ETV Bharat / bharat

ಭಾರತದ ಅರ್ಥವ್ಯವಸ್ಥೆ ಸುಧಾರಣೆ ; ಸವಾಲುಗಳು ಮತ್ತು ಪರಿಹಾರಗಳು - ಹಣಕಾಸಿನ ಕೊರತೆ

ದೇಶಕ್ಕೆ ಈಗ ಜೀವಸೆಲೆಯ ಅಗತ್ಯವಿದೆ. ಅದು ಚೇತರಿಸಿಕೊಂಡ ನಂತರ, ಭಾರತ ಮತ್ತೆ ‘ಸ್ವಾವಲಂಬಿಯಾಗಬಹುದು’ ಹಾಗೂ ಮತ್ತೊಮ್ಮೆ ಪುಟಿದೇಳಬಹುದು.

Making India Raise Again: Challenges and the Way Ahead
ಭಾರತದ ಅರ್ಥವ್ಯವಸ್ಥೆ ಸುಧಾರಣೆ ; ಸವಾಲುಗಳು ಮತ್ತು ಪರಿಹಾರಗಳು
author img

By

Published : May 13, 2021, 10:43 PM IST

ಹೈದರಾಬಾದ್: ಕಳೆದ ವರ್ಷ ಭಾರತವು ಕೋವಿಡ್ -19 ಮೊದಲ ಅಲೆಯ ಹೊಡೆತಕ್ಕೆ ತತ್ತರಿಸಿದ ಸಮಯದಲ್ಲಿ ಜೀವನ ಮತ್ತು ಜೀವನೋಪಾಯ ಎರಡೂ ವಿಷಯಗಳಲ್ಲಿ ಭಾರಿ ನಷ್ಟ ಅನುಭವಿಸಿತು. ಹೆಚ್ಚುತ್ತಿದ್ದ ಸೋಂಕು ತಡೆಯಲು ವಿಧಿಸಲಾದ ಲಾಕ್‌ಡೌನ್‌ ಕ್ರಮಗಳಿಂದ ಉದ್ಯೋಗಗಳು ಕಳೆದು ಹೋದವಲ್ಲದೇ, ಉತ್ಪಾದನೆಯು ಹೊಸ ಕನಿಷ್ಠ ಮಟ್ಟಕ್ಕೆ ಇಳಿಯಿತು. ಈ ಮಧ್ಯೆ ಲಾಕ್​ಡೌನ್​ನಿಂದ ಕುಸಿತವಾದ ಆರ್ಥಿಕತೆಯ ಚೇತರಿಕೆಗಾಗಿ ಕೇಂದ್ರ ಸರ್ಕಾರವು ಮೇ 13, 2020 ರಂದು 20 ಲಕ್ಷ ಕೋಟಿ ರೂಪಾಯಿ ಮೊತ್ತದ ಬೃಹತ್ ‘ಆತ್ಮ ನಿರ್ಭರ್ ಪ್ಯಾಕೇಜ್​’ ಅನ್ನು ಜಾರಿಗೊಳಿಸಿತ್ತು.

2020ರ ಆತ್ಮನಿರ್ಭರ ಪ್ಯಾಕೇಜ್​ ; ಗುರಿ - ಸಾಧನೆ

ಸಣ್ಣ ಹಾಗೂ ಅತಿ ಸಣ್ಣ ಉದ್ಯಮಗಳು ಸೇರಿದಂತೆ ಬೀದಿ ವ್ಯಾಪಾರಿಗಳವರೆಗೆ ಬ್ಯಾಂಕುಗಳು ನೀಡಿದ ಸಾಲಕ್ಕೆ ಸರ್ಕಾರದ ಖಾತರಿಯನ್ನು ನೀಡುವುದು ಹಾಗೂ ಬ್ಯಾಂಕಿಂಗ್​ ವಲಯಕ್ಕೆ ಸಾಕಷ್ಟು ನಗದಿನ ಪ್ರಮಾಣ ಹರಿಯುವಂತೆ ಮಾಡುವುದು ಈ ಪ್ಯಾಕೇಜಿನ ಮುಖ್ಯ ಉದ್ದೇಶವಾಗಿತ್ತು. ಕೃಷಿ, ಕೈಗಾರಿಕೆ ವಲಯದಲ್ಲಿ ಸುಧಾರಣೆ ತರುವುದು ಮತ್ತು ಉದ್ಯಮ ನೀತಿ ಸರಳೀಕರಣಗೊಳಿಸುವುದರ ಜೊತೆಗೆ ಕೃಷಿ ವಲಯದ ಮೂಲಸೌಕರ್ಯ ಸುಧಾರಿಸುವುದು ಸಹ ಈ ಪ್ಯಾಕೇಜಿನ ಗುರಿಗಳಾಗಿದ್ದವು. ಇನ್ನು ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಖಾಸಗಿಯವರ ಪ್ರವೇಶಕ್ಕೆ ದಾರಿಯನ್ನು ಸುಗಮಗೊಳಿಸಲಾಯಿತು.

ಆದರೆ, ಆರಂಭದಲ್ಲಿ ಈ ಪ್ಯಾಕೇಜಿನಿಂದ ಆರ್ಥಿಕ ವಲಯ ಚೇತರಿಸುವ ಲಕ್ಷಣ ತೋರಿತ್ತಾದರೂ, ಪ್ಯಾಕೇಜ್ ಸಂಪೂರ್ಣವಾಗಿ ಜಾರಿಯಾಗುವ ಮುನ್ನವೇ ಆ ನಿರೀಕ್ಷೆ ಕರಗಿ ಹೋಗಿತ್ತು. ಈಗ ಕೋವಿಡ್​ ಎರಡನೇ ಅಲೆಯು ಮೊದಲನೇ ಅಲೆಗಿಂತ ಹೆಚ್ಚು ಪ್ರಬಲವಾಗಿ ಅಪ್ಪಳಿಸಿದ್ದು, ಭಾರಿ ಪ್ರಮಾಣದ ಸಾವುಗಳು ಸಂಭವಿಸುತ್ತಿದ್ದು, ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಸದ್ಯ ಭಾರತದ ಆರ್ಥಿಕ ಪರಿಸ್ಥಿತಿಯು 1952ರ ನಂತರ ಅತಿ ಹೆಚ್ಚು ಮಟ್ಟದ ಕುಸಿತ ಕಂಡಿದೆ.

ಆರ್ಥಿಕ ಬೆಳವಣಿಗೆ ದರ ಪಾತಾಳಕ್ಕೆ

ಭಾರತದ ಅಭಿವೃದ್ಧಿ ದರ ಪ್ರಸಕ್ತ ಸಾಲಿನಲ್ಲಿ ಕುಸಿತ ಕಾಣಲಿದೆ ಎಂದು ಜಾಗತಿಕ ಅರ್ಥ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಆರ್ಥಿಕ ವಿಶ್ಲೇಷಣಾ ಸಂಸ್ಥೆ ಎಸ್​ ಅಂಡ್​​ ಪಿ ಗ್ಲೋಬಲ್, ಭಾರತದ ಆರ್ಥಿಕ ಬೆಳವಣಿಗೆ ಶೇ 11 ರಷ್ಟಿರಲಿದೆ ಎಂದು ಈ ಮುನ್ನ ಹೇಳಿತ್ತು. ಆದರೆ, ಈಗ ಅದನ್ನು ಶೇ 9.8 ಕ್ಕೆ ಇಳಿಸಿದೆ. ಈ ಆರ್ಥಿಕ ಬೆಳವಣಿಗೆ ದರ ಶೇ 9.5 ರಷ್ಟಿರಲಿದೆ ಎಂದು ಫಿಚ್ ಸೊಲ್ಯೂಶನ್ಸ್​ ಅಂದಾಜು ಮಾಡಿದೆ.

ಏರುತ್ತಿರುವ ನಿರುದ್ಯೋಗ ಪ್ರಮಾಣ ಹಾಗೂ ಆರ್ಥಿಕ ಸ್ಥಿತಿಯ ಏರಿಳಿತಗಳಿಂದಾಗಿ ಉಳಿತಾಯದ ಕೊರತೆ ಉಂಟಾಗಿರುವುದು ಈ ಬೆಳವಣಿಗೆ ದರ ಕಡಿತಕ್ಕೆ ಕಾರಣವಾಗಿವೆ. ಈಗಾಗಲೇ ಎರಡನೇ ಕೊರೊನಾ ಅಲೆಯಿಂದ ಕಂಗೆಟ್ಟ ದೇಶಕ್ಕೆ ಮೂರನೇ ಅಲೆಯ ಹೊಡೆತ ಬಂದಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ನಾವು ಅತಿ ಕಠಿಣ ಸಮಯವನ್ನು ನೋಡಬೇಕಾಗುತ್ತದೆ.

ವರ್ಷದ ನಂತರ ಮತ್ತದೇ ಸ್ಥಿತಿ

ಒಂದು ವರ್ಷದ ನಂತರ ನೋಡಿದರೆ ಆಗ ನಾವು ಎಲ್ಲಿದ್ದೆವೋ ಪುನಃ ಅಲ್ಲಿಗೇ ಬಂದು ನಿಂತಿದ್ದೇವೆ. ಕೋವಿಡ್​ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆಯೇ ಮತ್ತೊಂದು ಆರ್ಥಿಕ ಕ್ಯಾಕೇಜ್​ ನೀಡಬೇಕೆಂಬ ಒತ್ತಾಯಗಳು ದೇಶದಲ್ಲಿ ತೀವ್ರವಾಗತೊಡಗುತ್ತವೆ. ಹೀಗಾಗಿ ಈ ಸಮಯದಲ್ಲಿ ನಾವು "ಆತ್ಮ ನಿರ್ಭರ ಭಾರತ" ಕಲ್ಪನೆಯ ಕುರಿತಾಗಿ ಮರುಚಿಂತನೆ ನಡೆಸುವುದು ಅಗತ್ಯವಾಗುತ್ತದೆ. ಆತ್ಮ ನಿರ್ಭರ ಪ್ಯಾಕೇಜ್​ ನೋಡಿದಲ್ಲಿ ಅದು ಮುಖ್ಯವಾಗಿ ಸಾಲ ನೀಡುವುದರ ಮೇಲೆ ಕೇಂದ್ರೀಕೃತವಾಗಿದೆ. ಆದರೆ, ಉದ್ಯಮ ವಲಯಕ್ಕೆ ನೇರವಾಗಿ ಸಬ್ಸಿಡಿ ನೀಡುವ ಕ್ರಮಗಳು ಇಂದು ಸಾಲಕ್ಕಿಂತ ಹೆಚ್ಚು ಅಗತ್ಯವಾಗಿವೆ.

ಸರಕು - ಸೇವೆ ಬೇಡಿಕೆ ಕುಸಿತ; ಕಂಗೆಟ್ಟ ಉದ್ಯಮ ವಲಯ

ಉದ್ಯಮ ಆರಂಭಿಸುವ ಸಮಯದಲ್ಲಿ ಅದು ಭವಿಷ್ಯದಲ್ಲಿ ಲಾಭದಾಯಕವಾಗಿ ಬೆಳವಣಿಗೆ ಹೊಂದುತ್ತದೆ ಎಂಬ ಖಾತರಿ ಇದ್ದಲ್ಲಿ ಮಾತ್ರ ಉದ್ಯಮಿಗಳು ಸಾಲ ಪಡೆಯಲು ಧೈರ್ಯ ಮಾಡುತ್ತಾರೆ. ಕನಿಷ್ಠ ಪಕ್ಷ ಹೂಡಿದ ಬಂಡವಾಳವಾದರೂ ವಾಪಸ್​ ಬರುತ್ತದೆಂಬ ವಿಶ್ವಾಸವಿದ್ದರೂ ಉದ್ಯಮ ಆರಂಭಿಸಲು ಸಾಲ ಪಡೆಯಬಹುದು. ಆದರೆ, ಈಗ ಸಂಪೂರ್ಣ ಆರ್ಥವ್ಯವಸ್ಥೆಯೇ ಏರುಪೇರಿನಿಂದ ಕೂಡಿದ್ದು, ಸರಕುಗಳ ಬಳಕೆ ಹಾಗೂ ಸೇವೆಗಳಿಗೆ ಬೇಡಿಕೆ ಕುಸಿಯಲಿರುವುದು ಖಚಿತ. ಇಂಥ ಸಮಯದಲ್ಲಿ ನಿಜವಾದ ಸವಾಲುಗಳತ್ತ ಗಮನಹರಿಸಿ ಆರ್ಥಿಕ ನೀತಿಗಳನ್ನು ರೂಪಿಸುವುದು ಅಗತ್ಯವಾಗುತ್ತದೆ.

ಅರ್ಥವ್ಯವಸ್ಥೆ ಪುನಶ್ಚೇತನ - ಸವಾಲುಗಳು

  • ಸರಕುಗಳ ಬಳಕೆಯ ಬೇಡಿಕೆ ಹೆಚ್ಚಿಸುವುದೇ ಪ್ರಮುಖ ಸವಾಲಾಗಲಿದೆ. ಬೇಡಿಕೆಯೇ ಇಲ್ಲ ಎಂದಾಗ ಉತ್ಪಾದನೆಯು ತನ್ನಿಂತಾನೇ ಕುಸಿಯುತ್ತದೆ. ಈ ಮೂಲಕ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಒಂದಿಲ್ಲೊಂದು ರೀತಿಯ ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಸರಕುಗಳ ಬೇಡಿಕೆ ಕುಸಿಯುವುದು ಖಚಿತ. ಹೀಗಾಗಿ ಉತ್ಪಾದನಾ ಮಟ್ಟ ಹಾಗೂ ಉದ್ಯೋಗ ಎರಡೂ ಕುಂಠಿತವಾಗಲಿವೆ.
  • ಇನ್ನು ಎರಡನೇ ಕೋವಿಡ್​ ಅಲೆಯ ಸಮಯದಲ್ಲಿ ಆದಾಯ ಸಮಾನತೆಯನ್ನು ಕಾಯ್ದುಕೊಳ್ಳುವುದು ಮತ್ತೊಂದು ಸವಾಲಾಗಲಿದೆ. ಸಮಾಜದ ವಿವಿಧ ಸ್ತರಗಳ ಜನರ ಆದಾಯ ಮಟ್ಟಗಳು ಭಿನ್ನವಾಗಿರುವುದರಿಂದ ಹಾಗೂ ಈಗ ಕೋವಿಡ್​ನಿಂದ ಬಹುತೇಕ ಜನರ ಆದಾಯ ಕುಸಿತವಾಗುವುದರಿಂದ ಆದಾಯದಲ್ಲಿ ಅಸಮಾನತೆ ಉಂಟಾಗಲಿದೆ.
  • ಒಂದು ಕಡೆ ಉದ್ಯೋಗ ವಲಯದ ಕಾರ್ಮಿಕರು ಕೆಲಸ ಕಳೆದುಕೊಂಡು ತಮ್ಮೆಲ್ಲ ಉಳಿತಾಯ ಕರಗಿಸಿಕೊಂಡಿದ್ದರೆ, ಮತ್ತೊಂದೆಡೆ ಕೆಲವೇ ಕೆಲ ಕಾರ್ಪೊರೇಟ್​ ಕಂಪನಿಗಳು ಭಾರಿ ಲಾಭ ಮಾಡಿಕೊಂಡವು. ಇದನ್ನು ನಾವು ಮೊದಲನೇ ಅಲೆಯ ಸಮಯದಲ್ಲಿ ನೋಡಿದ್ದೇವೆ. ಈಗಲಾದರೂ ಸರ್ಕಾರ ಸೂಕ್ತ ಆರ್ಥಿಕ ನೀತಿಗಳನ್ನು ರೂಪಿಸದಿದ್ದರೆ ಎರಡನೇ ಅಲೆಯು ಇಳಿಯುವ ಹೊತ್ತಿಗೆ ಮತ್ತದೇ ಪುನರಾವರ್ತನೆಯಾಗುವ ಸಾಧ್ಯತೆಯಿದೆ.
  • ಇನ್ನು ಗ್ರಾಮೀಣ ಭಾಗದಲ್ಲಿ ಕೂಡ ಆದಾಯ ಮಟ್ಟ ಕುಸಿತವಾಗಿದ್ದು, ಬೇಡಿಕೆಗಳೂ ಇಲ್ಲವಾಗುತ್ತಿವೆ. ಇದರಿಂದ ಸಣ್ಣ ಹಾಗೂ ಅತಿ ಸಣ್ಣ ಉದ್ಯಮ ವಲಯಕ್ಕೆ ಭಾರಿ ಹೊಡೆತ ಬೀಳುವ ನಿರೀಕ್ಷೆಯಿದೆ.
  • ಕೃಷಿ ಹಾಗೂ ಸಣ್ಣ ಹಾಗೂ ಅತಿ ಸಣ್ಣ ಉದ್ಯಮಗಳೇ ದೇಶದ ಶೇ 80 ರಷ್ಟು ದುಡಿಯುವ ವರ್ಗವನ್ನು ಒಳಗೊಂಡಿದ್ದು, ಇವರ ಏಳಿಗೆಯಾದರೆ ಮಾತ್ರ ದೇಶದ ಆರ್ಥಿಕತೆ ಹಳಿಗೆ ಬರಲು ಸಾಧ್ಯ.

ಮುಂದಿನ ದಾರಿ ಏನು?

  • ಸರಕುಗಳ ಬಳಕೆ ಹಾಗೂ ಬೇಡಿಕೆ ಹೆಚ್ಚಿಸಬೇಕಾದಲ್ಲಿ ಬೃಹತ್ ಗಾತ್ರದ ಆರ್ಥಿಕ ಪ್ಯಾಕೇಜ್ ('ಸಾಲ' ಅಲ್ಲ) ಜಾರಿಗೊಳಿಸಬೇಕಾಗುತ್ತದೆ. ಇದರಿಂದ ಉತ್ತರ ಪರಿಣಾಮಗಳು ಕಂಡುಬಂದಿದ್ದನ್ನು ನಾವು ನೋಡಿದ್ದೇವೆ. ನಿರುದ್ಯೋಗಿಗಳಿಗೆ ಕೆಲಸ ಒದಗಿಸುವ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವುದು, ರೈತರಿಗೆ ಇನ್​ಪುಟ್​ ಸಬ್ಸಿಡಿಗಳನ್ನು ಒದಗಿಸುವುದು, ಹಣಕಾಸಿನ ಪ್ರೋತ್ಸಾಹ ಮತ್ತು ಸಣ್ಣ ಚಿಲ್ಲರೆ ವ್ಯಾಪಾರ ಮತ್ತು ಎಂಎಸ್‌ಎಂಇಗಳ ನಿಗದಿತ ವೆಚ್ಚದ ಅವಶ್ಯಕತೆಗಳನ್ನು ಪೂರೈಸುವುದು ಈ ‘ಪ್ಯಾಕೇಜ್​’ನ ಒಂದು ಭಾಗವಾಗಬಹುದು.
  • ಮನರೇಗಾ ಮತ್ತು ಕೃಷಿ ಕ್ಷೇತ್ರಕ್ಕೆ ಕೂಡ ದೊಡ್ಡ ಪ್ರಮಾಣದ ಹಂಚಿಕೆಗಳನ್ನು ಮಾಡುವ ಅವಶ್ಯಕತೆಯಿದೆ. ಇದರಿಂದ ಗ್ರಾಮೀಣ ಬೇಡಿಕೆಯನ್ನು ಹೆಚ್ಚಿಸಬಹುದು. ಆದಾಯದ ಅಸಮಾನತೆಗಳನ್ನು ಕಡಿಮೆ ಮಾಡಲು, ಅಸ್ತಿತ್ವದಲ್ಲಿರುವ ಉದ್ಯೋಗಿಗಳಿಗಾಗಿ ಉದ್ಯೋಗದಾತರಿಗೆ ವೇತನ ಸಹಾಯಧನ ನೀಡಬಹುದು ಮತ್ತು ಹೊಸ ನೇಮಕಾತಿಗಳನ್ನು ನಿರ್ದಿಷ್ಟ ಅವಧಿಗೆ ಪರಿಗಣಿಸಬಹುದು.
  • ಇನ್ನು ಬಡವರಿಗೆ ಮತ್ತು ದುರ್ಬಲರಿಗೆ ನಗದು ವರ್ಗಾವಣೆಯನ್ನು ಮತ್ತಷ್ಟು ಹೆಚ್ಚಿಸುವ ಅವಶ್ಯಕತೆಯಿದೆ. ಅವರು ತಮ್ಮ ಆದಾಯದ ಗರಿಷ್ಠ ಪಾಲನ್ನು ತಮ್ಮ ದೈನಂದಿನ ಅಗತ್ಯಗಳ ಪೂರೈಕೆಗಾಗಿ ಖರ್ಚು ಮಾಡುವುದರಿಂದ ಇದು ಗ್ರಾಹಕರ ಸರಕು ಬೇಡಿಕೆಯನ್ನು ಸುಧಾರಿಸುತ್ತದೆ.
  • ಇದು ಕೃಷಿ ಮತ್ತು ಎಂಎಸ್‌ಎಂಇ ವಲಯ ಎರಡನ್ನೂ ಪುನರುಜ್ಜೀವನಗೊಳಿಸುತ್ತದೆ, ಆದಾಯವನ್ನು ಒದಗಿಸುತ್ತದೆ ಮತ್ತು ನಂತರ ಬಳಕೆಗೆ ಉತ್ತೇಜನ ನೀಡುತ್ತದೆ. ಆದ್ದರಿಂದ ಕೈಯಲ್ಲಿರುವ ಕಾರ್ಯವೆಂದರೆ ಈ ಭಾಗಗಳಿಗೆ ಹಣಕಾಸಿನ ಕ್ರಮಗಳೊಂದಿಗೆ ಸಹಾಯ ಮಾಡುವುದು, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುವುದು.

ಜೀವನ ಮೊದಲು - ನಂತರ ಸ್ವಾವಲಂಬಿ

ಈ ಎಲ್ಲ ಕ್ರಮಗಳಿಂದ ದೇಶದ ಬೊಕ್ಕಸದಲ್ಲಿ ಹಣಕಾಸಿನ ಕೊರತೆ ಖಂಡಿತವಾಗಿಯೂ ಉದ್ಭವಿಸುತ್ತದೆ. ಆದರೆ ಇದು ಬಹುಸಂಖ್ಯಾತ ಭಾರತೀಯರ ಜೀವನ ಮತ್ತು ಜೀವನೋಪಾಯದ ಪ್ರಶ್ನೆಗಿಂತ ದೊಡ್ಡದೆನಿಸುವುದಿಲ್ಲ. ದೇಶಕ್ಕೆ ಈಗ ಜೀವಸೆಲೆಯ ಅಗತ್ಯವಿದೆ. ಅದು ಚೇತರಿಸಿಕೊಂಡ ನಂತರ, ಭಾರತ ಮತ್ತೆ ‘ಸ್ವಾವಲಂಬಿಯಾಗಬಹುದು’ ಹಾಗೂ ಮತ್ತೊಮ್ಮೆ ಪುಟಿದೇಳಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.