ETV Bharat / bharat

ಮಲಯಾಳಂ ನಟ ಸುರೇಶ್ ಗೋಪಿ ಸಹೋದರ ಸುನೀಲ್ ಗೋಪಿ ಬಂಧನ: ಕಾರಣ? - ಮಲಯಾಳಂ ನಟ ಸುರೇಶ್ ಗೋಪಿ

ನ್ಯಾಯಾಲಯದಿಂದ ಅಸಿಂಧು ಎಂದು ಘೋಷಣೆ ಮಾಡಿದ್ದ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಮಾಲಿವುಡ್​ ನಟ ಸುರೇಶ್ ಗೋಪಿ ಅವರ ಸಹೋದರ ಸುನೀಲ್ ಗೋಪಿ ಅವರನ್ನು ಕೊಯಮತ್ತೂರು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿ ಕಸ್ಟಡಿಗೆ ಒಪ್ಪಿಸಿದ್ದಾರೆ. ಕೊಯಮತ್ತೂರಿನ ಜಿ ಎನ್ ಮಿಲ್ಸ್ ನಿವಾಸಿ ಗಿರಿಧರನ್ ಅವರು ಕೊಯಮತ್ತೂರು ಜಿಲ್ಲಾ ಅಪರಾಧ ವಿಭಾಗಕ್ಕೆ ದೂರು ನೀಡಿದ್ದರು.

ಮಲಯಾಳಂ ನಟ ಸುರೇಶ್ ಗೋಪಿ ಸಹೋದರ ಸುನೀಲ್ ಗೋಪಿ ಬಂಧನ: ಕಾರಣ?

author img

By

Published : Mar 20, 2022, 10:02 PM IST

ಕೊಯಮತ್ತೂರು(ಕೇರಳ): ಖ್ಯಾತ ಮಲಯಾಳಂ ನಟ ಸುರೇಶ್ ಗೋಪಿ ಅವರ ಸಹೋದರ ಸುನೀಲ್ ಗೋಪಿಯನ್ನು ಕೊಯಮತ್ತೂರಿನಲ್ಲಿ ಭೂ ಹಗರಣ ಪ್ರಕರಣದಲ್ಲಿ ಬಂಧಿಸಲಾಗಿದೆ.

ಮಲಯಾಳಂ ನಟ ಸುರೇಶ್ ಗೋಪಿ ಕೇರಳ ಚಲನಚಿತ್ರೋದ್ಯಮದಲ್ಲಿ ಪ್ರಸಿದ್ಧ ನಟನಾಗಿದ್ದಾರೆ. ತಮಿಳು ಸೇರಿದಂತೆ ವಿವಿಧ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ ಮೂವರು ಸಹೋದರರು.

ನ್ಯಾಯಾಲಯದಿಂದ ಅಸಿಂಧು ಎಂದು ಘೋಷಣೆ ಮಾಡಿದ್ದ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಸುರೇಶ್ ಗೋಪಿ ಅವರ ಸಹೋದರ ಸುನೀಲ್ ಗೋಪಿ ಅವರನ್ನು ಕೊಯಮತ್ತೂರು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿ ಕಸ್ಟಡಿಗೆ ಒಪ್ಪಿಸಿದ್ದಾರೆ. ಕೊಯಮತ್ತೂರಿನ ಜಿಎನ್ ಮಿಲ್ಸ್ ನಿವಾಸಿ ಗಿರಿಧರನ್ ಅವರು ಕೊಯಮತ್ತೂರು ಜಿಲ್ಲಾ ಅಪರಾಧ ವಿಭಾಗಕ್ಕೆ ದೂರು ನೀಡಿದ್ದರು.

ಇದನ್ನೂ ಓದಿ: ಮತ್ತೊಮ್ಮೆ ಮಣಿಪುರ ಸಿಎಂ ಆಗಿ ಬಿರೇನ್​ ಸಿಂಗ್ ಅವಿರೋಧ ಆಯ್ಕೆ

ಕೊಯಮತ್ತೂರಿನ ನವಕರೈ ಪ್ರದೇಶದಲ್ಲಿ ಮಯಿಲ್ ಸಾಮಿ ಎಂಬುವವರಿಗೆ ಸೇರಿದ 4.52 ಎಕರೆ ಭೂಮಿಯನ್ನು ಸುನೀಲ್ ಗೋಪಿ ಖರೀದಿಸಿದ್ದರು. ಆದರೆ, ನ್ಯಾಯಾಲಯವು ಬಾಂಡ್ ನೋಂದಣಿ ಅಸಿಂಧು ಎಂದು ಘೋಷಿಸಿತ್ತು. ಸುನೀಲ್ ನ್ಯಾಯಾಲಯದ ಆದೇಶವನ್ನು ಮರೆಮಾಡಿ ಕೊಯಮತ್ತೂರಿನ ಜಿ ಎನ್ ಮಿಲ್ಸ್ ಪ್ರದೇಶದ ಗಿರಿಧರನ್ ಅವರಿಗೆ ಮಾರಾಟ ಮಾಡಿದ್ದರು. ಗಿರಿಧರನ್ ಅವರು ಜಮೀನಿಗೆ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಸಾಲ ಪಡೆದು ಮುಂಗಡವಾಗಿ 97 ಲಕ್ಷ ರೂ. ನೀಡಿದ್ದರು.

ಜಮೀನಿನ ದಾಖಲೆಗಳನ್ನು ಪರಿಶೀಲಿಸಿದಾಗ ಜಮೀನು ಬೇರೊಬ್ಬರ ಹೆಸರಲ್ಲಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಗಿರಿಧರನ್ ಸುನೀಲ್ ಅವರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಸರಿಯಾದ ಉತ್ತರ ಸಿಗಲಿಲ್ಲವಾದ್ದರಿಂದ ಸುನೀಲ್ ಗೋಪಿ ವಿರುದ್ಧ ಅವರು ದೂರು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.