ETV Bharat / bharat

2022ರ ಆರಂಭದಿಂದಲೇ ಜಿಎಸ್​ಟಿ, ಎಟಿಎಂ, ಎಲ್​ಪಿಜಿ ದರದಲ್ಲಿ ಬದಲಾವಣೆ - ಎಟಿಎಂ ವಿತ್​ ಡ್ರಾ ಶುಲ್ಕ

Price hike by 2022 January: ಜನಸಾಮಾನ್ಯರ ನಿತ್ಯದ ಜೀವನದ ಮೇಲೆ ಪ್ರಮುಖ ಪರಿಣಾಮ ಬೀರುವ ಹಲವು ಹಣಕಾಸಿನ ನಿಯಮಗಳು 2022ರ ಜನವರಿ 1ರಿಂದ ಬದಲಾವಣೆಯಾಗಲಿದ್ದು, ಎಲ್‌ಪಿಜಿ ಸಿಲಿಂಡರ್ ದರ, ಇಂಧನ ಬೆಲೆ, ಎಟಿಎಂ ಕ್ಯಾಶ್​​ ವಿತ್​ಡ್ರಾ ಇದರಲ್ಲಿ ಸೇರಿಕೊಂಡಿವೆ.

Major rules will change from January
Major rules will change from January
author img

By

Published : Dec 28, 2021, 4:20 PM IST

ನವದೆಹಲಿ: ಅನೇಕ ಸಿಹಿ-ಕಹಿ ನೆನಪುಗಳೊಂದಿಗೆ 2021ಕ್ಕೆ ಗುಡ್​ಬೈ ಹೇಳಿ ಇದೀಗ ಎಲ್ಲರೂ ಹೊಸ ವರ್ಷ 2022 ಬರಮಾಡಿಕೊಳ್ಳಲು ಸಜ್ಜುಗೊಂಡಿದ್ದಾರೆ. ಹೊಸ ವರ್ಷದ ಆರಂಭದಲ್ಲೇ ಅನೇಕ ನಿಯಮಗಳು ಬದಲಾಗಲಿದ್ದು, ಜನಸಾಮಾನ್ಯರ ಮೇಲೆ ಇದರ ನೇರ ಪರಿಣಾಮ ಬೀರಲಿದೆ.

ಪ್ರಮುಖವಾಗಿ ಬ್ಯಾಂಕಿಂಗ್​, ಹಣಕಾಸು ವಲಯ, ಎಲ್​ಪಿಜಿ ಸಿಲಿಂಡರ್​​​​​​​, ಇಂಧನ​ ದರ ಸೇರಿದಂತೆ ಪ್ರಮುಖ ವಲಯದಲ್ಲಿ ಮಹತ್ವದ ಬದಲಾವಣೆ ಆಗಲಿವೆ.

ಜ. 1ರಿಂದ ATM ವಿತ್​ ಡ್ರಾ ಶುಲ್ಕದಲ್ಲಿ ಹೆಚ್ಚಳ..

ಹೊಸ ವರ್ಷದ ಆರಂಭದಿಂದಲೇ ಎಟಿಎಂ ವಿತ್​ ಡ್ರಾ ಶುಲ್ಕದಲ್ಲಿ ಬದಲಾವಣೆಯಾಗಲಿದೆ. ಉಚಿತ ವಹಿವಾಟು ಮುಕ್ತಾಯಗೊಂಡ ಬಳಿಕ ಪ್ರತಿ ವಿತ್​​ ಡ್ರಾ ಮೇಲೆ 21ರೂ. ಪಾವತಿ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಳ್ಳಲಿದೆ. ಇಷ್ಟು ದಿನ 20ರೂ. ಅಕೌಂಟ್​ನಿಂದ ಕಟ್​​ ಆಗುತ್ತಿತ್ತು.

ಇದನ್ನೂ ಓದಿರಿ: ಬ್ಯಾಡ್ಮಿಂಟನ್​ ಆಟಗಾರ್ತಿ ಆತ್ಮಹತ್ಯೆ.. ಸಾವಿಗೂ ಮುನ್ನ ಸಹೋದರಿಗೆ ಬಂತು WhatsApp ಸಂದೇಶ!

ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಬದಲಾವಣೆ..

ಪ್ರತಿ ತಿಂಗಳ ಆರಂಭದಲ್ಲಿ ಅಡುಗೆ ಅನಿಲ ದರದಲ್ಲಿ ಬದಲಾವಣೆ ಕಂಡು ಬರುತ್ತಿದ್ದು, ಜನವರಿಯಲ್ಲೂ ಎಲ್​​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಹೆಚ್ಚಳ ಕಂಡು ಬರಲಿದೆ. ಕಳೆದ ಡಿಸೆಂಬರ್​​ ತಿಂಗಳಲ್ಲಿ ಸಿಲಿಂಡರ್​ ಬೆಲೆಯಲ್ಲಿ ಗಮನಾರ್ಹವಾದ ಏರಿಕೆ ಕಂಡು ಬಂದಿದ್ದು, ಇದೀಗ ಹೊಸ ವರ್ಷದಂದೇ ಮತ್ತೊಮ್ಮೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

GST ಪಾವತಿ ಮಾಡದಿದ್ದರೆ ರಿಟರ್ನ್​​ ಸಲ್ಲಿಸಲು ಅಸಾಧ್ಯ..

ಡಿಸೆಂಬರ್​ 31ರೊಳಗೆ ಮಾಸಿಕ ಜಿಎಸ್​ಟಿ ಪಾವತಿ ಮಾಡದಿದ್ದರೆ, ಹೊಸ ವರ್ಷದಿಂದ GSTR-1 ಮಾರಾಟದ ರಿಟರ್ನ್​​​​ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಕಳೆದ ಕೆಲ ದಿನಗಳ ಹಿಂದೆ ನಡೆದ GST ಕೌನ್ಸಿಲ್​ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಇಂಧನ ದರಗಳಲ್ಲಿ ಬದಲಾವಣೆ : ಇಂಧನದ ಚಿಲ್ಲರೆ ದರವನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಈಗಾಗಲೇ ಕಚ್ಚಾ ತೈಲ ಬೆಲೆ ಏರಿಕೆಯ ಮಧ್ಯೆ ಭಾರತದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಜನವರಿ ತಿಂಗಳಲ್ಲೂ ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಬದಲಾವಣೆ ಕಂಡು ಬರಬಹುದು ಎನ್ನಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.