ETV Bharat / bharat

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ವ್ಯಾಪ್ತಿಗೆ ಕ್ರಿಪ್ಟೋ ಕರೆನ್ಸಿ ವ್ಯವಹಾರ: ಕೇಂದ್ರದ ಅಧಿಸೂಚನೆ - ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಕ್ರಿಪ್ಟೋ ಕರೆನ್ಸಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ವ್ಯಾಪ್ತಿಗೆ ತರುವ ಬಗ್ಗೆ ಕೇಂದ್ರ ವಿತ್ತ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

major-decision-by-centre-cryptocurrency-other-digital-assets-to-come-under-money-laundering-law
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ವ್ಯಾಪ್ತಿಗೆ ಕ್ರಿಪ್ಟೋ ಕರೆನ್ಸಿ ವ್ಯವಹಾರ: ಕೇಂದ್ರದ ಅಧಿಸೂಚನೆ
author img

By

Published : Mar 8, 2023, 5:11 PM IST

ನವದೆಹಲಿ: ಕ್ರಿಪ್ಟೋ ಕರೆನ್ಸಿ ಸಂಬಂಧ ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಕ್ರಿಪ್ಟೋ ಕರೆನ್ಸಿ ವ್ಯವಹಾರಗಳನ್ನು ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ ತಡೆ) ನಿಬಂಧನೆಗಳ ಅಡಿ ತಂದಿದೆ. ಹೀಗಾಗಿ ಡಿಜಿಟಲ್ ಆಸ್ತಿಗಳ ವಲಯದ ಮೇಲಿನ ಹಿಡಿತವನ್ನು ಮತ್ತಷ್ಟು ಬಲಪಡಿಸಿದಂತೆ ಆಗಿದೆ.

ಎಲ್ಲ ಕ್ರಿಪ್ಟೋ ವ್ಯವಹಾರಗಗಳಿಗೆ ಸಂಬಂಧಿಸಿದ ವಿನಿಮಯಗಳು, ಕಸ್ಟಡಿಯನ್​ಗಳು, ವ್ಯಾಲೆಟ್ ಪೂರೈಕೆದಾರರು ಸೇರಿದಂತೆ ಇತ್ಯಾದಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ-2002 (PMLA) ಅಡಿ ಬರುತ್ತವೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ಮನಿ ಲಾಂಡರಿಂಗ್ ಆಕ್ಟ್ 2002 (2003ರ 15)ರ ಸೆಕ್ಷನ್ 2ರ ಉಪ-ವಿಭಾಗ (I)ನ ಷರತ್ತು (ಎಸ್​​ಎ)ನ ಉಪ-ಕಲಂ (vi) ಮೂಲಕ ನೀಡಲಾದ ಅಧಿಕಾರಗಳನ್ನು ಚಲಾಯಿಸುವಾಗ (ಇನ್ನು ಮುಂದೆ ಕಾಯ್ದೆ ಎಂದು ಉಲ್ಲೇಖಿಸಲಾಗಿದೆ). ಈ ಮೂಲಕ ಕ್ರಿಪ್ಟೋ ಕರೆನ್ಸಿ ವ್ಯವಹಾರದ ಸಂದರ್ಭದಲ್ಲಿ ಇನ್ನೊಬ್ಬ ಸಹಜ ಅಥವಾ ಕಾನೂನುಬದ್ಧ ವ್ಯಕ್ತಿಗಾಗಿ ಅಥವಾ ಅವರ ಪರವಾಗಿ ನಡೆಸಿದಾಗ ಈ ಉಪ ಕಲಂನ ಉದ್ದೇಶಗಳಿಗಾಗಿ ನಡೆಸುವ ಚಟುವಟಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ನಿಬಂಧನೆಗಳು ಏನು?: 1. ವರ್ಚುಯಲ್ ಡಿಜಿಟಲ್ ಸ್ವತ್ತುಗಳು ಮತ್ತು ಫಿಯೆಟ್ ಕರೆನ್ಸಿಗಳ ನಡುವಿನ ವಿನಿಮಯ; 2. ವರ್ಚುವಲ್ ಡಿಜಿಟಲ್ ಸ್ವತ್ತುಗಳ ಒಂದು ಅಥವಾ ಹೆಚ್ಚಿನ ರೂಪಗಳ ನಡುವೆ ವಿನಿಮಯ; 3, ವರ್ಚುಯಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆ; 4. ವರ್ಚುವಲ್ ಡಿಜಿಟಲ್ ಸ್ವತ್ತುಗಳ ಸಂರಕ್ಷಣೆ ಅಥವಾ ನಿರ್ವಹಣೆ ಅಥವಾ ವರ್ಚುವಲ್ ಡಿಜಿಟಲ್ ಸ್ವತ್ತುಗಳ ಮೇಲೆ ನಿಯಂತ್ರಣವನ್ನು ಸಕ್ರಿಯಗೊಳಿಸುವ ಉಪಕರಣಗಳು; 5. ವಿತರಕರ ಕೊಡುಗೆ ಮತ್ತು ವರ್ಚುವಲ್ ಡಿಜಿಟಲ್ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದ ಹಣಕಾಸು ಸೇವೆಗಳಲ್ಲಿ ಭಾಗವಹಿಸುವಿಕೆ ಮತ್ತು ಒದಗಿಸುವಿಕೆಯ ನಿಬಂಧನೆಗಳ ಅಡಿಯಲ್ಲಿ ಬರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ,

ವಿವರಣೆ: "ವರ್ಚುಯಲ್ ಡಿಜಿಟಲ್ ಆಸ್ತಿ" 1961 (1961ರ 43) ಆದಾಯ ತೆರಿಗೆ ಕಾಯ್ದೆಯ ವಿಭಾಗ 2ರ ಷರತ್ತು (47A)ನಲ್ಲಿ ನಿಗದಿಪಡಿಸಲಾದ ಅದೇ ಅರ್ಥವನ್ನು ಹೊಂದಿರುತ್ತದೆ ಎಂಬುವುದೇ ಈ ಅಧಿಸೂಚನೆಯ ಉದ್ದೇಶವಾಗಿದೆ ಎಂದು ವಿತ್ತ ಸಚಿವಾಲಯ ಹೇಳಿದೆ. ಹೊಸ ಅಧಿಸೂಚನೆಯೊಂದಿಗೆ ಬ್ಯಾಂಕ್‌ಗಳು ಹಾಗೂ ಸ್ಟಾಕ್ ಬ್ರೋಕರ್‌ಗಳಂತಹ ನಿಯಂತ್ರಿತ ಸಂಸ್ಥೆಗಳಿಗೆ ಅನ್ವಯಿಸುವಂತೆಯೇ ಡಿಜಿಟಲ್ ಆಸ್ತಿ ಪ್ಲಾಟ್‌ಫಾರ್ಮ್‌ಗಳಲ್ಲಿ ಮನಿ ಲಾಂಡರಿಂಗ್ ವಿರೋಧಿ ಮಾನದಂಡಗಳನ್ನು ಹೇರುವ ಜಾಗತಿಕ ಕ್ರಮವನ್ನು ಕೇಂದ್ರ ಸರ್ಕಾರ ಅನುಸರಿಸಿದೆ.

ಇದರ ಭಾಗವಾಗಿ 2022ರಲ್ಲಿ ಕ್ರಿಪ್ಟೋ ಮೇಲೆ ಕಟ್ಟುನಿಟ್ಟಾದ ತೆರಿಗೆ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. 2023-24ರ ಕೇಂದ್ರ ಬಜೆಟ್ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಡಿಜಿಟಲ್ ಆಸ್ತಿಗಳ ವರ್ಗಾವಣೆಯಿಂದ ಬರುವ ಯಾವುದೇ ಆದಾಯವನ್ನು ಶೇ.30ರಷ್ಟು ದರದಲ್ಲಿ ತೆರಿಗೆ ವಿಧಿಸಲಾಗುವುದು ಎಂದು ಘೋಷಿಸಿದ್ದರು.

ಇದನ್ನೂ ಓದಿ: ಕ್ರಿಪ್ಟೋ ಕರೆನ್ಸಿ ಹಣ ಹೂಡಿದರೆ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ಕೋಟ್ಯಂತರ ವಂಚನೆ : 17 ಕೋಟಿ ರೂಪಾಯಿ ಜಪ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.