ಜಮ್ಮು: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಮೋಟಾರ್ ಸೈಕಲ್‌ನಲ್ಲಿ ಅಳವಡಿಸಲಾಗಿದ್ದ 2.4 ಕೆ.ಜಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಪತ್ತೆ ಹಚ್ಚಿ ನಾಶಪಡಿಸಲಾಗಿದೆ. ಈ ಮುಖಾಂತರ ದೊಡ್ಡ ದುರಂತವೊಂದು ತಪ್ಪಿದೆ.
ಶನಿವಾರ ರಾತ್ರಿ 10 ರ ಸುಮಾರಿಗೆ ಘಟನೆ ಪೊಲೀಸರ ಗಮನಕ್ಕೆ ಬಂದಿದೆ. ನಂತರ ಕಾರ್ಯಾಚರಣೆ ನಡೆಸಿ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಂಬ್ ನಿಷ್ಕೃೀಯ ದಳ ಸ್ಫೋಟಕವನ್ನು ನಾಶಗೊಳಿಸಿದೆ ಎಂದು ಪೂಂಚ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಆಂಗ್ರಾಲ್ ತಿಳಿಸಿದರು.
ಭಯೋತ್ಪಾದಕನೊಬ್ಬ ಇದನ್ನು ಬಿಟ್ಟು ಹತ್ತಿರದ ಅರಣ್ಯ ಪ್ರದೇಶಕ್ಕೆ ತೆರಳಿದ್ದಾನೆಂದು ಶಂಕಿಸಲಾಗಿದೆ. ಆತನನ್ನು ಬಂಧಿಸಲು ಇಡೀ ಪ್ರದೇಶವನ್ನು ಪೊಲೀಸರು ಮತ್ತು ಸೇನೆ ಸುತ್ತುವರೆದಿದ್ದು, ಜಂಟಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.