ETV Bharat / bharat

ಲೈಸೆನ್ಸ್​ ಬಂದೂಕು, ಒಡವೆ, ನಗದು ಸೇರಿದಂತೆ ಟಿಕ್ ಟಾಕ್​ ​ಸ್ಟಾರ್​ ಮನೆಯಲ್ಲಿ ಭಾರಿ ಕಳ್ಳತನ! - ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಮನೆ ಕಳ್ಳತನ ಸುದ್ದಿ,

ಲೈಸೆನ್ಸ್​ ಬಂದೂಕು, ಒಡವೆ ಸೇರಿದಂತೆ ಬಿಜೆಪಿ ನಾಯಕಿಯೂ ಆಗಿರುವ ಟಿಕ್​ ಟಾಕ್​ ಸ್ಟಾರ್ ಆಗಿರುವ ಸೋನಾಲಿ ಫೋಗಾಟ್​​ ಮನೆಯಲ್ಲಿ ಭಾರಿ ಕಳ್ಳತನವಾಗಿದೆ.

Robbery In BJP Leader Sonali Phogat House, Major Robbery In BJP Leader Sonali Phogat House, Major Robbery In BJP Leader Sonali Phogat House at Hisar, BJP Leader Sonali Phogat, BJP Leader Sonali Phogat news, ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಮನೆ ಕಳ್ಳತನ,  ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಮನೆಯಲ್ಲಿ ಭಾರೀ ಕಳ್ಳತನ, ಹಿಸಾರ್​ನಲ್ಲಿ  ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಮನೆ ಕಳ್ಳತನ,  ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಮನೆ ಕಳ್ಳತನ ಸುದ್ದಿ,  ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಸುದ್ದಿ,
ಸಂಗ್ರಹ ಚಿತ್ರ
author img

By

Published : Feb 17, 2021, 8:43 AM IST

ಹಿಸಾರ್: ಹರಿಯಾಣ ಮೂಲದ ಬಿಜೆಪಿ ಮುಖಂಡೆ ಮತ್ತು ಟಿಕ್​ಟಾಕ್​ ತಾರೆ ಸೋನಾಲಿ ಫೋಗಾಟ್ ಮನೆಯಲ್ಲಿ ಭಾರಿ ಕಳ್ಳತನವಾಗಿದೆ.

ಚಿನ್ನಾಭರಣ, ಲೈಸೆನ್ಸ್​ ರಿವಾಲ್ವರ್, 10 ಲಕ್ಷ ರೂ. ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ತಿಂಗಳ 9 ರಂದು ಮನೆಗೆ ಬೀಗ ಹಾಕಿ ಚಂಡೀಗಢ್​ಗೆ ಹೋಗಿದ್ದೆ. ಫೆಬ್ರವರಿ 15 ರಂದು ಹಿಸಾರ್​ನಲ್ಲಿರುವ ತಮ್ಮ ನಿವಾಸಕ್ಕೆ ಮರಳಿದ್ದಾಗ ಮನೆಯ ಬೀಗಗಳು ಮುರಿದುಹೋಗಿದ್ದವು. ಮನೆಯೊಳಗೆ ನೋಡಿದಾಗ ಸುಮಾರು 10 ಲಕ್ಷ ನಗದು, ಬಂಗಾರ, ಗನ್​ ಸೇರಿದಂತೆ ಬೆಲೆಬಾಳುವ ವಸ್ತುಗಳ ಕಳ್ಳತವಾಗಿದೆ ಎಂದು ಮಾಜಿ ಬಿಗ್​ಬಾಸ್​ ಸ್ಪರ್ಧಿಯೂ ಆಗಿರುವ ಸೋನಾಲಿ ಫೋಗಾಟ್​ ಪೊಲೀಸರಿಗೆ ದೂರು ನೀಡಿದ್ದಾರೆ.

ಸೋನಾಲಿ ಮನೆ ಸುತ್ತಮುತ್ತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದ್ರೆ ಖತರ್ನಾಕ್​ ಕಳ್ಳರು ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್)ನ್ನು ಸಹ ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಳ್ಳತನದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಚ್‌ಟಿಎಂ ಪೊಲೀಸ್​ ಠಾಣೆಯ ಅಧಿಕಾರಿ ಸುಖ್ಜಿತ್ ಹೇಳಿದ್ದಾರೆ.

2019 ರಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆದಂಪೂರ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೋನಾಲಿ ಫೋಗಾಟ್​ ಕಾಂಗ್ರೆಸ್ ಅಭ್ಯರ್ಥಿ ಎದುರು ಪರಾಜಯಗೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.