ETV Bharat / bharat

ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಳ : ಪ್ರಮುಖ ಧಾರ್ಮಿಕ ಕೇಂದ್ರಗಳು ಬಂದ್ - ಮಹಾರಾಷ್ಟ್ರದ ದೇವಸ್ಥಾನಗಳು ಬಂದ್

ರಾಜ್ಯದಲ್ಲಿ ಕೆಲವು ಪ್ರಮುಖ ದೇವಾಲಯಗಳನ್ನ ಮುಚ್ಚಲಾಗಿದ್ದರೂ ಅಂಬಾಬಾಯಿ ದೇವಸ್ಥಾನ ಕುರಿತು ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದುವರೆಗೆ ಯಾವುದೇ ಭಕ್ತರು ಮತ್ತು ಅರ್ಚಕರಲ್ಲಿ ಕೋವಿಡ್​ ಸೋಂಕು ಕಂಡು ಬಂದಿಲ್ಲ..

Corona spurt: Vitthal mandir in Pandharpur closed
ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಳ
author img

By

Published : Feb 22, 2021, 9:23 PM IST

ಮುಂಬೈ : ಕೋವಿಡ್​ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ದೇವಾಲಯಗಳು ಸೇರಿ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಕೋವಿಡ್​ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಈ ಸ್ಥಳಗಳಲ್ಲಿ ನಿಯಮ ಬಿಗಿಗೊಳಿಸಲು ಸರ್ಕಾರ ಮುಂದಾಗಿದೆ.

ಕೋವಿಡ್ ಹಿನ್ನೆಲೆ ಪಂಡರಾಪುರದ ಪ್ರಸಿದ್ಧ ಶ್ರೀ ವಿಠ್ಠಲ್ ರುಕ್ಮುಣಿ ಮಠ-ಮಂದಿರವನ್ನು ಎರಡು ದಿನಗಳ ಕಾಲ ಮುಚ್ಚಲಾಗಿದೆ. ಮಾಘ ಕಾರ್ಯಕ್ರಮ ಮತ್ತು ಆಷಾಢ- ಕಾರ್ತಿಕ ಯಾತ್ರೆ (ತೀರ್ಥಯಾತ್ರೆ) ರದ್ದುಗೊಳಿಸಲಾಗಿದೆ. ನಾಳೆ ಏಕಾದಶಿ ದಿನ ಪಂಡರಾಪುರದಲ್ಲಿ ಕರ್ಫ್ಯೂ ಇರಲಿದೆ.

ಓದಿ : ಮಹಾರಾಷ್ಟ್ರದಲ್ಲಿ ಕೋವಿಡ್​ ಅಬ್ಬರ: ಧೂಳಖೇಡ ಗಡಿಯಲ್ಲಿ ತಪಾಸಣೆ ಹೆಚ್ಚಿಸಿದ ಆರೋಗ್ಯ ಸಿಬ್ಬಂದಿ

ದೇವಾಲಯದ ಆವರಣದಲ್ಲಿ ಸೀಮಿತಿ ಸಂಖ್ಯೆಯ ಭಕ್ತರು ಮಾತ್ರ ಇದ್ದು, ಜನರನ್ನು ತಡೆಯಲು ಪೊಲೀಸರನ್ನು ನೇಮಿಸಲಾಗಿದೆ. ಪಂಡರಾಪುರಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ. ರಾಜ್ಯ ಸರ್ಕಾರಿ ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಕೊಲ್ಲಾಪುರದ ಅಂಬಾಬಾಯಿ ದೇವಸ್ಥಾನದಲ್ಲೂ ಕೋವಿಡ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

ರಾಜ್ಯದಲ್ಲಿ ಕೆಲವು ಪ್ರಮುಖ ದೇವಾಲಯಗಳನ್ನ ಮುಚ್ಚಲಾಗಿದ್ದರೂ ಅಂಬಾಬಾಯಿ ದೇವಸ್ಥಾನ ಕುರಿತು ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದುವರೆಗೆ ಯಾವುದೇ ಭಕ್ತರು ಮತ್ತು ಅರ್ಚಕರಲ್ಲಿ ಕೋವಿಡ್​ ಸೋಂಕು ಕಂಡು ಬಂದಿಲ್ಲ.

ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನ ಸಮಿತಿ ಅಧ್ಯಕ್ಷ ಮಹೇಶ್ ಜಾಧವ್ ಮಾತನಾಡಿ, ಆಡಳಿತ ಮಂಡಳಿಯು ಯಾವುದೇ ನಿರ್ದೇಶನಗಳನ್ನು ನೀಡಿಲ್ಲವಾದ್ದರಿಂದ, ದೇವಾಲಯವು ಭಕ್ತರಿಗಾಗಿ ತೆರೆದಿರುತ್ತದೆ. ಆದರೆ, ನಿಯಮಗಳನ್ನು ಹೆಚ್ಚು ಕಠಿಣವಾಗಿ ಜಾರಿಗೆ ತರಲಾಗುವುದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.