ಕೊಟ್ಟಾಯಂ: ಜನಪ್ರಿಯ ಮಲಯಾಳಂ ಚಿತ್ರನಟ ಕೊಟ್ಟಾಯಂ ಪ್ರದೀಪ್ (61) ಇಂದು ಬೆಳಗ್ಗೆ ಹೃದಯಾಘಾತದಿಂದ ವಿಧಿವಶರಾದರು.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕೊಟ್ಟಾಯಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹಲವು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ಪ್ರದೀಪ್, ಹಾಸ್ಯ ಪಾತ್ರಗಳ ಮೂಲಕ ಹೆಚ್ಚು ಹೆಸರುವಾಸಿಯಾಗಿದ್ದಾರೆ. 'ಈ ನಾಡು ಇನ್ನಲೇ ವರೇ', 'ಫಿಲಿಪ್ಸ್ ಮತ್ತು ಮಂಕಿ ಪೆನ್', 'ಲಾಲ್ ಬಹದ್ದೂರ್ ಶಾಸ್ತ್ರಿ', 'ಆಡು ಒರು ಭೀಗರ ಜೀವಿ ಆನು' ಮತ್ತು 'ಪುತಿಯ ನಿಯಮಂ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
'ವಿನ್ನೈತ್ತಾಂಡಿ ವರುವಯ್ಯ' ಚಿತ್ರದ ಪಾತ್ರ ಅವರಿಗೆ ವಿಶೇಷ ಜನಮನ್ನಣೆ ಗಳಿಸಿಕೊಟ್ಟಿತ್ತು. ಮಾಯಾ ಅವರನ್ನು ವಿವಾಹವಾಗಿದ್ದ ಪ್ರದೀಪ್ ಕೊಟ್ಟಾಯಂ ಅವರಿಗೆ ಇಬ್ಬರು ಮಕ್ಕಳಿದ್ದಾರೆ.