ಚೆನ್ನೈ(ತಮಿಳುನಾಡು): ಮಕ್ಕಲ್ ನೀಧಿ ಮಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರ ಕಾರಿನ ಮೇಲೆ ವ್ಯಕ್ತಿಯೊಬ್ಬ ದಾಳಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆದರೆ, ಈ ದಾಳಿಯಲ್ಲಿ ಕಮಲ್ ಹಾಸನ್ ಅವರು ಗಾಯಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಕಮಲ್ ಮೇಲೆ ದಾಳಿಗೆ ಮುಂದಾದ ವ್ಯಕ್ತಿಯನ್ನ ಪಕ್ಷದ ಕಾರ್ಯಕರ್ತರು ಹಿಡಿದು ಥಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಿವೃತ್ತ ಐಪಿಎಸ್ ಆಫೀಸರ್ ಎ ಜಿ ಮೌರ್ಯ, ಹಾಸನ್ಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಕಾರಿನ ಗ್ಲಾಸ್ ಡ್ಯಾಮೇಜ್ ಆಗಿದೆ. ದಾಳಿ ಮಾಡಿದ ವ್ಯಕ್ತಿಯನ್ನ ಕಮಲ್ ಹಾಸನ್ ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.
ದಾಳಿ ಮಾಡಿದ ವ್ಯಕ್ತಿಯ ದೃಶ್ಯಾವಳಿಗಳನ್ನ ಸ್ಥಳೀಯ ಚಾನಲ್ವೊಂದು ವರದಿ ಕೂಡಾ ಮಾಡಿದೆ.