ ಇಬ್ಬರು ಮುಸುಕುಧಾರಿಗಳು ಗುಂಡಿನ ದಾಳಿ ನಡೆಸಿ, ಆತನ ಕೊಲೆ ಮಾಡಿದ್ದರು.
ಇದರ ಬೆನ್ನಲ್ಲೇ ಪ್ರಕರಣ ಮತ್ತಷ್ಟು ವಿವಾದ ಪಡೆದುಕೊಂಡು, ದುಷ್ಕರ್ಮಿಗಳನ್ನ ಬಂಧನ ಮಾಡುವಂತೆ ಮಲ್ದಾರಿ ಸಮುದಾಯ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಇದರಲ್ಲಿ ವಿಶ್ವ ಹಿಂದೂ ಪರಿಷತ್ ಕೂಡ ಭಾಗಿಯಾಗಿದೆ. ಇದೇ ವಿಚಾರವಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಲಾಠಿಚಾರ್ಜ್ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಎಟಿಎಸ್ ಅಧಿಕಾರಿಗಳು ಈಗಾಗಲೇ ಧರ್ಮಗುರುವೊಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ